ಬೆಂಗಳೂರು (ಏ.04):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಪ್ರಾಥಮಿಕ ವಿಚಾರಣೆ ಮುಕ್ತಾಯವಾಗಿದೆ.   

ಈ ನಿಟ್ಟಿನಲ್ಲಿ ಇದೀಗ ಶಂಕಿತ ಸೀಡಿ ಗ್ಯಾಂಪ್ ಕಿಂಗ್‌ಪಿನ್‌ಗಳೆನಿಸಿಕೊಂಡವರ ಹುಡುಕಾಟ ಹೋರಾಗಿದೆ. ಎಸ್‌ಐಟಿ ಪೊಲೀಸರು ಸೀಡಿ ಗ್ಯಾಂಗ್‌ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. 

ನಾಪತ್ತೆಯಾಗಿರುವ ಸೀಡಿ ಗ್ಯಾಂಗ್ ಕಿಂಗ್‌ಪಿನ್ ಎಂದೇ ಕರೆಸಿಕೊಳ್ಳುವ ನರೇಶ್ ಗೌಡ ಹಾಗೂ ಶ್ರವಣ್ ಗಾಗಿ ಹುಡುಕಾಟ ತೀವ್ರಗೊಂಡಿದೆ. ವಿವಿಧ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಎಸ್‌ಐಟಿ ಹುಡುಕಾಟ ಶುರು ಮಾಡಿದೆ. 

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? ..

 ನಾಲ್ಕು ತಂಡಗಳನ್ನು ರಚಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.   ಸಿಡಿ ಗ್ಯಾಂಗ್ ಗಾಗಿ ಪ್ರಮುಖ ಇಬ್ಬರಿಗಾಗಿ ಗಾಳ ಬೀಸಿರೋ ಪೊಲೀಸರು, ತಮಿಳುನಾಡು, ಹೈದರಾಬಾದ್ ಗೋವಾ ಹಾಗೂ ದೆಹಲಿಯಲ್ಲಿ ಸರ್ಚಿಂಗ್ ಆಪರೇಷನ್ ನಡೆಸಿವೆ. 

ವಿವಿಧ ರಾಜ್ಯಗಳಲ್ಲಿಯೂ ಅವರ ಪತ್ತೆ ಕಾರ್ಯಕ್ಕೆ ಇಳಿದಿವೆ.