ಇಸ್ಲಮಾಬಾದ್[ಫೆ.10]: ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚುತ್ತಿವೆ. ಹೀಗಿರುವಾಗ ನೆರೆ ರಾಷ್ಟ್ರ ಪಾಕಿಸ್ತಾನ ಸಂಸತ್ತು ಶುಕ್ರವಾರದಂದು ಇಂತಹ ಅಪರಾಧಿಗಳನ್ನು ಸಾರ್ವಜನಿಕ ಗಲ್ಲು ಶಿಕ್ಷೆ ವಿಧಿಸುವ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಗೊತ್ತುವಳಿಯಲ್ಲಿ ಖೈಬರ್ ಪ್ರಾಂತ್ಯದ ನೌಶೇರಾ ಇಲಾಖೆಯಲ್ಲಿ 2018ರಲ್ಲಿ 8 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಈ ಮಸೂದೆಗೆ ಬಹುಮತದಿಂದ ಅನುಮೋದನೆ ಸಿಕ್ಕಿದೆ. ಯಾಕೆಂದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋರವರ PPP ಪಕ್ಷದ ಸಂಸದರು ಹೊರತುಪಡಿಸಿ ಉಳಿದೆಲ್ಲಾ ನಾಯಕರು ಸಮರ್ಥನೆ ನೀಡಿದ್ದಾರೆ.

ಜೈಲು ಛಾವಣಿ ಮುರಿದು ಐವರು ಅತ್ಯಾಚಾರ, ಕೊಲೆ ಆರೋಪಿಗಳು ಪರಾರಿ!

ಮಾಜಿ ಪ್ರಧಾನಿ ಹಾಗೂ PPP ನಾಯಕ ರಜಾ ಪರ್ವೇಜ್ ಈ ಕುರಿತು ಪ್ರತಿಕ್ರಿಯಿಸುತ್ತಾ ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸುವುದು ಸಂಯುಕ್ತ ರಾಷ್ಟ್ರಗಳ ನಿಯಮಗಳ ಉಲ್ಲಂಘನೆಯಾಗಿದೆ ಅಲ್ಲದೇ, ಶಿಕ್ಷೆಯಿಂದ ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. 

1304 ಪ್ರಕರಣಗಳು ಬೆಳಕಿಗೆ

ಪಾಕ್ ಸಂಸತ್ತಿನಲ್ಲಿ ಮಂಡಿಸಲಾದ ಈ ಮಸೂದೆಯಲ್ಲಿ 'ಈ ಸದನ ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಖಂಡಿಸುತ್ತದೆ. ಅಲ್ಲದೇ ಇದನ್ನು ತಡೆಗಟ್ಟಲು ಹಾಗೂ ಅತ್ಯಾಚಾರಿಗಳಿಗೆ ಖಡಕ್ ಸಂದೇಶ ರವಾನಿಸಲು ಕೇವಲ ಗಲ್ಲು ಶಿಕ್ಷೆ ವಿಧಿಸುವುದಲ್ಲ, ಸಾರ್ವಜನಿಕ ಗಲ್ಲುಶಿಕ್ಷೆ ವಿಧಿಸಬೇಕು' ಎಂದಿದೆ. ಇನ್ನು ಈ ಮಸೂದೆಯನ್ನು ವಿಜ್ಞಾನ ಮಂತ್ರಿ ಫವಾದ್ ಚೌಧರಿ ಹಾಗೂ ಮಾನವ ಹಕ್ಕುಗಳ ಸಚಿವ ಶಿರೀನಾ ಮಾಜ್ರೀ ಖಂಡಿಸಿದ್ದಾರೆ. ಆದರೆ ಮಸೂದೆ ಮಂಡನೆ ವೇಳೆ ಈ ಇಬ್ಬರೂ ಸಚಿವರು ಸಂಸತ್ತಿನಲ್ಲಿ ಹಾಜರಿರಲಿಲ್ಲ ಎಂಬುವುದು ಉಲ್ಲೇಖನೀಯ.

ಕೊರೋನಾ ರೋಗ ಮುಚ್ಟಿಟ್ಟರೆ ಮರಣದಂಡನೆ!

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ