ಗಣೇಶಗುಡಿಯಲ್ಲಿ ಸೆಲ್ಪಿ ತೆಗೆಯಲು ಕಾಳಿ ನದಿಗೆ  ಹೋಗಿ ಬಿದ್ದ ಜೋಡಿ/ ಆಟೋದಲ್ಲಿ ಬಂದಿದ್ದರು/ ಸೇತುವೆ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಅವಘಡ/ ಕಾಲು ಜಾರಿ ನದಿಗೆ ಬಿದ್ದಿದ್ದಾರೆ

ಜೋಯಿಡಾ(ಏ. 12) ಜೋಯಿಡಾ ತಾಲೂಕಿನ ಗಣೇಶಗುಡಿಯ ಸೇತುವೆಯ ಬಳಿ ಬೀದrf ಮೂಲದ ಪ್ರೇಮಿಗಳು ಸೆಲ್ಪಿ ತೆಗೆಯಲು ಸೇತುವೆ ನಿಂತಾಗ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದಾರೆ.

ದಾಂಡೇಲಿಯಿಂದ ಆಟೋದಲ್ಲಿ ಗಣೇಶಗುಡಿಗೆ ಬಂದ ಪ್ರೇಮಿಗಳು ಸೆಲ್ಪಿ ತೆಗೆಯುವ ಹುಮ್ಮಸಿನಲ್ಲಿ ಗಣೇಶಗುಡಿಯ ಸೇತುವೆ ಮೇಲೆ ಏರಿದ್ದಾರೆ. ಕಾಲು ಜಾರಿದ ಕಾರಣ ಇಬ್ಬರು ನದಿಯಲ್ಲಿ ಬಿದ್ದಿದ್ದಾರೆ‌.

ಚಲಿಸುತ್ತಿರುವ ಕಾರಿನ ಮೇಲೆ ಸೆಲ್ಫಿ ತೆಗೆದುಕೊಂಡ ಯುವಕರಿಗೆ ಭಾರೀ ದಂಡ

ಅವರನ್ನು ಅಲ್ಲಿಗೆ ಬಿಟ್ಟ ಆಟೋ ಚಾಲಕ ಇದನ್ನು ಗಮನಿಸಿದ್ದಾನೆ. ಕೂಡಲೇ ಇವರು ನದಿಗೆ ಬಿದ್ದ ಮಾಹಿತಿಯನ್ನು ಪೋಲಿಸರಿಗೆ ತಿಳಿಸಿದ್ದಾನೆ

ಸ್ಥಳಕ್ಕೆ ಆಗಮಿಸಿದ ರಾಮನಗರ ಪಿ.ಎಸ್.ಐ ಕಿರಣ ಪಾಟೀಲ್ ತಂಡ ನದಿಯಲ್ಲಿ ಇವರ ಹುಡುಕಾಟ ನಡೆಸಿದೆ. ಹುಡುಗಿ ಬೀದರ ಮೂಲದ ರಕ್ಷಿತಾ ಎಂದು ತಿಳಿದು ಬಂದಿದ್ದು, ಹುಡುಗನ ಹೆಸರು ಗೊತ್ತಾಗಿಲ್ಲ.

ರಾಮನಗರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಹುಡುಕುವ ಯತ್ನ ಮಾಡುತ್ತಿದ್ದಾರೆ.