ಕೋಝಿಕೋಡ್(ನ.  17)  ಕೇರಳದಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಕೋರೋನಾ ಸಂಕಿತೆ ಮೇಲೆಯೇ ಅತ್ಯಾಚಾರ ಎಸಗಲು ಯತ್ನ ಮಾಡಿದ್ದಾನೆ.  ಆರೋಪಿಯನ್ನು 34 ವರ್ಷದ ಅಶ್ವಿನ್ ಕೃಷ್ಣ ಎಂದು ಗುರುತಿಸಲಾಗಿದೆ.

ಕೋಝಿಕೋಡ್ ಜಿಲ್ಲೆಯ ಉಲ್ಲೇರಿ ಪ್ರದೇಶದ ಮಲಬಾರ್ ವೈದ್ಯಕೀಯ ಕಾಲೇಜು ಕಾಲೇಜಿನಲ್ಲಿ ಭಾನುವಾರ  ರಾತ್ರಿ ನಡೆದ ಘಟನೆ ಬೆಳಕಿಗೆ ಬಂದಿದೆ. 

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನ್ ಕೃಷ್ಣ, ರಿಜಿಸ್ಟರ್‌ನಿಂದ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ವಾಟ್ಸಪ್ ಮೂಲಕ ಮೆಸೇಜ್ ಮಾಡುತ್ತ ದೌರ್ಜನ್ಯ ಎಸಗಲು ಆರಂಭಿಸಿದ್ದಾನೆ.

ನಿದ್ರಿಸುತ್ತಿದ್ದವಳ ಮೇಲೆ ರೇಪ್; ಬಾಯಿ ಬಿಟ್ಟರೆ ವಿಡಿಯೋ ಇದೆ

ಮಹಿಳೆಗೆ ಕಿರುಕುಳ ಗಮನಕ್ಕೆ ಬಂದ ಮೇಲೆ ಈ ವಿಚಾರವನ್ನು ವೈದ್ಯರಿಗೆ ತಿಳಿಸಿದ್ದಾಳೆ.  ಈ ನಡುವೆ ರೋಗಿಯನ್ನು ನಾಲ್ಕನೇ  ಪ್ಲೋರ್ ಗೆ ಕರೆದುಕೊಂಡು ಹೋಗಬೇಕಾದ ಸಂದರ್ಭ ಲಿಫ್ಟ್ ನಲ್ಲಿಯೇ ಆರೋಪಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆ.

ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಸಂತ್ರಸ್ತೆ ಆಸ್ಪತ್ರೆಯ ಉಳಿದ ರೋಗಿಗಳಿಗೆ, ಉಳೀದ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ನಂತರ ದೂರು ನೀಡಿದ್ದು ಅಶ್ವಿನ್ ನನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ ನಲ್ಲಿಯೂ ಇಂಥದ್ದೆ ಘಟನೆ ನಡೆದಿತ್ತು.  ಆಂಬುಲೆನ್ಸ್ ಚಾಲಕ ಮಹಿಳಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದ ಘಟನೆಯೂ ಕೇರಳದಿಂದ ವರದಿಯಾಗಿತ್ತು.