ಹೈದರಾಬಾದ್(ಡಿ. 28)  ಖ್ಯಾತ ಕಿರುತೆರೆ ನಟಿ, ನಿರೂಪಕಿ ರೇಖಾ ಪತಿ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ರೇಖಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾರ್ಯಕ್ರಮ ನಿರೂಪಣೆಯಲ್ಲೂ ಬ್ಯುಸಿಯಾಗಿರುವ ರೇಖಾ ಅವರ ಪತಿ ಗೋಪಿನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗುತ್ತಿದೆ.

ಡೆತ್ ನೋಟ್ ಬರೆದಿಟ್ಟು ನದಿಗೆ  ಜಿಗಿದ ಬಾಗಲಕೋಟೆ ಯುವತಿ

ಜೆಜೆ ನಗರದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಗೋಪಿನಾಥ್ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದು ಈ ಸಂಬಂಧ ಮನೆಯಲ್ಲಿ ದಂಪತಿಗಳ ನಡುವೆ ಜಗಳವಾಗುತ್ತಿತ್ತು ಎಂಬ ಆರಂಭಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಗುರುವಾರ ಸಹ ಇಬ್ಬರು ಜಗಳವಾಡಿಕೊಂಡಿದ್ದಾರೆ. ನಂತರ ಕಚೇರಿಗೆ ಹೋದ ಗೋಪಿನಾಥ್ ಕೆಲಸ ಮಾಡುವ ಕಚೇರಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂಬುದು ಪೊಲೀಸರು ನೀಡಿರುವ ಮಾಹಿತಿ.