ಬಾಗಲಕೋಟೆ: ಸಂಬಳ ಸಿಗದ ಕಾರಣ ಖಾಸಗಿ ಶಾಲೆಯ ಶಿಕ್ಷಕ ಆತ್ಮಹತ್ಯೆ
* ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದ ಘಟನೆ
* ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಮಹಾದೇವ
* ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ರಬಕವಿ-ಬನಹಟ್ಟಿ(ಆ.30): ಕೋವಿಡ್‌ನಿಂದಾಗಿ ಶಾಲೆಗಳ ಬಾಗಿಲು ತೆರೆಯದ ಕಾರಣ, ಕಳೆದೆರಡು ವರ್ಷದಿಂದ ವೇತನ ಬಾರದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿ ಖಾಸಗಿ ಶಾಲೆ ಶಿಕ್ಷಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿಯ ಸೋಮವಾರಪೇಟೆಯಲ್ಲಿ ಶನಿವಾರ ನಡೆದಿದೆ.
ಮಹಾದೇವ ಜಯವಂತ ಬಿಳ್ಳೂರ(38) ಸಾವಿಗೆ ಶರಣಾದ ಶಿಕ್ಷಕ. ಅವರಿಗೆ ಸೂಕ್ತವಾಗಿ ಸಂಬಳ ಲಭಿಸುತ್ತಿರಲಿಲ್ಲ. ಜತೆಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ 1 ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಿದ್ದರು ಎಂದು ತಿಳಿದು ಬಂದಿದೆ.
ವಿಜಯಪುರ: ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ರೇಪ್ ಕೇಸ್ ಆರೋಪಿ ಆತ್ಮಹತ್ಯೆ
ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಹಾದೇವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಹೇಳಿದ್ದು, ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.