ನಾಪತ್ತೆಯಾಗಿದ್ದ ಸರ್ಕಾರಿ ಶಾಲೆಯ 5ನೇ ಕ್ಲಾಸ್ ಬಾಲಕಿ ಶವ ಮೋರಿಯಲ್ಲಿ ಪತ್ತೆ
ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ 9 ವರ್ಷದ ಬಾಲಕಿ ಮೋರಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪುದುಚೇರಿಯ ಮುಥಿಯಲ್‌ಪೇಟೆಯಲ್ಲಿ ನಡೆದಿದೆ.
ಪುದುಚೇರಿ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ 9 ವರ್ಷದ ಬಾಲಕಿ ಮೋರಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪುದುಚೇರಿಯ ಮುಥಿಯಲ್‌ಪೇಟೆಯಲ್ಲಿ ನಡೆದಿದೆ. ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸಿ ಬಳಿಕ ಕೊಲೆ ಮಾಡಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಲಕಿಯನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಆಗ್ರಹಿಸಿದ್ದ ಬಾಲಕಿ ವಾಸವಾಗಿದ್ದ ನೆರೆಹೊರೆಯ ಮನೆಯವರು ಹಾಗೂ ಪೋಷಕರು, ಬಾಲಕಿ ಶವವಾಗಿ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಉದ್ರಿಕ್ತಗೊಂಡಿದ್ದು, ಸಮೀಪದ ಎಂಜಿ ರೋಡ್ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಬಾಲಕಿಯನ್ನು ಗುಂಪು ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿರಬಹುದೇ ಎಂಬ ವಿಚಾರವನ್ನು ಪೊಲೀಸರು ಖಚಿತಪಡಿಸಿಲ್ಲವಾದರೂ ನಿರಾಕರಿಸಿಯೂ ಇಲ್ಲ, ಈ ಬಾಲಕಿ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಶವ ಪತ್ತೆಯಾಗುವುದಕ್ಕೂ ಮೊದಲು ಪೊಲೀಸರು ಅಪ್ರಾಪ್ತ ಹುಡುಗರು ಸೇರಿದಂತೆ ಆರು ಜನರ ವಿಚಾರಣೆ ನಡೆಸಿದ್ದರು.
ನನಗೆ ಪ್ರೀತಿಸೋ ಹಕ್ಕಿಲ್ಲವೇ?
ಮಂಗಳೂರಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್, ಕತಾರ್ ದೇಶಕ್ಕೆ ಹೋಗಿರುವುದು ತಿಳಿದು ಬಂದಿದೆ. 'ನಾನು ಪ್ರಬುದ್ಧಳಾಗಿದ್ದೇನೆ. ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಕತಾರ್‌ನಿಂದಲೇ ಆಕೆ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಾಳೆ.
ಮಂಗಳೂರಿನ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ತನಿಖೆ ನಡೆಸಿದ್ದರು. ಲವ್ ಜಿಹಾದ್ ಮಾಡಿದ್ದಾನೆ ಎನ್ನಲಾದ ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಶಾರೂಕ್ ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾರೂಕ್-ಚೈತ್ರಾ ಹೆಬ್ಬಾರ್ ಪ್ರೀತಿ ವಿಚಾರ ಬೆಳಕಿಗೆ ಬಂದಿದೆ. ತಾನು ಚೈತ್ರಾ ಹೆಬ್ಬಾರ್ ಪ್ರೀತಿಸುತ್ತಿರುವುದಾಗಿ ಶಾರೂಕ್ ಒಪ್ಪಿಕೊಂಡಿದ್ದಾನೆ. ಆದರೆ ಚೈತ್ರಾ ಹೆಬ್ಬಾರ್ ವಿಸಿಟಿಂಗ್ ವೀಸಾದಡಿ ದೇಶಬಿಟ್ಟು ಕತಾರ್‌ಗೆ ತೆರಳಿರುವುದು ದೃಢಪಟ್ಟಿದೆ. ಇದೀಗ ಅಲ್ಲಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಮಾಡಿದ್ದು, ನಾನು ಪ್ರಬುದ್ಧಳಾಗಿದ್ದು, ನನಗೆ ಪ್ರೀತಿಸುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿ ಮೇಲ್ ಮಾಡಿದ್ದಾಳೆ.