ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದಲ್ಲಿ ಘಟನೆ ನಡೆದಿತ್ತು. ರಾಜು ತಂಬಾಕೆಯನ್ನ ಲಿಂಗಸೂಗೂರು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾಜು ತಂಬಾಕೆ ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವಂತ ಸ್ಟೇಟಸ್ ಹಾಕಿದ್ದನಂತೆ, ಇದು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. 

ರಾಯಚೂರು(ಜೂ.02): ಮುಸ್ಲಿಂ ಹೆಣ್ಮಕ್ಕಳು ಬರೀ ಮಕ್ಕಳನ್ನ ಹೆರುವ ಮಷಿನ್ ಅಂತ ಸ್ಟೇಟಸ್ ಹಾಕಿದ್ದ ಆರೋಪದ ಹಿನ್ನಲೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ರಾಜು ತಂಬಾಕೆ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಆರ್‌ಎಸ್‌ಎಸ್‌ ಕಾರ್ಯಕರ್ತನ ಬಂಧನವಾಗಿದೆ. 

ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದಲ್ಲಿ ಘಟನೆ ನಡೆದಿತ್ತು. ರಾಜು ತಂಬಾಕೆಯನ್ನ ಲಿಂಗಸೂಗೂರು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾಜು ತಂಬಾಕೆ ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವಂತ ಸ್ಟೇಟಸ್ ಹಾಕಿದ್ದನಂತೆ, ಇದು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. 

ಕೆರೆಯಲ್ಲಿ ಅಣ್ಣನ ಮಗ ಬಿದ್ದನೆಂದು ರಕ್ಷಿಸಲು ಹೋದ ಚಿಕ್ಕಪ್ಪನೂ ಸಾವು

ಮುಸ್ಲಿಂ ಹೆಣ್ಣುಮಕ್ಕಳನ್ನ ಅವಹೇಳನಕಾರಿಯಾಗಿ ಬಿಂಬಿಸುವ ಫೋಟೊವನ್ನ ಸ್ಟೇಟಸ್‌ಗೆ ರಾಜು ತಂಬಾಕೆ ಹಾಕಿದ್ದನು. ಮುಸ್ಲಿಂ ಹೆಣ್ಣು ಮಕ್ಕಳು ಬರೀ ಮಕ್ಕಳನ್ನ ಹೆರುವ ಮಷಿನ್ ಅಂತ ಅವಹೇಳನಕಾರಿಯಾಗಿ ಸ್ಟೇಟಸ್‌ ಹಾಕಿದ್ದ. ಇದನ್ನ ನೋಡಿದ ಮುಸ್ಲಿಂ ಸಮುದಾಯದ ಜನ ಆಕ್ರೋಶಗೊಂಡಿದ್ದರು. 

ಆರೋಪಿ ರಾಜು ತಂಬಾಕೆ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಪಟ್ಟು ಹಿಡಿದಿದ್ದರು. ನಿನ್ನೆ ತಡ ರಾತ್ರಿ ಕೂಡ ಲಿಂಗಸೂಗೂರು ಠಾಣೆ ಎದುರು ನೂರಾರು ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿ ರಾಜುನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದಾರೆ ಪೊಲೀಸರು.