ಕುಖ್ಯಾತ ಉಗ್ರನ ಮಾಹಿತಿ ಕೊಟ್ಟರೆ 37  ಕೋಟಿ  ರೂ. ಮೊತ್ತದ ಬಹುಮಾನ/ ಮುಂಬೈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್/ ಪ್ರಪಂಚದ ವಿವಿಧ ಕಡೆ ನಡೆದ ಉಗ್ರ ದಾಳಿಯಲ್ಲೂ ಕೈವಾಡ/ ಬಹುಮಾನ ಘೋಷಿಸಿದ ಅಮೆರಿಕ

ವಾಷಿಂಗ್ ಟನ್(ನ. 28) ಮುಂಬೈ ಮೇಲೆ ಭಯೋತ್ಪಾದಕರು ಮಾಡಿದ್ದ 26/11 ರ ದಾಳಿಯನ್ನು ಜಗತ್ತು ಮರೆತಿಲ್ಲ. ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಮಾಹಿತಿ ನೀಡುವವರಿಗೆ ಸುಮಾರು 37 ಕೋಟಿ ರೂ. ಮೊತ್ತದ ಬಹುಮಾನ ಸಿಗಲಿದೆ.

Add Asianetnews Kannada as a Preferred SourcegooglePreferred

ಲಷ್ಕರ್ ಇ ತೋಯಿಬಾದ ಉಗ್ರರು ದಾಳಿ ಮಾಡಿದ್ದರು. ನಮ್ಮಲ್ಲಿ ಉಗ್ರರ ಪಟ್ಟಿ ಇದೆಯಾದರೂ ಮಾಸ್ಟರ್ ಮೈಂಡ್ ಸಾಜಿದ್ ಮಿರ್ ಬಗ್ಗೆ ಹೆಚ್ಚಿನ ವಿವರ ಇಲ್ಲ. ಎಫ್‌ಬಿಐನ ಮೋಸ್ಟ್ ವಾಂಡೆಡ್ ಪಟ್ಟಿಯಲ್ಲೂ ಈತನ ಹೆಸರಿದೆ.

ಭಯೋತ್ಪಾದನೆಗಾಗಿ ದೇಣಿಗೆ ಸಂಗ್ರಹ!

ಮುಂಬೈ ಮಾತ್ರವಲ್ಲೆ ಪ್ರಪಂಚದ ವಿವಿಧ ಕಡೆ ನಡೆದ ಉಗ್ರ ದಾಳಿಯಲ್ಲಿ ಈತನ ಕೈವಾಡ ಇರುವುದು ಪಕ್ಕಾ ಆಗಿದೆ. ಈತನ ಬಗ್ಗೆ ಮಾಹಿತಿ ನೀಡಿದರೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಹೇಳಿದೆ. 

ಪಾಕಿಸ್ತಾನ ಮೂಲದ ಆಸಾಮಿ ಎಲ್ಲಿ ಅಡಗಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಮುಂಬೈ ಮೇಲಿನ ದಾಳಿಯಲ್ಲಿ ಸೆರೆಸಿಕ್ಕಿದ್ದ ಕಸಬ್ ನನ್ನು ಗಲ್ಲಿಗೆ ಏರಿಸಲಾಗಿತ್ತು.