ಮದ್ಯಸೇವನೆ ಮಾಡಬೇಡವೆಂದು ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಆದರ್ಶ  (24) ವರ್ಷದ ಯುವಕ ಮೃತ ದುರ್ದೈವಿ.

ರಾಯಚೂರು (ಫೆ.22): ಮದ್ಯಸೇವನೆ ಮಾಡಬೇಡವೆಂದು ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮಗ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ಆದರ್ಶ (24) ವರ್ಷದ ಯುವಕ ಮೃತ ದುರ್ದೈವಿ. ಮಾನ್ವಿ ಪಟ್ಟಣದಲ್ಲಿ ಹೇರ್ ಕಟಿಂಗ್ ಶಾಪ್ ಹೊಂದಿದ್ದ ಯುವಕ. ಆದರೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಮಗ ಹಾಳಾಗುತ್ತಿದ್ದಾನೆಂದು ತಂದೆ ಮದ್ಯಸೇವನೆ ಬಿಡುವಂತೆ ಬುದ್ಧಿವಾದ ಹೇಳಿದ್ದ. ಈ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಮಗ. ಅಪ್ಪನ ಮಾತಿಗೆ ಮನನೊಂದು ಬಾತ್‌ ರೂಂನ ಪೈಪ್‌ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. 

ಸದ್ಯ ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂತೂರು ಸಕ್ಕರೆ ಕಾರ್ಖಾನೆ ಸುರಿದ ಬೆಂಕಿಯ ಬೂದಿಯಲ್ಲಿ ಸುಟ್ಟುಹೋದ ರೈತ, ನೋವು ತಾಳಲಾರದೇ ಆತ್ಮಹತ್ಯೆ!