ಬೆಂಗಳೂರು (ಮಾ. 09)  ಪಿಯು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾಮನೆ.

ವಿದ್ಯಾರ್ಥಿಯನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಯಶವಂತಪುರದಲ್ಲಿ ಘಟನೆ ನಡೆದಿದೆ.  ಫೈಯಾಜ್ (16) ಕೊಲೆಯಾದ ವಿದ್ಯಾರ್ಥಿ. ಯಶವಂತಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪ್ಪಿಕೊಂಡು ಮುದ್ದಾಡುತ್ತಲೆ ಗರ್ಭಿಣಿ ಗರ್ಲ್ ಫ್ರೆಂಡ್ ಕತ್ತು ಸೀಳಿದ

ಸುಮಾರು ಐದು ಗಂಟೆಯ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ. ಕೆಲವು ಹುಡುಗರು ಒಬ್ಬ ಹುಡುಗನನ್ನುಅಟ್ಟಿಸಿಕೊಂಡು ಬಂದ್ರು.ಹುಡುಗ ಬಿಡುವಂತೆ ಕಿರಿಚಿದ್ರು ಕೂಡ ಬಿಡಲಿಲ್ಲ ಎಂದು  ಸ್ಥಳೀಯರಾದ ಮಂಜೇಗೌಡ ಹೇಳಿದ್ದಾರೆ.

ಹುಡುಗಿ ವಿಚಾರಕ್ಕೆ ಕಿತ್ತಾಡಿಕೊಂಡಿರುವ ಶಂಕೆ. ವ್ಯಕ್ತವಾಗಿದೆ. ಇಬ್ಬರ ನಡುವಿನ ಕಿತ್ತಾಟದಲ್ಲಿ ಸಹಾಯಕ್ಕೆ ಬಂದ ಮೂರನೆಯವನಿಗೆ ಚಾಕುವಿನಿಂದ ಇರಿಯಲಾಗಿದೆ.  ಖಾಸಗಿ ಕಾಲೇಜಿನಲ್ಲಿ‌ ಪ್ರಥಮ ಪಿ.ಯು ವ್ಯಾಸಾಂಗ ಮಾಡುತ್ತಿದ್ದ ಫೈಯಾಜ್ ಹತ್ಯೆಯಾಗಿದ್ದಾನೆ.