Asianet Suvarna News Asianet Suvarna News

ಬೆಂಗ್ಳೂರಲ್ಲಿ ಸುದ್ದಿಯಾಗಿದ್ದ ಬ್ಲ್ಯಾಕ್‌ ಪಲ್ಸರ್‌ ಬೈಕ್ ಯಾದಗಿರಿಯಲ್ಲೂ ಸದ್ದು...!

ಬ್ಲ್ಯಾಕ್‌ ಪಲ್ಸರ್‌‌ ಸದ್ದು ಮಾಡಿದೆ. ಬೆಂಗಳೂರಿನಲ್ಲಿ ದಾರಿಯಲ್ಲಿ ಹೋಗುವವರ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದವರು ಬ್ಲ್ಯಾಕ್‌  ಪಲ್ಸರ್ ಬೈಕ್ ಮೇಲೆ ಬಂದವರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬ್ಲ್ಯಾಕ್‌ ಬೈಕ್ ಗಳ ಮೇಲೆ ಭಾರೀ ನಿಗಾವಹಿಸಲಾಗಿತ್ತು. ಇದೀಗ ಯಾದಗಿರಿಯುಲ್ಲೂ ಸಹ ಬ್ಲ್ಯಾಕ್‌ ಪಲ್ಸರ್‌ ಸದ್ದು ಮಾಡಿದೆ.

Rs 2 lakh theft from Farmer in Yadgir
Author
Bengaluru, First Published Dec 30, 2019, 9:01 PM IST
  • Facebook
  • Twitter
  • Whatsapp

ಯಾದಗಿರಿ, [ಡಿ.30]: ಯಾದಗಿರಿ ನಗರದಲ್ಲಿ ಮತ್ತೊಮ್ಮೆ ಬ್ಲ್ಯಾಕ್ ಪಲ್ಸರ್ ಖದೀಮರ ಆತಂಕ ಶುರುವಾಗಿದೆ. ನಗರದ ಅಮರ್ ಲೇಔಟ್ ಬಳಿ ಸಂಜೆ ಬಂದಿದ್ದ ಖದೀಮರು 2 ಲಕ್ಷ ರೂಪಾಯಿ ಹಣ ತುಂಬಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.

ಅಮೆಜಾನ್‌ನಲ್ಲಿ ಆರ್ಡರ್‌: ಬಾಕ್ಸ್‌ ತೆರೆದು ನೋಡಿ ಬೆಚ್ಚಿಬಿದ್ದ ಗ್ರಾಹಕ!

ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಉಳ್ಳೆಸೂಗುರು ಗ್ರಾಮದ ಭೀಮಣ್ಣ ಪರಿವಾರ ಸಮೇತ ನಗರಕ್ಕೆ ಆಗಮಿಸಿದ್ರು. ಹತ್ತಿ ಮಾರಾಟ ಮಾಡಿದ್ದರಿಂದ ಮಾಲೀಕರು ಚೆಕ್ ನೀಡಿದ್ದರು. ಅದನ್ನು ಅಮರ್​ ಲೇಔಟ್​ ಬಳಿಯ ಎಸ್​ಬಿಐ ಬ್ಯಾಂಕ್​ನಿಂದ ಡ್ರಾ ಮಾಡಿಕೊಂಡು, ಆಸ್ಪತ್ರೆಗೆ ಬಂದಿದ್ರು. 

ಸ್ಕ್ಯಾನಿಂಗ್ ಆದ ಬಳಿಕ, ಆಸ್ಪತ್ರೆ ಎದುರಿನ ಭವಾನಿ ಹೋಟೆಲ್​ ನಲ್ಲಿ ಟೀ ಕುಡಿಯೋದಕ್ಕೆ ಬಂದಿದ್ರು. ಇದೇ ಸಮಯಕ್ಕೆ ಹೊಂಚು ಹಾಕಿ ಕೂತಿದ್ದ ಇಬ್ಬರು ಖದೀಮರು, ಭೀಮಪ್ಪ ಕೈ ತೊಳೆಯಲು ಹೋಗ್ತಿದ್ದಂತೆ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ.
 
ಸದ್ಯ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೀತಿದೆ. ಇದೇ ರೀತಿ ಕಳೆದ ನವೆಂಬರ್ 21 ರಂದು ನಗರದ ಅಂಬೇಡ್ಕರ್ ಬಡಾವಣೆ ಬಳಿಯ ಅಂಚೆ ಕಚೇರಿ ಆವರಣದಲ್ಲಿ ಸರ್ಕಾರಿ ಉಯ್ಯೋಗಿಯೊಬ್ಬರ ಹಣ ತುಂಬಿದ್ದ ಬ್ಯಾಗ್ ಕದ್ದು ಖದೀಮರು ಮರಾರಿಯಾಗಿದ್ರು.

PWD ಇಂಜಿನಿಯರ್ ಆಗಿರೋ ಶರಣಗೌಡ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಟೇಷನ್ ರಸ್ತೆಯಲ್ಲಿರೋ SBIನಲ್ಲಿ 3 ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ರು. ಕಟ್ಟಡ ಕಾರ್ಮಿಕರಿಗೆ ಹಣ ನೀಡ್ಬೇಕಾಗಿದ್ದ ನಿಮ್ಮತ್ತ ತರಾತುರಿಯಲ್ಲೇ ಅಲ್ಲಿಂದ ಮನೆಗೆ ಹೊರಟಿದ್ರು.

 ಈ ಮಧ್ಯೆ ಶರಣಗೌಡ ಅವರ ಎಸ್ಬಿಐ ಎಟಿಎಮ್ ಕಾರ್ಡ್ ಅಂಚೆ ಕಚೇರಿಗೆ ಬಂದಿರೋ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಾರ್ಗ ಮಧ್ಯೆ ಅಂಚೆ ಕಚೇರಿಗೆ ಹೋಗಿ ಕಾರ್ಡ್ ಪಡೆದುಕೊಳ್ಳಲು ಅವರು ಮುಂದಾಗಿದ್ರು. ಬ್ಯಾಂಕ್ ಬಳಿಯಿಂದಲೇ ಬ್ಲೂ ಕಲರ್ ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಖದೀಮರು, ಅಂಚೆ ಕಚೇರಿ ಬಳಿ ಬರ್ತಿದ್ದಂತೆ ಬ್ಯಾಗ್ ಕಸೆಯಲು ಮುಂದಾಗಿದ್ರು. 

ಬ್ಯಾಗ್ ಕಿತ್ತುಕೊಳ್ಳುವಾಗ ತಡೆಯೊಡ್ಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹಣ ತುಂಬಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತಿಂಗಳ ಅಂತರದಲ್ಲಿ 2 ಪ್ರಕರಣ ನಡೆದಿರೋದು ಜನರಲ್ಲಿ ಆತಂಕ ಮೂಡಿಸಿದೆ.

Follow Us:
Download App:
  • android
  • ios