ಜೂನ್ 25 ರಂದು ಮಾಧವನ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ 71 ವರ್ಷದ ಪಿಪಿ ಮಾಧವನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ನವದೆಹಲಿ (ಜೂನ್ 27): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಆಪ್ತ ಸಹಾಯಕ ಪಿಪಿ ಮಾಧವನ್ (personal assistant PP Madhavan) ವಿರುದ್ಧ ಅತ್ಯಾಚಾರ ಪ್ರಕರಣ (Rape Case) ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಮತ್ತು 506 ರ ಅಡಿಯಲ್ಲಿ ದೆಹಲಿಯ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.

ಜೂನ್ 25 ರಂದು ಮಾಧವನ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 71 ವರ್ಷದ ಆರೋಪಿ ಪಿಪಿ ಮಾಧವನ್ (71) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಿಳೆಯೊಬ್ಬರ ದೂರಿನ ಮೇರೆಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಪಿಪಿ ಮಾಧವನ್ ವಿರುದ್ಧ ದೆಹಲಿ ಪೊಲೀಸರು ಅತ್ಯಾಚಾರ ಆರೋಪದ ಕೇಸ್ ದಾಖಲಿಸಿದ್ದಾರೆ. ಅತ್ಯಾಚಾರದ ಜೊತೆಗೆ, ಮಾಧವನ್ ವಿರುದ್ಧ ಪೊಲೀಸರು "ಕ್ರಿಮಿನಲ್ ಬೆದರಿಕೆ" ಆರೋಪವನ್ನೂ ಹೊರಿಸಿದ್ದಾರೆ.

71 ವರ್ಷದ ಪಿಪಿ ಮಾಧವನ್, ಮದುವೆಯ ನೆಪದಲ್ಲಿ ನನ್ನ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಶೋಷಣೆಯನ್ನು ಮಾಡಿದ್ದಾನೆ ಎಂದು ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾಳೆ.ಆಕೆಯ ಹೇಳಿಕೆಯ ಪ್ರಕಾರ, ಪಿಪಿ ಮಾಧವನ್ ಮಹಿಳೆಗೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ ಮತ್ತು ಅವಳನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ನನ್ನ ಒಪ್ಪಿಗೆ ಇಲ್ಲದೇ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಹೋರ್ಡಿಂಗ್‌ಗಳನ್ನು ಹಾಕುವುದು ಹಾಗೂ ಇತರ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯ ಪತ್ನಿ 2020ರಲ್ಲಿ ನಿಧನವಾಗಿದ್ದ. "ಫೆಬ್ರವರಿ 2020 ರಲ್ಲಿ ನನ್ನ ಪತಿಯ ಮರಣದ ನಂತರ, ನಾನು ಕೆಲಸ ಹುಡುಕಲು ಪ್ರಾರಂಭಿಸಿದೆ ಮತ್ತು ಮಾಧವನ್ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರು ಮೊದಲು ನನ್ನನ್ನು ಸಂದರ್ಶನಕ್ಕೆ ಕರೆದರು. ಬಳಿಕ ನನ್ನೊಂದಿಗೆ ವಿಡಿಯೋ ಕರೆ ಹಾಗೂ ವಾಟ್ಸಾಪ್‌ನಲ್ಲಿ ಚಾಟ್‌ ಮಾಡಲು ಆರಂಭಿಸಿದ್ದರು' ಎಂದು ಅವರು ಹೇಳಿಕೊಂಡಿದ್ದಾರೆ.

"ಅವರು ನನ್ನನ್ನು ಉತ್ತಮ್ ನಗರ ಮೆಟ್ರೋ ನಿಲ್ದಾಣದ ಬಳಿಯಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು ಮತ್ತು ಅವರ ಕಾರಿನೊಳಗೆ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಫೆಬ್ರವರಿ 2022 ರಲ್ಲಿ, ಅವರು ನನ್ನನ್ನು ಸುಂದರ್ ನಗರದ ಫ್ಲಾಟ್‌ಗೆ ಕರೆದೊಯ್ದು ನನ್ನ ಒಪ್ಪಿಗೆಯಿಲ್ಲದೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ.

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

ಈ ಕುರಿತಂತೆ ಖಾಸಗಿ ಟಿವಿ ಟಿವಿ ಪಿಪಿ ಮಾಧವನ್ ಅವರ ಹೇಳಿಕೆಯನ್ನು ಪಡೆಯಲು ಯತ್ನಿಸಿದೆ. ಸಭೆಯಲ್ಲಿದ್ದ ಅವರು, ಅದರ ನಡುವೆಯೇ, ನಮ್ಮ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳು ಪಿತೂರಿ ಮತ್ತು ಆಧಾರರಹಿತ ಎಂದು ಹೇಳಿದ್ದಾರೆ. "ಹಿರಿಯ ರಾಜಕೀಯ ನಾಯಕರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ 71 ವರ್ಷದ ವ್ಯಕ್ತಿಯ ಮೇಲೆ ಅತ್ಯಾಚಾರದ ಆರೋಪದ ಕೇಸ್ ದಾಖಲಿಸಲಾಗಿದೆ' ಎಂದು ದೆಹಲಿ ಪೊಲೀಸರು ಕೂಡ ಹೇಳಿದ್ದಾರೆ.

National Herald Case ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ದಿನಾಂಕ ಸೂಚಿಸಿದ ಇಡಿ!

ಈ ನಡುವೆ ಪಿಪಿ ಮಾಧವನ್, ನನಗೆ ಆಕೆಯ ಬಗ್ಗೆ ಗೊತ್ತು. ಆದರೆ, ಆರೋಪಗಳು ಆಧಾರರಹಿತ ಎಂದು ಹೇಳಿದ್ದಾರೆ. ಉದ್ಯೋಗ ಮತ್ತು ಮದುವೆಯ ನೆಪದಲ್ಲಿ ಮಾಧವನ್ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸುವ ನಡುವೆ ಆರೋಪಗಳ ಬಗ್ಗೆ ಮಾಧವನ್ ಪ್ರತಿಕ್ರಿಯೆಯನ್ನೂ ನೀಡಿದ್ದು, ಮಹಿಳೆಯ ಬಗ್ಗೆ ನನಗೆ ಗೊತ್ತ, ಆದರೆ ಆರೋಪಗಳು ಸುಳ್ಳು ಎಂದು ಹೇಳಿದರು.