ರಿಸೀವ್ ಮಾಡಿದ್ರೆ ಅತ್ತ ಕಡೆಯಿಂದ ಬೆತ್ತಲೆ ಲೋಕ..ದೊಡ್ಡ ದೊಡ್ಡವರಿಗೆಲ್ಲ ಬ್ಲಾಕ್ ಮೇಲ್!

ಆನ್ ಲೈನ್ ನಕಲಿ ಜಾಲ/ ಶಾಸಕರು, ಸಂಸದರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದ ಸೆಕ್ಸ್‌ಟಾರ್ಷನ್ ದಂಧೆ/ ಅಶ್ಲೀಲ ವಿಡಿಯೋ ಪ್ಲೆ ಮಾಡಿ ಬ್ಲಾಕ್ ಮೇಲ್/ ಆರೋಪಿಗಳು ಅನೇಕರನ್ನು ವಂಚಿಸಿದ್ದರು

Sextortion racket busted in Mumbai Porn used to target MLAs MPs mah

ಮುಂಬೈ(ಫೆ. 22)   ಮುಂಬೈ ವಿಚಿತ್ರ ರೀತಿಯ ಅಪರಾಧಗಳ ತಾಣವಾಗಿ ಹೋಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಬಂದ ಮೇಲೆ ವಂಚಕರು ಬಲೆ ಬೀಸಲು ಹೊಸ ಹೊಸ ತಂತ್ರಗಳ ಪ್ರಯೋಗದ ಮೊರೆ ಹೋಗಿದ್ದರೂ ಅಂತಿಮವಾಗಿ ಪೊಲೀಸರ ಬಲೆಗೆ ಬಿಳುತ್ತಲೇ ಇದ್ದಾರೆ.

ಶಾಸಕರು, ಸಂಸದರು, ಹೆಸರು ಮಾಡಿದ ಪತ್ರಕರ್ತರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದ ಸೆಕ್ಸ್‌ಟಾರ್ಷನ್ ದಂಧೆಯನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದಾರೆ.  ಮಹಿಳೆಯರ ನಕಲಿ ಪ್ರೊಫೈಲ್‌ಗಳನ್ನು ಬಳಸಿಕೊಂಡು ಈ ದಂಧೆ ನಡೆಯುತ್ತಿತ್ತು.

ಮುಂಬೈ ಪೊಲೀಸರ ಅಪರಾಧ ವಿಭಾಗವು ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ವೆಬ್ ಸೀರಿಸ್‌ನಂತೆ ಕಂತು ಕಂತಾಗಿ ಪೋರ್ನ್‌ ಪ್ರಸಾರ.. ಭರ್ಜರಿ ದಂಧೆ!

ಯಾವ ರೀತಿ ವಂಚಕರು ಬಲೆ ಹಾಕುತ್ತಿದ್ದರು? 
ಯಾರನ್ನು ವಂಚನೆ ಮಾಡಬೇಕು ಎಂದು ಗುರಿ ಸಿದ್ಧಮಾಡಿಕೊಂಡ ನಂತರ ನಕಲಿ ಪ್ರೋಪೈಲ್ ನಿಂದ  ಅವರಿಗೆ ಫ್ರೆಂಡ್ ರಿಕ್ಷೆಸ್ಟ್ ಕಳಿಸುತ್ತಿದ್ದರು.  ವಾರಾಂತ್ಯದಲ್ಲಿ ವಿಡಿಯೋ ಕಾಲ್ ಮಾಡುತ್ತಿದ್ದರು.

ವಾಟ್ಸಪ್ ನಂಬರ್ ಸಂಪಾದನೆ ಮಾಡಿಕೊಂಡು ವಿಡಿಯೋ ಕರೆ ಮಾಡಿ  ಇತ್ತ ಕಡೆಯಿಂದ ಪೋರ್ನ್ ಪ್ರಸಾರ ಮಾಡಲಾಗುತ್ತಿತ್ತು. ಒಂದು ವೇಳೆ ವ್ಯಕ್ತಿ  ನೋಡುವುದನ್ನು ಮುಂದುವರಿಸಿದರೆ ಆ ಸ್ಕ್ರೀನ್ ಶಾಟ್ ಸೇವ್ ಮಾಡಿಕೊಂಡು ಅದನ್ನು ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಿದ್ದರು.

ನಿಮ್ಮ ಅಶ್ಲೀಲ ಪೋಟೋ ವಿವರ ನಮ್ಮ ಬಳಿ ಇದೆ. ಸೋಶಿಯಲ್ ಮೀಡಿಯಾಕ್ಕೆ ಹಾಕಬಾರದು ಎಂದರೆ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದರು.

ಈ ರೀತಿ ಬ್ಲಾಕ್ ಮೇಲ್ ಮಾಡುವ ಉದ್ದೇಶಕ್ಕೆ  171 ನಕಲಿ ಫೇಸ್‌ಬುಕ್ ಪ್ರೊಫೈಲ್‌ಗಳು,  4 ಟೆಲಿಗ್ರಾಮ್ ಚಾನೆಲ್ ಆರಂಭ ಮಾಡಿಕೊಂಡಿದ್ದು ಆರೋಪಿಗಳ  58  ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

Latest Videos
Follow Us:
Download App:
  • android
  • ios