ಶೃಂಗೇರಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿಗಳಿಗೆ 20 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ 15 ವರ್ಷದ ಅಪ್ರಾಪ್ತೆ ಮೇಲಿನ ರೇಪ್ ಪ್ರಕರಣಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಬಾಲಕಿಯ ತಾಯಿ ಸೇರಿದಂತೆ ನಾಲ್ವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.11) : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ 15 ವರ್ಷದ ಅಪ್ರಾಪ್ತೆ ಮೇಲಿನ ರೇಪ್ ಪ್ರಕರಣಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಬಾಲಕಿಯ ತಾಯಿ ಸೇರಿದಂತೆ ನಾಲ್ವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿಯ ತಾಯಿ ಗೀತಾ, ಗಿರೀಶ್ ಮತ್ತು ದೇವಿ ಶರಣ್‌ಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಅಭಿನಂದನ್ ಅಲಿಯಾನ್ ಸ್ಮಾಲ್ ಅಭಿಗೆ 22 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹಣಕ್ಕಾಗಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣ! ತಾಯಿ ಸೇರಿ ನಾಲ್ವರು ದೋಷಿ ಎಂದು ಕೋರ್ಟ್ ತೀರ್ಪು
ಏನಿದು ಪ್ರಕರಣ :
2021ರ ಜನವರಿ 27ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಅತ್ಯಂತ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿತ್ತು. 15 ವರ್ಷದ ಬಾಲಕಿಯೊಬ್ಬಳ ಮೇಲೆ 52 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ ಅತ್ಯಂತ ಹೇಯ ಕೃತ್ಯವದು. ಅತ್ಯಾಚಾರ ಮಾಡಿದ್ದು ಕೂಡಾ ಒಬ್ಬಿಬ್ಬರಲ್ಲ. 53 ಮಂದಿ ಅತ್ಯಾಚಾರ ಮಾಡಿದ್ದಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ ಈ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮತ್ತೊಂದು ಭಯಾನಕ ಅಂಶವೆಂದರೆ, ಇದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವೇ ಆದರೂ ಆ ಹುಡುಗಿಯನ್ನು ಈ ರೀತಿಯಾಗಿ ಅತ್ಯಾಚಾರದ ಭೀಭತ್ಸ ಕೃತ್ಯಕ್ಕೆ ಒಳಪಡಿಸಿದ್ದು ಸ್ವತಃ ಆಕೆಯ ತಾಯಿ ಗೀತಾ ಎಂಬುದು ಬೆಳಕಿಗೆ ಬಂದಿತ್ತು.
2020ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಈ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಸ್ವತಃ ತಾಯಿಯೇ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎನ್ನುವ ಅಂಶ ಬಳಿಕ ಬೆಳಕಿಗೆ ಬಂತು. ಪೊಲೀಸರು 53 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮಾಹಿತಿ ಮೇರೆಗೆ 17 ಜನರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಂತೆ ಒಬ್ಬರ ಮೇಲೊಬ್ಬರಂತೆ ಒಟ್ಟು 53 ಜನರನ್ನ ಬಂಧಿಸಿದ್ದರು. ಅಪ್ರಾಪ್ತೆ ಮೇಲಿನ ರೇಪ್ ಕೇಸ್ ಸಂಬಂಧ ಪೊಲೀಸರು 53 ಜನರ ವಿರುದ್ದ 39 ಎಫ್.ಐ.ಆರ್. ದಾಖಲಿಸಿದ್ದರು.
ನ್ಯಾಯಾಲಯ ಮೂರು ವರ್ಷಗಳ ಕಾಲ ಪ್ರತಿಯೊಂದು ಎಫ್.ಐ.ಆರ್. ಅನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. 53 ಜನರ ಪೈಕಿ 49 ಜನ ನಿರ್ದೋಷಿಗಳು ಎಂದು ಹೇಳಿದ್ದ ಕೋರ್ಟ್ ಆಕೆ ತಾಯಿ ಗೀತಾ, ಆಕೆಯನ್ನ ಮೊದಲ ಬಾರಿಗೆ ಬಳಸಿಕೊಂಡ ಅಭಿ ಹಾಗೂ ಆಕೆಯನ್ನ ಬಲವಂತವಾಗಿ ಆ ವೃತ್ತಿಗೆ ದೂಡಿದ ಗಿರೀಶ್ ಹಾಗೂ ದೇವಿಶರಣ್ ಎಂಬುವರು ಅಪರಾಧಿಗಳು ಎಂದು ತೀರ್ಮಾನಿಸಿ ನಾಲ್ವರಿಗೂ 20 ವರ್ಷ ಶಿಕ್ಷೆ ಪ್ರಕಟಿಸಿದೆ.
ಉಳಿದವರಿಗೆ ಯಾಕೆ ಶಿಕ್ಷೆ ಇಲ್ಲ?
ಇನ್ನು ಘಟನೆ ಸಂಬಂಧ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ ಎಂದು ಸ್ಥಳಿಯರು ಅಸಮಾಧಾನ ಹೊರಹಾಕಿದ ಹಿನ್ನೆಲೆ ಪಿಎಸ್ಐ ಕೀರ್ತಿಕುಮಾರ್ ಎತ್ತಂಗಡಿಯಾದ್ರೆ, ಸಿಪಿಐ ಸಿದ್ರಾಮಪ್ಪ ಸಸ್ಪೆಂಡ್ ಆಗಿದ್ರು. ಎಎಸ್ಪಿ ಶೃತಿ ತಿಂಗಳುಗಟ್ಟಲೇ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ತನಿಖೆ ನಡೆಸಿದ್ರು. ಆದ್ರೀಗ, ಕೋರ್ಟ್ ಮೂರು ವರ್ಷದಲ್ಲಿ 39 ಪ್ರಕರಣಗಳ 53 ಜನರನ್ನೂ ತನಿಖೆ ನಡೆಸಿ 4 ಜನ ಅಪರಾಧಿಗಳು, 49 ಜನ ನಿರಪರಾಧಿಗಳು ಎಂದು ನಿರ್ಧರಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕರಣ ಆಕೆಯನ್ನ ವೇಶ್ಯಾವಾಟಿಕೆಗೆ ದೂಡಿದವರು, ಆಕೆಯನ್ನ ಆ ಕೆಲಸಕ್ಕೆ ಪ್ರೇರೇಪಿಸಿದವರದ್ದು ಮಾತ್ರ ತಪ್ಪು ಎಂದು ತೀರ್ಮಾನಿಸಿದೆ.
ಚಿಕ್ಕಬಳ್ಳಾಪುರ: ಸಂಬಂಧಿಕನಿಂದಲೇ ರೇಪ್, 7ನೇ ಕ್ಲಾಸ್ ಹುಡುಗಿ 6 ತಿಂಗಳ ಗರ್ಭಿಣಿ
ಹಣ ನೀಡಿ ಕಸ್ಟಮರ್ ಆಗಿ ಹೋಗೋದು ತಪ್ಪಲ್ಲ. ಆದ್ರೆ, ಬಲವಂತವಾಗಿ, ಬೆದರಿಸಿ ಆ ಕೆಲಸ ಮಾಡಿಸೋದು ತಪ್ಪು ಎಂದು ಅಭಿ ಎಂಬಾತನಿಗೆ 22 ಲಕ್ಷ ಹಾಗೂ ಬಾಲಕಿ ತಾಯಿ ಗೀತಾ, ಗಿರೀಶ್ಹಾಗೂ ದೇವಿ ಶರಣ್ ಎಂಬುವರಿಗೆ 20 ವರ್ಷ ಶಿಕ್ಷೆ ನಾಲ್ವರಿಗೂ ತಲಾ 25 ಸಾವಿರ ದಂಡ ವಿಧಿಸಿದೆ. ಒಟ್ಟಾರೆ, ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದವರು ಪೊಲೀಸರಿಗೆ ನಾನಾ ರೀತಿ ಅತಿಥಿಗಳಾಗಿದ್ರು. ಅಪ್ರಾಪ್ತೆಯನ್ನ ಬೇಕಾದಾಗ ಬೇಕಾದಂತೆಲ್ಲಾ ಬಳಸಿಕೊಂಡ 53 ಜನ ಮೂರು ವರ್ಷ ಜೈಲಲ್ಲಿ ಮುದ್ದೆ ಮುರಿದಿದ್ರು. ಆದ್ರೆ, ಕೋರ್ಟ್ ಮೂರು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಹಣ ನೀಡಿ ಹೋದವರನ್ನ ಕಸ್ಟಮರ್‍ಗಳೆಂದು ಪರಿಗಣಿಸಿ ಅವರನ್ನ ಬಿಡುಗಡೆ ಮಾಡಿದೆ. ಆದ್ರೆ, ಆಕೆ ತಾಯಿ ಹಾಗೂ ಮೂವರು ಯುವಕರ ವಿರುದ್ಧ ಕಿಡಿಕಾರಿದ್ದು ನಾಲ್ವರಿಗೂ 20 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದೆ.