ವಿಧಾನಸಭೆ ಚುನಾವಣೆಯ ನಂತರ ಇದೇ ಮೊದಲ ಬಾರಿ ದಿಢೀರ್‌ ಎಂದು ಕಾರ್ಯಾಚರಣೆಗೆ ಇಳಿದ ಪೊಲೀಸರು, ಜಿಲ್ಲೆಯ ವಿವಿಧೆಡೆಯಲ್ಲಿ ನೆಲೆಸಿರುವ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. 

ರಾಮನಗರ(ಮೇ.28): ಶುಕ್ರವಾರ ತಡರಾತ್ರಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆ ಮೇಲೆ ದಿಢೀರ್‌ ದಾಳಿ ನಡೆಸಿದ ವಿವಿಧ ಪೊಲೀಸ್‌ ಠಾಣೆಗಳ ಪೊಲೀಸರು ತಪಾಸಣೆ ನಡೆಸಿದ್ದಾರೆ. 

ವಿಧಾನಸಭೆ ಚುನಾವಣೆಯ ನಂತರ ಇದೇ ಮೊದಲ ಬಾರಿ ದಿಢೀರ್‌ ಎಂದು ಕಾರ್ಯಾಚರಣೆಗೆ ಇಳಿದ ಪೊಲೀಸರು, ಜಿಲ್ಲೆಯ ವಿವಿಧೆಡೆಯಲ್ಲಿ ನೆಲೆಸಿರುವ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಪಕ್ಕದಲ್ಲಿರುವ ತಾವರೆಕೆರೆ, ಕುಂಬಳಗೂಡು, ಕಗ್ಗಲೀಪುರ, ಹಾರೋಹಳ್ಳಿ, ಬಿಡದಿ ಸೇರಿದಂತೆ ವಿವಿಧ ಠಾಣೆಗಳ ಪೋಲಿಸರು ಆಯಾ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ಹೊತ್ತಿ ಉರಿದ ಕಾರಿನಿಂದ ಇಬ್ಬರು ಮಕ್ಕಳ ರಕ್ಷಿಸಿದ ಹೀರೋ, ಮರುಕ್ಷಣದಲ್ಲೆ ವಾಹನ ಸ್ಫೋಟ!

ಈ ವೇಳೆ ರೌಡಿಶೀಟರ್‌ಗಳ ಮನೆಯನ್ನು ಸಂಪೂರ್ಣ ತಲಾಷೆ ಮಾಡಿರುವ ಪೊಲೀಸರು, ಮನೆಯಲ್ಲಿನ ಇಂಚಿಂಚು ಜಾಗವನ್ನೂ ಜಾಲಾಡಿದ್ದಾರೆ. ಮನೆಯಲ್ಲಿ ಅಕ್ರಮ ಹಣ, ಮಾರಕಾಸ್ತ್ರಗಳು ಏನಾದರೂ ಇವೆಯೇ ಎಂದು ತಪಾಸಣೆ ನಡೆಸಿದ್ದಾರೆ. ಇದೇ ವೇಳೆ ರೌಡಿಶೀಟರ್‌ಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿರುವ ಪೊಲೀಸರು, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.