ಸಬ್ಜಿ ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಸ್ವಿಗ್ಗಿ ಬಾಯ್ ಗುಂಡಿಕ್ಕಿದ!
* ಪಾರ್ಸಲ್ ನೀಡುವುದನ್ನು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಗುಂಡು
* ಶೂಟ್ ಮಾಡಿ ಎಸ್ಕೇಪ್ ಆಗಿದ್ದ ಸ್ವಿಗ್ಗಿ ಡಿಲೆವರಿ ಬಾಯ್
* ಆರೋಪಿಯನ್ನು ಒಂದು ದಿನದಲ್ಲಿ ಬಂಧಿಸಿದ ಪೊಲೀಸರು
*ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆ
ನವದೆಹಲಿ(ಸೆ. 01) ಪಾರ್ಸಲ್ ನೀಡುವುದನ್ನು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನನ್ನು ಸ್ವಿಗ್ಗಿ ಡಿಲಿವರಿ ಬಾಯ್ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಡೆಲಿವರಿ ಬಾಯ್ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಕೊನೆಗೂ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ.
ಕೊಲೆಯಾದ ಹೋಟೆಲ್ ಮಾಲೀಕ ಸುನೀಲ್ ಅಗರ್ವಾಲ್ ಮಿತ್ರ ಎಂಬ ವಸತಿ ಸಂಕೀರ್ಣದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು. ಗ್ರಾಹಕರು ಆನ್ಲೈನ್ ಫುಡ್ ಡಿಲಿವರಿ ಆ್ಯಪ್ ಸ್ವಿಗ್ಗಿ ಮೂಲಕ ಸುನೀಲ್ ಅಗರ್ವಾಲ್ ಹೋಟೆಲ್ನಲ್ಲಿ ಚಿಕಿನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಪಾರ್ಸಲ್ ತೆಗೆದುಕೊಳ್ಳಲು ಡಿಲಿವರಿ ಬಾಯ್ ಹೋಟೆಲ್ ಬಳಿ ಬಂದಿದ್ದ.
ಈ ವೇಳೆ ಸಬ್ಜಿ ನೀಡುವುದು ತಡವಾಗಿದೆ. ಇದೇ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಡಿಲಿವರಿ ಬಾಯ್ ನಡುವೆ ವಾಗ್ವಾದ ನಡೆದಿದೆ. ಡೆಲಿವರಿ ಏಜೆಂಟ್ ಹೋಟೆಲ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ರೆಸ್ಟೋರೆಂಟ್ ಮಾಲೀಕರು ಮಧ್ಯಪ್ರವೇಶಿಸಿದ್ದಾರೆ. ಅಗರ್ವಾಲ್ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಡೆಲಿವರಿ ಏಜೆಂಟ್ ಆತನ ತಲೆಗೆ ಗುಂಡು ಹಾರಿಸಿದ್ದಾನೆ.
ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್.. ಸುಳ್ಳು ನೆಪ ಹೇಳಿ ಹಣ ಪೀಕುತ್ತಿದ್ದ
ಗಂಭೀರ ಗಾಯಗೊಂಡ ಅಗರ್ವಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಾಲೀಕರಿಗೆ ಗುಂಡು ಹಾರಿಸಿರುವ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹೊಟೆಲ್ ಮಾಲೀಕನ ಶೂಟ್ ಮಾಡಿದ ವ್ಯಕ್ತಿ ಅಲ್ಲಿಂದ ಬೈಕ್ ನಲ್ಲಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆತನ ಪತ್ತೆ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರಿವ ಸ್ವಿಗ್ಗಿ, ಈ ರೀತಿಯ ಪ್ರಕರಣ ನಿಜಕ್ಕೂ ವಿಷಾದಕರ, ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಸಡಿಲೆವರಿ ಬಾಯ್ ಗಳ ಹಿನ್ನೆಲೆಯನ್ನು ವಿಮರ್ಶೆ ಮಾಡಿಯೇ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದೆ.