ಮುಂಬೈ (ಸೆ. 01)  ಪಾದಚಾರಿಗಳ ಮೇಲೆ ಹರಿದ ಕಾರು ನಾಲ್ವರನ್ನು ಬಲಿ ಪಡೆದುಕೊಂಡಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. 

ಸೋಮವಾರ ರಾತ್ರಿ ಭೀಕರ ಘಟನೆ ನಡೆದಿದ್ದು ನಿಯಂತ್ರಣ ತಪ್ಪಿದ ಕಾರು ನಂತರ ರೆಸ್ಟೋರೆಂಟ್‌ಗೆ ನುಗ್ಗಿದೆ.  ಮುಂಬೈ ಕ್ರಾಪೋರ್ಡ್ ಮಾರುಕಟ್ಟೆ ಬಳಿ ಅಪಘಾತ ನಡೆದಿದೆ.  ಗಾಯಗೊಂಡ ನಾಲ್ವರು ಮತ್ತು ಚಾಲಕನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶರ್ಮಿಳಾ ಮಾಂಡ್ರೆ ಆಕ್ಸಿಡೆಂಟ್ ಕೇಸ್‌ ಗೆ ಬಿಗ್ ಟ್ವಿಸ್ಟ್

ಈಗ ಅಪಘಾತ ನಡೆಯುವಾಗ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ಮೇಲೆ ಮೂರು ತಿಂಗಳ ಹಿಂದೆಯೂ ಟ್ರಕ್ ಗೆ ಡಿಕ್ಕಿ ಹೊಡೆದ ಪ್ರಕರಣ ದಾಖಲಾಗಿತ್ತು.

ಸದಾನಂದ ಹೋಟೆಲ್ ಬಳಿ ಮಹಿಳೆಯರ ಮೇಲೆ ಹರಿದ ಕಾರು ಅವರನ್ನು ಕೆಪೇ ಜನತಾ ರೆಸ್ಟೋರೆಂಟ್ ತನಕ ಎಳೆದುಕೊಂಡು ಬಂದಿತ್ತು.  ಫುಟ್ ಪಾತ್ ಮೇಲೆ ಜೋರಾಗಿ ಬಂದ ಕಾರು ಜೀವಗಳನ್ನು ಬಲಿಪಡೆದಿದೆ. 

ಮಲ್ಪೆ ಬಂದರಿನಲ್ಲಿ ಟೆಂಪೋ- ಬೋಟ್ ಅವಘಡ!

"