ಪುಣೆ (ಜೂ. 14)  ಈತ ಅಂತಿಂಥ ಕಳ್ಳ ಅಲ್ಲ. ಬಹಳ ಚಾಲಾಕಿ.. ಲಾಕ್ ಡೌನ್ ಸಂದರ್ಭ ಬಂಧಿಸಲಾಗಿದ್ದು ಸಿಕ್ಕಿದ ಮೊತ್ತ ನೋಡಿ ಪೊಲೀಸರೇ ಹೌಹಾರಿದ್ದಾರೆ.

1.74 ಕೋಟಿ ರೂ. ಕಳ್ಳತನ ಮಾಡಿದ್ದ ಆರೋಪಿಯನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.   ಹಲವಾರು ಕಳ್ಳತನದ ಆರೋಪದ ಮೇಲೆ ಪೊಲೀಸರು ಅಂಕಿತ್ ಸರೇಂದ್ರ ಬುದಾನೆ (31) ಎಂಬಾತನನ್ನು ಶನಿವಾರ ಬಂಧಿಸಿದ್ದಾರೆ.

ಹೆಸರಿಗೆ ಸನ್ಯಾಸಿ, ಇಟ್ಕೊಂಡಿದ್ದೆಲ್ಲ ಅಂಥ ಚಿತ್ರಗಳೆ

ಬಂಧಿತನಿಂದ 98. 10 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಕಳ್ಳತನ ಮಾಡಿದ್ದ ಹಣದಿಂದ ಖರೀದಿ ಮಾಡಿದ್ದ 9  ಲಕ್ಷದ ಐಷಾರಾಮಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ.  ಉಳಿದ ಹಣದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈತ ಕಳ್ಳತನದಲ್ಲಿ ಮಾತ್ರ ಚಾಣಾಕ್ಷ ಅಲ್ಲ, ಹುಡುಗಿಯರೊಂದಿಗೆ ಚಾಟ್ ಮಾಡುವುದರಲ್ಲಿಯೂ ಪ್ರವೀಣ. ವಿವಿಧ ಡೇಟಿಂಗ್ ವೆಬ್ ಸೈಟ್ ಗಳ ಮುಖೇನ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯರಿಂದ ಆಭರಣ ಪಡೆದುಕೊಂಡಿದ್ದ ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ.