Asianet Suvarna News Asianet Suvarna News

Kodagu: ದೊಣ್ಣೆಯಿಂದ ಹೊಡೆದು ತಂದೆಯನ್ನ ಕೊಂದ ದುಷ್ಟ ಮಗ!

ದೊಣ್ಣೆಯಿಂದ ಹೊಡೆದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ. ಚಿಟ್ಟಿಯಪ್ಪ ಅಲಿಯಾಸ್ ರಾಜ (68) ಕೊಲೆಯಾದ ವ್ಯಕ್ತಿ. ಪುತ್ರ ದರ್ಶನ್ ಕೊಲೆ ಮಾಡಿದ ಆರೋಪಿ.

Son Killed Father At Kodagu District Over Money Matter gvd
Author
First Published Oct 19, 2023, 8:50 AM IST

ಕೊಡಗು (ಅ.19): ದೊಣ್ಣೆಯಿಂದ ಹೊಡೆದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ. ಚಿಟ್ಟಿಯಪ್ಪ ಅಲಿಯಾಸ್ ರಾಜ (68) ಕೊಲೆಯಾದ ವ್ಯಕ್ತಿ. ಪುತ್ರ ದರ್ಶನ್ ಕೊಲೆ ಮಾಡಿದ ಆರೋಪಿ. ​ಬುಧವಾರ (ಅ.18) ರಂದು ಪುತ್ರ ದರ್ಶನ್, ತಂದೆ ಚೇಂದ್ರಿ ಮಾಡರಾಜ ಅವರಿಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು. 

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇಂದ್ರಿ ಮಾಡರಾಜನನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ದರ್ಶನ್​ನನ್ನು ಬಂಧಿಸಿದ್ದಾರೆ. ಇನ್ನು ಹಣದ ವಿಷಯಕ್ಕೆ ತಂದೆ ಮಗನ ನಡುವೆ ಗಲಾಟೆಯಾಗಿದ್ದು, ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ರಾಜ್ಯವನ್ನು ಉದ್ಧಾರ ಮಾಡಲು ಅಧಿಕಾರಕ್ಕೆ ಬಂದ ಕಾಂಗ್ರೆಸ್: ಕೆ.ಎಸ್.ಈಶ್ವರಪ್ಪ ಲೇವಡಿ

ಪೊಲೀಸ್‌ ಪೇದೆಗೆ ಚಾಕು ಇರಿದ ಕಿಡಿಗೇಡಿಯ ಬಂಧನ: ಅಪರಾಧ ಪ್ರಕರಣ ಸಂಬಂಧ ತನ್ನನ್ನು ಬಂಧಿಸಲು ಬಂದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ವೊಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಿಡಿಗೇಡಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ಹಸನ್ ಖಾನ್‌ ಬಂಧಿತನಾಗಿದ್ದು, ಸದಾಶಿವನಗರ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಸೈಯದ್ ಸಮೀವುಲ್ಲಾ ಅವರ ಮೇಲೆ ಆತ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಸಮೀವುಲ್ಲಾ ಅವರ ಕೈಗೆ ಗಾಯವಾಗಿದೆ. ಕೆಲ ದಿನಗಳ ಹಿಂದೆ ಶಿವಾಜಿನಗರದ ಎಚ್‌.ಕೆ.ಪಿ ದರ್ಗಾ ಸರ್ಕಲ್ ಸಮೀಪ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಶಿವಾಜಿನಗರ ಠಾಣೆ ಕ್ರೈಂ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸಮೀವುಲ್ಲಾ, ಕೆಲ ದಿನಗಳ ಹಿಂದಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾಗಿದ್ದರು. ಅಪರಾಧ ಪ್ರಕರಣದಲ್ಲಿ ಹಸನ್ ಹುಡುಕಿಕೊಂಡು ಶಿವಾಜಿನಗರಕ್ಕೆ ಸಿಸಿಬಿ ಪೊಲೀಸರು ತೆರಳಿದ್ದರು. ಅದೇ ವೇಳೆ ದರ್ಗಾ ಬಳಿ ಚಹಾ ಸೇವೆಗೆ ತೆರಳಿದ್ದ ಸಮೀವುಲ್ಲಾ ಅವರಿಗೆ ಸಿಸಿಬಿ ತಂಡ ಕಂಡಿದೆ. ಆಗ ಸಿಸಿಬಿ ಪೊಲೀಸರನ್ನು ವಿಚಾರಿಸಿದಾಗ ಹಸನ್ ಹುಡುಕಿಕೊಂಡು ಬಂದಿರುವುದಾಗಿ ಹೇಳಿದ್ದಾರೆ. ಆ ವೇಳೆ ಆತನ ಫೋಟೋ ತೋರಿಸಿದಾಗ ಕೂಡಲೇ ಸಮೀವುಲ್ಲಾ ಪತ್ತೆ ಹಚ್ಚಿದ್ದಾರೆ.

ಮೆಟ್ರೋ ಹ್ಯಾಂಡಲ್‌ ಹಿಡಿದು ಸರ್ಕಸ್‌ ಮಾಡಿದ ವಿದ್ಯಾರ್ಥಿಗೆ ₹500 ದಂಡ

ಅದೇ ಹೊತ್ತಿಗೆ ದರ್ಗಾ ಸಮೀಪದಲ್ಲೇ ಇದ್ದ ಹಸನ್‌ನನ್ನು ಹಿಡಿದು ಪಕ್ಕಕ್ಕೆ ಸಮೀವುಲ್ಲಾ ಕರೆದೊಯ್ದಿದ್ದಾರೆ. ಈ ಹಂತದಲ್ಲಿ ಸಮೀವುಲ್ಲಾ ಅವರಿಗೆ ಚಾಕುವಿನಿಂದ ಇರಿಯಲು ಹಸನ್ ಯತ್ನಿಸಿದ್ದಾನೆ. ತಕ್ಷಣವೇ ಚಾಕುವನ್ನು ಹಿಡಿದುಕೊಂಡಾಗ ಸಮೀವುಲ್ಲಾ ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಆಗಲೂ ಸಹ ಬಿಡದೆ ಅವರಿಗೆ ಆರೋಪಿ ಚಾಕುವಿನಿಂದ ತಿವಿಯಲು ಮುಂದಾಗಿದ್ದಾನೆ. ಅಷ್ಟರಲ್ಲೇ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಶಿವಾಜಿನಗರ ಠಾಣೆ ಪೊಲೀಸರು, ಹಸನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಬಳಿಕ ಗಾಯಾಳು ಹೆಡ್‌ ಕಾನ್‌ಸ್ಟೇಬಲ್ ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios