ಹೆಬ್ಬಾಳ ನಿವಾಸಿ 26 ವರ್ಷದ ಕಿರುತೆರೆ ನಟಿ ಕೊಟ್ಟದೂರಿನ ಮೇರೆಗೆ ಹೈದರಾಬಾದ್‌ ಮೂಲದ ನಿರ್ಮಾಪಕ ಆರೋಪಿ ಸಂಗಮೇಶ್‌ ಪಾಟೀಲ್‌ ಎಂಬುವನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರು ವರ್ಷಗಳ ಹಿಂದೆ ಕೃತ್ಯ ನಡೆದಿದ್ದು, ಯುವತಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕಿರುತೆರೆ ನಟಿಯಾಗಿರುವ ಯುವತಿಗೆ 2013ರಲ್ಲಿ ನಿಮಾರ್ಪಕ ಎಂದು ಹೇಳಿಕೊಂಡು ಸಂಗಮೇಶ್‌ ಕರೆ ಮಾಡಿದ್ದ. ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಚಿತ್ರರಂಗದವೊಬ್ಬರ ಬಳಿ ಪಡೆದೆ. ನಿಮಗೆ ಒಳ್ಳೆಯ ಅವಕಾಶ ಕೊಡಿಸುವುದಾಗಿ ಅಸಭ್ಯವಾಗಿ ವರ್ತಿಸಿದ್ದ.

ಅಂದು ಗಂಡನಿಂದಲೇ ರೇಪ್ ಆದವಳೀಗ ಯಶಸ್ವಿ ಫಿಟ್‌ನೆಸ್ ಟ್ರೈನರ್

ಕೆಲವು ದಿನಗಳ ನಂತರ ಕರೆ ಮಾಡಿ ಹೈದ್ರಾಬಾದ್‌ಗೆ ಬಂದರೆ ಸಿನಿಮಾವೊಂದರಲ್ಲಿ ನಾಯಕನಟಿ ಪಾತ್ರ ಕೊಡಿಸುವುದಾಗಿ ಹೇಳಿದ್ದ. ಅದರಂತೆ ಸಂತ್ರಸ್ತೆ ಹೈದರಾಬಾದ್‌ಗೆ ಹೋಗಿದ್ದರು. ಆರೋಪಿ ಸಂತ್ರಸ್ತೆಯನ್ನು ಕಾರಿನಲ್ಲಿ ಹೋಟೆಲ್‌ವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಮತ್ತು ಬರುವ ತಂಪು ಪಾನೀಯ ನೀಡಿದ್ದ. ಅರೆ ಪ್ರಜ್ಞಾವಸ್ಥೆಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಎಚ್ಚರಗೊಂಡಾಗ ಅತ್ಯಾಚಾರವಾಗಿರುವುದು ತಿಳಿದುಬಂತು. ಬಳಿಕ ಸಮಾಧಾನಪಡಿಸಿ ನನ್ನನ್ನು ಬೆಂಗಳೂರಿಗೆ ವಾಪಸ್‌ ಕಳುಹಿಸಿ ಕೊಟ್ಟಿದ್ದ. ಅದಾಗ್ಯೂ ನಡೆದ ಘಟನೆಯನ್ನೆಲ್ಲಾ ಮರೆತು ಸುಮ್ಮನಾಗಿದ್ದೆ ಎಂದಿದ್ದಾರೆ.

2014ರಲ್ಲಿ ಕರೆ ಮಾಡಿದ್ದ ಆರೋಪಿ ಕೂಡಲೇ ಗೋವಾಗೆ ಬರುವಂತೆ ಸೂಚಿಸಿದ್ದ. ಇದಕ್ಕೆ ಸಂತ್ರಸ್ತೆ ನಿರಾಕರಿಸಿದಾಗ ‘ನಿನ್ನ ನಗ್ನ ವಿಡಿಯೋಗಳು ತನ್ನ ಬಳಿ ಇದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ’ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ಸಂತ್ರಸ್ತೆ ಗೋವಾಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ.

ಮಕ್ಕಳ ಅತ್ಯಾಚಾರಿಗೆ ಸಾರ್ವಜನಿಕ ಗಲ್ಲು ಶಿಕ್ಷೆ, ಮಸೂದೆ ಪಾಸ್!

ಬಳಿಕ ಮುಂಬೈನಲ್ಲಿ ಐದಾರು ಬಾರಿ ಸಂತ್ರಸ್ತೆ ಮೇಲೆ ನಿರಂತರ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಆಕೆಯ ಮನೆಗೆ ಬಂದು ಹೋಗುತ್ತಿದ್ದು, ಪ್ರತ್ಯೇಕ ಮನೆ ಮಾಡುವಂತೆ ಸೂಚಿಸಿದ್ದ. ಈ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳುವಂತೆ ಸಂತ್ರಸ್ತೆ ಕೇಳಿಕೊಂಡಾಗ ಒಪ್ಪಿಕೊಂಡಿದ್ದ. ಆದರೆ, ಆರೋಪಿ ಹಿನ್ನೆಲೆ ಪರಿಶೀಲಿಸಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುವುದು ಗೊತ್ತಾಗಿದೆ. ಈ ವಿಚಾರ ಪ್ರಶ್ನಿಸಿದ ಸಂತ್ರಸ್ತೆಗೆ ಆರೋಪಿ, ಸುಪಾರಿ ಕೊಟ್ಟು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಸಂತ್ರಸ್ತೆ ವಿರುದ್ಧವೇ ದೂರು ;ಕೊಟ್ಟನಿರ್ಮಾಪಕನ ಪತ್ನಿ!

ಎಲ್ಲ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡ ಆರೋಪಿಯ ಪತ್ನಿ, ಸಂತ್ರಸ್ತೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೈದ್ರಾಬಾದ್‌ಗೆ ಕರೆಸಿಕೊಂಡು, ತನ್ನ ವಿರುದ್ಧವೇ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಳು ಎಂದು ಸಂತಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತನ್ನ ನಗ್ನ ವಿಡಿಯೋ ಮತ್ತು ಚಿತ್ರಗಳನ್ನು ಅಪ್‌ಲೋಡ್‌ ಮಾಡುವುದಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದಲ್ಲದೆ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚಿಸಿದ ಆರೋಪಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಅಮೃತಹಳ್ಳಿ ಪೊಲೀಸರು ವಿವರಿಸಿದರು.