ಶಿವಮೊಗ್ಗ; ಪೊಲೀಸ್‌ ವಸತಿಗೃಹದ ಬಳಿಯೆ ಕೈಚಳಕ, ಶ್ರೀಗಂಧದ ಮರ ಮಂಗಮಾಯ!

ಪೋಲಿಸ್ ವಸತಿಗೃಹಗಳು ಇರುವ ಸ್ಥಳದಲ್ಲೇ ಕಳ್ಳರ ಕೈಚಳಕ/ ಪೋಲಿಸ್ ಶಸ್ತ್ರಾಸ್ತ್ರ ಮೀಸಲು ಪಡೆಯ ಆವರಣದಲ್ಲಿ ಯೂ ಕಳ್ಳರ ಕರಾಮತ್ತು ಶಿವಮೊಗ್ಗದ ಡಿಎಆರ್ ಹಾಗೂ ವಸತಿಗೃಹಗಳ ಬಳಿ ಕಳ್ಳತನ/ ಪೋಲಿಸ್ ಬಂದೋಬಸ್ತಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳೇ ಕಳ್ಳತನ

Sandalwood trees chopped and stolen at Shivamogga police quarters mah

ಶಿವಮೊಗ್ಗ(ನ.  16)  ಪೋಲಿಸ್ ವಸತಿಗೃಹಗಳು ಇರುವ ಸ್ಥಳದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ.  ಪೋಲಿಸ್ ಶಸ್ತ್ರಾಸ್ತ್ರ ಮೀಸಲು ಪಡೆಯ ಆವರಣದಲ್ಲಿಯೇ ಕರಾಮತ್ತು ತೋರಿಸಿದ್ದು ಗಂಧದ ಮರ ಕಳ್ಳತನ ಮಾಡಿದ್ದಾರೆ.

ಶಿವಮೊಗ್ಗದ ಡಿಎಆರ್ ಹಾಗೂ ವಸತಿಗೃಹಗಳ ಬಳಿ ಕಳ್ಳತನ ನಡೆದಿದೆ. ಪೋಲಿಸ್ ಬಂದೋಬಸ್ತಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳೆ ಕಳ್ಳತನವಾಗಿವೆ. ಸದಾ ಡಿಎಅರ್ ಮೈದಾನದಲ್ಲಿ ಪೋಲಿಸ್ ವಾಹನಗಳ ಒಡಾಟ ಇದ್ದರೂ ಕಳ್ಳರು ಆಟ ಮೆರೆದಿದ್ದಾರೆ.  ಪೋಲಿಸರ ವಸತಿಗೃಹಗಳು ಇದ್ದರೂ ಬೆಲೆಬಾಳುವ ಮರಗಳ ಕತ್ತರಿಸಿದ ಕಳ್ಳರ ಕೂಟ ಯಾರಿಗೂ ಗೊತ್ತಾಗದಂತೆ ಪರಾರಿಯಾಗಿದೆ. 

ಶ್ರೀಗಂಧ ಬೀಜ ಮಾರಿದರೆ ಎಕರೆಗೆ ಎರಡು ಲಕ್ಷ ಆದಾಯ

ಶ್ರೀಗಂಧ ಕೃಷಿ ಮಾಡಲು ಸರ್ಕಾರ ಅವಕಾಶ ನೀಡಿದ್ದು ಈಗ ಎಲ್ಲವೂ ಕಟಾವಿಗೆ ಬಂದಿದ್ದು ರೈತರು ಬೆಳೆದ ಮರಗಳಿಗೂ ಕಳ್ಳರ ಕಾಟ ಜೋರಾಗಿದ್ದು ಸರ್ಕಾರ ಮತ್ತು ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.

Latest Videos
Follow Us:
Download App:
  • android
  • ios