ಭೀಮಾತೀರದಲ್ಲಿ ಅಕ್ರಮ ಪಿಸ್ತೂಲ್ ನಿಯಂತ್ರಣಕ್ಕೆ ಬಿಗಿ ಕ್ರಮ : ಅಲೋಕ್ ಕುಮಾರ್
* ಭೀಮಾತೀರದಲ್ಲಿ ಅಕ್ರಮ ಪಿಸ್ತೂಲ್ ಸದ್ದು
* ಭೀಮಾತೀರದಲ್ಲಿ ಅಕ್ರಮ ಪಿಸ್ತೂಲ್ ನಿಯಂತ್ರಣಕ್ಕೆ ಬಿಗಿ ಕ್ರಮ
* ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ
ಕಲಬುರಗಿ, (ಜು.19: ಭೀಮಾತೀರದಲ್ಲಿ ಅಕ್ರಮ ವೆಪನ್ ಗಳ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಇಂದು(ಮಂಗಳವಾರ) ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿದ ಅಲೋಕಕುಮಾರ್, ಭೀಮಾತೀರದಲ್ಲಿ ಅಕ್ರಮ ವೆಪನ್ ಗಳ ನಿಯಂತ್ರಣ ತಕ್ಕಮಟ್ಟಿಗೆ ಆಗಿದೆ. ಅದಾಗ್ಯೂ ಸಂಪೂರ್ಣ ನಿರ್ಮೂಲನೆ ಆಗಿದೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ ಆ ಭಾಗದಲ್ಲಿನ ಅಕ್ರಮ ವ್ಯಪನ್ ಗಳ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ಕಲಬುರಗಿ, ವಿಜಯಪುರ ಭಾಗಗಳಲ್ಲಿ ಅಕ್ರಮ ವೆಪನ್‌ಗಳ ಹಾವಳಿ ಇನ್ನೂ ಇದೆ. ಅಕ್ರಮ ವೆಪನ್‌ಗಳ ಮಟ್ಟಕ್ಕೆ ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ಳಲು ಸೂಚಿಸಿದ್ದೇನೆ. ಅಫಜಲಪುರ ಮತ್ತು ಚಡಚಣ ಭಾಗದಲ್ಲಿ ಅಕ್ರಮ ವೆಪನ್ ಹಾವಳಿ ನಿಯಂತ್ರಣಕ್ಕಾಗಿ ಇಂದು ಅಫಜಲಪುರ ಮತ್ತು ಚಡಚಣ ಪೊಲೀಸ್ ಠಾಣೆಗಳಿಗೆ ನಾನೇ ಭೇಟಿ ನೀಡುತ್ತಿದ್ದೇನೆ. ಅಕ್ರಮ ವೆಪನ್‌ಗಳಿಂದ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತವೆ. ಇದನ್ನು ಮಟ್ಟ ಹಾಕಲೇಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಪೊಲೀಸ್ ಫೈರಿಂಗ್
ಪರವಾನಿಗೆ ಒಬ್ಬರದ್ದು, ಬಳಕೆ ಇನ್ನೊಬ್ಬರು ಸಲ್ಲದು
ಬಂದೂಕನ್ನ ಪರವಾನಿಗೆ ಪಡೆದವರು ಒಬ್ರು, ಬಳಸುತ್ತಿರುವರು ಇನ್ನೊಬ್ಬರು. ಇಂತಹ ಚಟುವಟಿಕೆಗಳನ್ನ ಗಂಭೀರವಾಗಿ ಪರಿಗಣಿಸಲಾಗುವುದು. ಈ ಹಿಂದೆ ಪಡೆದ ಗನ್ ಲೈಸನ್ಸ್‌ಗಳ ಮರುಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ಕೋಕಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಕೇಸ್‌ಗಳು ಸ್ಟ್ರಾಂಗ್ ಇದ್ದಾಗ ಕೋಕಾ ಆ್ಯಕ್ಟ್ ಹಾಕಲು ಬರುತ್ತೆ. ಅಗತ್ಯ ಸಂದರ್ಭದಲ್ಲಿ ಕೋಕಾ ಬಳಕೆ ಮಾಡಲಾಗುವುದು ಎಂದರು.
ಯಾವುದೇ ರೌಡಿಗಳನ್ನ ರೌಡಿ ಪಟ್ಟಿಯಿಂದ ಕೈಬಿಡಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಮರ್ಥಿಸಿಕೊಂಡ ಅವರು, ವಿನಾಕಾರಣ ರೌಡಿಗಳನ್ನ ರೌಡಿ ಪಟ್ಟಿಯಿಂದ ಕೈಬಿಟ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಲೋಕಕುಮಾರ , ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಕ್ರಮ ಮರಳು ಗಣಿಗಾರಿಕೆ ತಡೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಅದಾಗ್ಯೂ ಮರಳುಗಾರಿಕೆ ತಡೆಗಟ್ಟಲು ಕೇವಲ ಪೊಲೀಸರಿಂದ ಸಾಧ್ಯವಿಲ್ಲ. ಗಣಿಗಾರಿಕೆ, ಕಂದಾಯ, ಆರ್‌ಟಿಓ ಇಲಾಖೆಗಳ ಸಹಕಾರ ಅಗತ್ಯ. ಎಲ್ಲವೂ ಪೊಲೀಸರಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.