ಬೆಳಗಾವಿ ಜಿಲ್ಲೆಯ ಖಾನಾಪುರ ‌ಪಟ್ಟಣದ ಆಮಂತ್ರಣ ಲಾಡ್ಜ್‌‌ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ರಕ್ಷಣೆಗೆ ಒಳಗಾದ ಮಹಿಳೆಯರನ್ನು ಬೆಳಗಾವಿ ‌ಸಾಂತ್ವಾನ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. 

ಬೆಳಗಾವಿ(ಅ.16): ಲಾಡ್ಜ್‌ನಲ್ಲಿ ಹೈಟೆಕ್ ‌ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ‌ ಪೊಲೀಸರ ದಾಳಿ ಮಾಡಿದ ಘಟನೆಬೆಳಗಾವಿ ಜಿಲ್ಲೆಯ ಖಾನಾಪುರ ‌ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ದಾಳಿ ವೇಳೆ 11 ಗ್ರಾಹಕರನ್ನು ವಶಕ್ಕೆ ಪಡೆದು ಐವರು ಮಹಿಳೆಯ‌ನ್ನು ಪೊಲೀಸರು ರಕ್ಷಿಸಿದ್ದಾರೆ.

ಖಾನಾಪುರ ‌ಪಟ್ಟಣದ ಆಮಂತ್ರಣ ಲಾಡ್ಜ್‌‌ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ರಕ್ಷಣೆಗೆ ಒಳಗಾದ ಮಹಿಳೆಯರನ್ನು ಬೆಳಗಾವಿ ‌ಸಾಂತ್ವಾನ ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಸಿಸಿಬಿ ಪೊಲೀಸರ ಭರ್ಜರಿ ದಾಳಿ; ಇವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ

ಲಾಡ್ಜ್ ‌ಮಾಲೀಕ ವಿನಾಯಕ ಮಾಂಜರೇಕರ ವಿರುದ್ಧ ದೂರು ದಾಖಲಾಗಿದೆ. ಖಾನಾಪುರ ‌ಠಾಣೆಯ ಪಿಐ‌ ಮಂಜುನಾಥ ‌ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಲಾಡ್ಜ್‌ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.