ಶಿವ ಮಂದಿರ ಅರ್ಚಕನ ಕಣ್ಣು ಕಿತ್ತು, ಜನನಾಂಗ ಕತ್ತರಿಸಿ ಭೀಕರ ಹತ್ಯೆ, ಭುಗಿಲೆದ್ದ ಹಿಂಸಾಚಾರ!
ಶಿವ ಮಂದಿರದ ಅರ್ಚಕನ ಅಪಹರಿಸಿ ಭೀಕರ ಹತ್ಯೆ ಮಾಡಲಾಗಿದೆ. ಅರ್ಚನಕ 2 ಕಣ್ಣೂ ಕಿತ್ತು ಹಾಕಲಾಗಿದೆ. ಜನನಾಂಗಗಳನ್ನು ಕತ್ತರಿಸಲಾಗಿದೆ. ಈ ಹತ್ಯೆಗೆ ಪೊಲೀಸರ ನಿರ್ಲಕ್ಷ್ಯ, ಗ್ರಾಮದಲ್ಲಿ ಗೂಂಡಾಗಳ ಅಟ್ಟಹಾಸವೇ ಕಾರಣ ಎಂದು ಆರೋಪಿಸಿ ಭಾರಿ ಹಿಂಸಾಚಾರ ನಡೆದಿದೆ. ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಪಾಟ್ನಾ(ಡಿ.17) ಶಿವ ಮಂದಿರದಲ್ಲಿ ಪ್ರಧಾನ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದ ಮನೋಜ್ ಕುಮಾರ್ ಯಾವುದೇ ವಿವಾದಕ್ಕೆ ಸಿಲುಕಿದವರಲ್ಲ. ಯಾರನ್ನೂ ನೋಯಿಸಿದವರಲ್ಲ. ಯಾರ ಜೊತೆಗೂ ಮನಸ್ತಾಪ ಬಂದಿಲ್ಲ. ಆದರೆ 6 ದಿನಗಳಹಿಂದೆ ಪೂಜೆಗಾಗಿ ಬೆಳಗ್ಗ ದೇವಸ್ಥಾನಕ್ಕೆ ತೆರಳಿದ್ದ ಅರ್ಚಕ ನಾಪತ್ತೆಯಾಗಿದ್ದ. ಪೊಲೀಸರು ಪತ್ತೆ ಹಚ್ಚುವ ಭರವಸೆ ನೀಡಿದರೂ ಪ್ರಯೋಜನವಾಗಿಲ್ಲ. ಒಂದು ವಾರಗಳ ಬಳಿಕ ಅರ್ಚಕನ ಮೃತದೇಹ ಪತ್ತೆಯಾಗಿದೆ. ಅರ್ಚಕನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಎರಡೂ ಕಣ್ಣುಗಳನ್ನು ಕಿತ್ತಿತ್ತಿದ್ದಾರೆ. ಜನನಾಂಗ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯ ದನಾಪುರ ಗ್ರಾಮದಲ್ಲಿ ನಡೆದಿದೆ.
ದನಾಪುರ ಗ್ರಾಮದ ಶಿವ ದೇವಸ್ಥಾನದಲ್ಲಿ ಮನೋಜ್ ಕುಮಾರ್ ಪ್ರಧಾನ ಅರ್ಚಕರಾಗಿದ್ದರು. ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ಹಂಚುತ್ತಿದ್ದರು. ಮನೋಜ್ ಕುಮಾರ್ ಪ್ರತಿನಿತ್ಯ ಶಿವನ ಸೇವೆ ಸಲ್ಲಿಸುತ್ತಾ ಜೀವನ ಸಾಗಿಸುತ್ತಿದ್ದರು. ಒಂದು ವಾರದ ಹಿಂದೆ ಮನೋಜ್ ಕುಮಾರ್ ಮನೆಯಿಂದ ಬೆಳಗ್ಗೆ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವಸ್ಥಾನಕ್ಕೆ ತಲುಪಿ ಪೂಜಾ ಕೈಂಕರ್ಯ ಆರಂಭಿಸಿದ್ದಾರೆ. ಕೆಲ ಹೊತ್ತಲ್ಲಿ ಮನೋಜ್ ಕುಮಾರ್ ನಾಪತ್ತೆಯಾಗಿದ್ದಾರೆ.
ಮೆಟ್ರೋ ಬಾಗಿಲಿಗೆ ಸಿಲುಕಿದ ಸೀರೆ, ರೈಲು -ಪ್ಲಾಟ್‌ಫಾರ್ಮ್ ನಡುವೆ ಅಪ್ಪಚ್ಚಿಯಾದ ಮಹಿಳೆ ಮೃತ!
ಮನೋಜ್ ಕುಮಾರ್ ಸಂಜೆಯಾದರೂ ಮನೆಗೆ ಮರಳದ ಕಾರಣ ಹುಡುಕಾಟ ಆರಂಭಗೊಂಡಿದೆ. ಮನೋಜ್ ಕುಮಾರ್ ಸಹೋದ, ಜಿಲ್ಲಾ ಬಿಜೆಪಿ ನಾಯಕ ಅಶೋಕ್ ಕುಮಾರ್ ದೂರು ನೀಡಿದ್ದಾರೆ. ಅಶೋಕ್ ಕುಮಾರ್ ಹಾಗೂ ಮತ್ತೋರ್ವ ಸಹೋದರ ದೂರು ದಾಖಲಿಸಿದ್ದಾರೆ. ಈ ವೇಳೆ ಪೊಲೀಸರು ಹುಡುಕಾಟ ನಡೆಸುವ ಭರವಸೆ ನೀಡಿದ್ದಾರೆ.
ಗ್ರಾಮದಲ್ಲಿ ಕೆಲ ಪುಡಿ ರೌಡಿಗಳ ಅಟ್ಟಹಾಸ ಇತ್ತೀಚಗೆ ಹೆಚ್ಚಾಗುತ್ತಿದೆ. ಮನೋಜ್ ಕುಮಾರ್ ಸಹೋದರ ಬೆಜಿಪಿ ನಾಯಕನಾಗಿರುವ ಕಾರಣ ಈ ಅಪಹರಣ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಅಶೋಕ್ ಕುಮಾರ್ ಉಲ್ಲೇಖಿಸಿದ್ದರು. ಒಂದು ವಾರದ ಬಳಿಕ ಮನೋಜ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಮನೋಜ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಹಲವು ಗುಂಡುಗಳ ದೇಹ ಹೊಕ್ಕಿದೆ. ಇನ್ನು ಎರಡೂ ಕಣ್ಣು ಕಿತ್ತು ಹಾಕಲಾಗಿದೆ. ಜನನಾಂಗ ಕತ್ತರಿಸಲಾಗಿದೆ.
ತಡರಾತ್ರಿ ಸಿಲಿಂಡರ್ ಸ್ಪೋಟ; 9 ತಿಂಗಳ ಮಗು ಸೇರಿ ಒಂದೇ ಕುಟುಂಬದ 7 ಜನರು ಗಂಭೀರ ಗಾಯ!
ಭೀಕರವಾಗಿ ಹತ್ಯೆ ಮಾಡಿದ ಸುದ್ದಿ ಗ್ರಾಮದಲ್ಲಿ ಹರಡಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿಭಟನೆಗಳು ಆರಂಭಗೊಂಡಿದೆ. ಪ್ರತಿಭಟನೆ ಚದುರಿಸಲು ಪೊಲೀಸರು ಲಾಠಿ ಪ್ರಯೋಗಿಸಿದ್ದಾರೆ. ಇದು ಹಿಂಸಾಚಾರಕ್ಕೆ ತಿರುಗಿದೆ. ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇಬ್ಬರು ಪೊಲೀಸರಿಗೂ ಗಾಯವಾಗಿದೆ.