ಜೈಪುರ್(ಅ. 04)  ಹತ್ರಾಸ್  ಅತ್ಯಾಚಾರದ ಬಗ್ಗೆ ದೇಶಾದ್ಯಂತ ಪ್ರತಿಭಟನೆ ಬಿಸಿ ಏರುತ್ತಿರುವಾಗ ಅಂಥದ್ದೆ ಮತ್ತೊಂದಿಷ್ಟು ಕ್ರೌರ್ಯದ ಘಟನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ರಾಜಸ್ಥಾನದ ಉದಯಪುರ ಜಿಲ್ಲೆಯಿಂದ ಲೈಂಗಿಕ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ, ಇಬ್ಬರು ಯುವಕರು 19 ವರ್ಷದ ಯುವತಿಯನ್ನು ನಾಲ್ಕು ವರ್ಷಗಳಿಗಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದರು. ಸೆಪ್ಟೆಂಬರ್ 26 ರಂದು ಆರೋಪಿಯೊಬ್ಬರು  ಯುವತಿಯ ಮನೆಗೆ ನುಗ್ಗಿ ಅವಳ ಮೇಲೆ ಹಲ್ಲೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗ್ರಾಮದ ವಾಟ್ಸಪ್‌ ಗ್ರೂಪ್‌ಗೆ ವಿಡಿಯೋ!

ಜೈಪುರದ ಜರ್ನೋ ಕಿ  ಸಾರೈ ಗ್ರಾಮದ  ಸಂತ್ರಸ್ತೆ  ಪ್ರತಾಪ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಭಾವಿಗಳಾಗಿರುವ ಇಬ್ಬರು ವ್ಯಕ್ತಿಗಳು ನಾಲ್ಕು ವರ್ಷದಿಂದ ದೌರ್ಜನ್ಯ ಮಾಡುತ್ತಿರುವುದು  ಬೆಳಕಿಗೆ ಬಂದಿದೆ. ಅತ್ಯಾಚಾರ ಮಾಡಿದ್ದು ಅಲ್ಲದೇ ಅದನ್ನು ವಿಡಿಯೋ ಮಾಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು.

ಭುವನಾದ ಒಬ್ಬ ಹೇಮೇಂದ್ರ ಸಾಲ್ವಿ ಅಕಾ ಗಟ್ಟು ಎಂಬಾತ ಯುವತಿ  ನಾಲ್ಕು ವರ್ಷಗಳ ಹಿಂದೆ ಖೇಂಪುರಾದಲ್ಲಿ ತನ್ನ ಅಜ್ಜಿಯ ನಿವಾಸದಲ್ಲಿದ್ದಾಗ ಅವಳೊಂದಿಗೆ ಸ್ನೇಹ ಬೆಳೆಸಿದ. ಅವಕಾಶ ಬಳಸಿಕೊಂಡು ಆಕೆಯನ್ನು ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.  ಈ ವೇಳೆ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸ್ನೇಹಿತ ಸುಂದರವಾಸ್ ನಿವಾಸಿ ಅನಿಲ್ ಸಾಲ್ವಿ ಎಂಬಾತನೊಂದಿಗೆ ಹಂಚಿಕೊಂಡು ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಮಾಡುತ್ತ ಬಂದಿದ್ದರು. ಯಾರ ಮುಂದೆ ಹೋದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು.

ಯುವತಿ ಒಬ್ಬಳೆ ಮನೆಯಲ್ಲಿದ್ದಾಗ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ನಂತರ ಕುಟುಂಬ ಪೊಲೀಸರ ಮೊರೆ ಹೋಗಿದೆ.