Asianet Suvarna News Asianet Suvarna News

ಗರ್ಲ್‌ಫ್ರೆಂಡ್‌ ಜೊತೆ ಹೊಟೇಲ್‌ಗೆ ಹೋದ ಅಪ್ಪ ಮಗನ ಕೈಲಿ ಸಿಕ್ಕಾಕೊಂಡ!

* ತಂದೆಯನ್ನು ಪ್ರೇಯಸಿ ಜೊತೆ ರೆಡ್‌ಹ್ಯಾಂಡ್‌ ಆಗಿ ಹಿಡಿದ ಮಗ

* ಎಂಟ್ನೂರು ಕಿಲೋ ಮಿಟರ್‌ ಫಾಲೋ ಮಾಡಿದ ಮಗ

* ತಾಯಿಗೆ ಪಿಡಿಸುತ್ತಿದ್ದ ತಂದೆಗೆ ಮಗನ ಕ್ಲಾಸ್

Son Caught Father with his girlfriend at Ujjain pod
Author
Bangalore, First Published Oct 12, 2021, 5:03 PM IST
  • Facebook
  • Twitter
  • Whatsapp

ಉಜ್ಜಯಿನಿ(ಅ.12): ಮಗನೊಬ್ಬ ತನ್ನ ತಂದೆಯನ್ನು 59 ವರ್ಷದ ಪ್ರೇಯಸಿಯೊಂದಿಗೆ ಸಮಯ ಕಳೆಯುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಾಕೊಂಡು ಗದ್ದಲವೇರ್ಪಟ್ಟ ಘಟನೆ ಬೆಳಕಿಗೆ ಬಂದಿದೆ. 62 ವರ್ಷದ ತಂದೆ ರಾಜಸ್ಥಾನದ(Rajasthan) ಜೈಪುರದಿಂದ(Jaipur) ಪ್ರೇಯಸಿಯೊಂದಿಗೆ ಉಜ್ಜಯನಿಗೆ ತಲುಪಿದಾಗ ಮಗ ಕೂಡಾ ಆತನನ್ನು ಹಿಂಬಾಲಿಸಿ ಅಲ್ಲಿಗೆ ತಲುಪಿದ್ದಾನೆ. ಅಲ್ಲದೇ ಮಗ ತನ್ನ ತಂದೆಯ ವಿಡಿಯೋವನ್ನೂ ಮಾಡಿದ್ದ. ಹಲವಾರು ತಾಸು ಈ ಹೈಡ್ರಾಮಾ ಮುಂದುವರೆದಿದೆ. ಇದಾದ ಬಳಿಕ ಹೊಟೇಲ್ ಮ್ಯಾನೇಜರ್ ಈ ವೃದ್ಧ ಜೋಡಿಯನ್ನು ಹೊರ ಹಾಕಿದ್ದಾರೆ.

ಫೇಸ್‌ಬುಕ್‌ನಲ್ಲಿ ಹುಟ್ಟಿತ್ತು ಪ್ರೀತಿ

ಈ ವೃದ್ಧ ಪ್ರೇಮಿ ಅಲೋಕ್ ಚೌಧರಿಗೆ 62 ವರ್ಷ, ಅವರು ಗ್ವಾಲಿಯರ್‌ನಲ್ಲಿ(Gwalior) ಖಾಸಗಿ ಕಂಪನಿಯ ಉದ್ಯೋಗಿ. ಆದರೆ ಅವರ ಗೆಳತಿ ಜೈಪುರದಲ್ಲಿ ಎಫ್‌ಸಿಐನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಬ್ಬರಿಗೂ ಫೇಸ್‌ಬುಕ್‌ನಲ್ಲಿ(Facebook) ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತು. ಶುಕ್ರವಾರ, ಅಲೋಕ್ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದರು. ಜೈಪುರದಿಂದ ಉಜ್ಜಯಿನಿಗೆ ಟಿಕೆಟ್ ಪಡೆದಿದ್ದರು. ಇದನ್ನು ಕಂಡ ಮಗ ಅಂಕುರ್ ಆತನನ್ನು ಹಿಂಬಾಲಿಸಿದ್ದಾನೆ. 

 ಈ ಬಗ್ಗೆ ಮಾಹಿತಿ ನೀಡಿರುವ ಅಂಕುರ್ ನನ್ನ ತಂದೆ ಮೊದಲು ಜಯ್ಪುರಕ್ಕೆ ಹೋದರು. ನಾನು ಅವರನ್ನು ಹಿಂಬಾಲಿಸಿದೆ. ಅಲ್ಲಿಂದ ಉಜ್ಜಯನಿ(Ujjain)ಗೆ ಹೋದೆ. ಇಬ್ಬರೂ ಮಂಗಳವಾರ ಮಹಾಕಾಳಿ ದೇಗುಲದ ಎದುರಿರುವ ಹೋಟೆಲ್‌ಗೆ ತೆರಳಿದರು. ಬಳಿಕ ಅಂಕುರ್ ಹೋಟೆಲ್‌ಗೆ ಹೋಗಿ ಬಾಗಿಲು ತೆರೆಸಿದ್ದಾನೆ ಈ ಮೂಲಕ ತಂದೆಯ ಬಣ್ಣ ಬಯಲು ಮಾಡಿದ್ದಾನೆ.

800 ಕಿಮೀವರೆಗೆ ಹಿಂಬಾಲಿಸಿದ

ಅಂಕುರ್ ತನ್ನ ತಂದೆಯನ್ನು ಹಿಡಿಯಲು ಮತ್ತು ಆತನ ಸತ್ಯವನ್ನು ಹೊರತರಲು ಗ್ವಾಲಿಯರ್‌ನಿಂದ ಜೈಪುರಕ್ಕೆ 332 ಕಿಮೀ ಮತ್ತು ಜೈಪುರದಿಂದ 514 ಕಿಮೀ ಪ್ರಯಾಣಿಸಿದ್ದಾನೆ ಅಂಕುರ್ ಸೋಮವಾರ ಸಂಜೆ ಉಜ್ಜಯಿನಿ ತಲುಪಿದ್ದರು. ಅಂಕುರ್ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ ಕಾಯುತ್ತಿದ್ದ. ಅವರು ರೈಲಿನಿಂದ ಇಳಿದ ಕೂಡಲೇ ಅಂಕುರ್ ಅವರನ್ನು ಬೆನ್ನಟ್ಟಲು ಆರಂಭಿಸಿದರು. ಇದರೊಂದಿಗೆ, ಅವರು ವೀಡಿಯೊಗಳನ್ನು ಮಾಡಿ ಮತ್ತು ಫೋಟೋಗಳನ್ನು ತೆಗೆದುಕೊಂಡರು.

ತಾಯಿಯಿಂದ ವಿಚ್ಛೇದನ ಕೇಳುತ್ತಿದ್ದರು

ತನ್ನ ತಂದೆ ಪ್ರತಿದಿನ ತನ್ನ ತಾಯಿಯೊಂದಿಗೆ ಜಗಳವಾಡುತ್ತಿದ್ದರು ಎಂದು ಅಂಕುರ್ ಹೇಳಿದ್ದಾನೆ. ತಾಯಿಯಿಂದ 13.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ವಿಚ್ಛೇದನ ಪಡೆಯುವ ಬಗ್ಗೆ ಮಾತನಾಡುತ್ತಿದ್ದರು. ಈ ಮಧ್ಯೆ ನನಗೆ ತಂದೆಯ ಫೇಸ್‌ಬುಕ್ ಗೆಳತಿ ಬಗ್ಗೆ ಮಾಹಿತಿ ಸಿಕ್ಕಿತು. ಫೇಸ್‌ಬುಕ್ ಸ್ನೇಹಿತೆ ಜೈಪುರ್ ಎಫ್‌ಸಿಐನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಪತಿ ತೀರಿಕೊಂಡಿದ್ದಾರೆ. ಪಾಪ ನನ್ನ ತಾಯಿಯನ್ನು ಬಹಳ ಸಮಯ ಹಿಂಸಿಸುತ್ತಿದ್ದ. ಇಬ್ಬರೂ ಜೊತೆಯಾಗಿರಿ ಎಂಬುವುದಕ್ಕೂ ಅಮ್ಮ ಸಿದ್ಧಳಾಗಿದ್ದಳು ಎಂದಿದ್ದರು.

Follow Us:
Download App:
  • android
  • ios