ಬೆಂಗಳೂರಿನಲ್ಲಿ ಬ್ಯಾಡರಹಳ್ಳಿಯ ಪುಡಿ ರೌಡಿ ಸನ್ನಿ ಬೆಳ್ಳಂಬೆಳಗ್ಗೆ ಲಾಂಗ್ ಹಿಡಿದು ಹುಲಿಯೂರಮ್ಮ ದೇವಾಲಯದ ಬಳಿ ಅವಾಂತರ ಸೃಷ್ಟಿಸಿದ್ದಾನೆ. 'ನಂದೆ ನಮ್ಮ ಹುಡುಗಿ' ಎಂದು ಕೂಗುತ್ತಾ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿ ಭೀತಿ ಹುಟ್ಟಿಸಿದ್ದಾನೆ.
ಬೆಂಗಳೂರು: ಪುಡಿ ರೌಡಿಯಾಗಿ ಗುರುತಿಸಲ್ಪಟ್ಟ ಬ್ಯಾಡರಹಳ್ಳಿಯ ಸನ್ನಿ ಇದೀಗ ಮತ್ತೆ ತನ್ನ ಅಟ್ಟಹಾಸದಿಂದ ಸುದ್ದಿಯಲ್ಲಿದ್ದಾನೆ. ಬೆಳ್ಳಂಬೆಳಗಿನ ಗಂಟೆ 5ರ ಸುಮಾರಿಗೆ, ಕೈಯಲ್ಲಿ ಲಾಂಗ್ ಹಿಡಿದು ವಿಗ್ನೇಶ್ವರ ನಗರದಲ್ಲಿರುವ ಹುಲಿಯೂರಮ್ಮ ದೇವಾಲಯದ ಬಳಿ ಅಸಭ್ಯವಾಗಿ ವರ್ತಿಸಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ನಂದೆ ನಮ್ಮ ಹುಡುಗಿ’’ ಹೇಳಿದ ಸನ್ನಿ, ಅಡ್ಡಬಂದವರಿಗೆ ಬೆದರಿಕೆ
ಹುಲಿಯೂರಮ್ಮ ದೇವಾಲಯವೂ ನಂದೆ ನಮ್ಮ ಹುಡುಗಿಯೂ ನಂದೆ ಕೈಯಲ್ಲಿ ಲಾಂಗ್ ಹಿಡಿದು ಬ್ಯಾಡರಹಳ್ಳಿಯ ರೌಡಿ ಶೀಟರ್ ಸನ್ನಿ ನಿಂದ ಅವಾಜ್ ಬೆಳ್ಳಂಬೆಳಿಗೆ ಲಾಂಗ್ ಹಿಡಿದು ಏರಿಯಾದಲ್ಲಿ ಹವಾ ಮೈಂಟೈನ್ , ನಂದೆ ನಮ್ಮ ಹುಡುಗಿ, ತಂಟೆಗೆ ಯಾರಾದ್ರು ಬಂದ್ರೆ ಮುಗಿಸಿ ಬಿಡ್ತೀನಿ ಎಂದು ಕೈಯಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸುತ್ತಿರುವ ಪುಡಿ ರೌಡಿ ಸನ್ನಿ ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿದ್ದಾನೆ.
ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿದ ಅಟ್ಟಹಾಸ
ಸಿಸಿಟಿವಿಯಲ್ಲಿ ಕಂಡುಬರುವಂತೆ, ಸನ್ನಿ ಲಾಂಗ್ ಹಿಡಿದು ರಸ್ತೆಯಲ್ಲಿ ಅಡ್ಡಬಂದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಅವನ ವರ್ತನೆ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ರೀತಿಯ ಅಕ್ರಮ ವಿರುದ್ಧ ಸಂಬಂಧಿತ ಇಲಾಖೆ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಹವಾ ಮೈಂಟೇನ್’’ ಮಾಡಲು ರೌಡಿಶೀಟರ್‌ನ ಶೈಲಿ
ಪಾಲಿಸ್ ದಾಖಲೆ ಪ್ರಕಾರ, ಸನ್ನಿ ಸ್ಲಿಮ್ ಒಬ್ಬ ರೌಡಿಶೀಟರ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ಆತಂಕವನ್ನು ಉಂಟು ಮಾಡುತ್ತಿವೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಮುಂದಿನ ಕ್ರಮಕ್ಕಾಗಿ ತನಿಖೆ ಆರಂಭಿಸಿದ್ದಾರೆ.
