Asianet Suvarna News Asianet Suvarna News

ಹೊನ್ನಾಳಿಯಲ್ಲಿ ಬರೋಬ್ಬರಿ 26 ಬೈಕ್‌ ವಶ: ನಕಲಿ ದಾಖಲೆ ಸೃಷ್ಟಿಸಿ ಮಾರುತ್ತಿದ್ದ ಖದೀಮರು!

ಪಟ್ಟಣದ ಟಿ.ಬಿ.ಸರ್ಕಲ್‌ ಬಳಿ ಕಳವಾಗಿದ್ದ ಎಚ್‌.ಎಫ್‌.ಬೈಕ್‌ ಪ್ರಕರಣ ದಾಖಲು ಮಾಡಿಕೊಂಡ ಹೊನ್ನಾಳಿ ಪೊಲೀಸರು ತನಿಖೆ ಮಾಡಿದಾಗ ಸಿಕ್ಕಿದ್ದು ಬರೋಬ್ಬರಿ 26 ಬೈಕ್‌ಗಳು.

Police found 26 stolen bikes in Honnali at davanagere rav
Author
First Published Apr 30, 2023, 11:07 AM IST | Last Updated Apr 30, 2023, 11:07 AM IST

ಹೊನ್ನಾಳಿ (ಏ.30) : ಪಟ್ಟಣದ ಟಿ.ಬಿ.ಸರ್ಕಲ್‌ ಬಳಿ ಕಳವಾಗಿದ್ದ ಎಚ್‌.ಎಫ್‌.ಬೈಕ್‌ ಪ್ರಕರಣ ದಾಖಲು ಮಾಡಿಕೊಂಡ ಹೊನ್ನಾಳಿ ಪೊಲೀಸರು ತನಿಖೆ ಮಾಡಿದಾಗ ಸಿಕ್ಕಿದ್ದು ಬರೋಬ್ಬರಿ 26 ಬೈಕ್‌ಗಳು.

ಮಾ.16ರಂದು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದಾಗ ಬೈಕ್‌ ದಾವಣಗೆರೆ(Davanagere bike stealing)ಯಲ್ಲಿ ಪ್ರತಿನಿತ್ಯ ಓಡಾಡುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕಿದೆ. ನಂತರ ಹೊನ್ನಾಳಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಿದ್ದೇಗೌಡ ನೇತೃತ್ವದಲ್ಲಿ ದಾವಣಗೆರೆ ನಿಟ್ಟುವಳಿಯ ಸಿದ್ದೇಶ್‌ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಿದ್ದೇಶ್‌ ಹಾಗೂ ಮಂಜುನಾಥ ಹೊನ್ನಾಳಿ, ದಾವಣಗೆರೆ, ಚನ್ನಗಿರಿ, ಹೊಳಲ್ಕೆರೆ, ಜಗಳೂರು, ಹರಪನಹಳ್ಳಿ, ಹಾವೇರಿ, ರಾಣೇಬೆನ್ನೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಇನ್ನಿತರೆಡೆಗಳಲ್ಲಿ ನಕಲಿ ಕೀ ಬಳಸಿ ಬೈಕ್‌ ಕದ್ದು ಆರ್‌ಟಿಒ ಏಜೆಂಟ್‌ ಹಾಗೂ ಆಟೋ ಲಿಂಕ್ಸ್‌ನÜಲ್ಲಿ ಕೆಲಸ ಮಾಡುತ್ತಿದ್ದ ನಿಟ್ಟುವಳ್ಳಿಯ ಪ್ರಕಾಶ್‌, ಕಲಾಮುದ್ದಿನ್‌ ಹಾಗೂ ಮಹಮ್ಮದ್‌ ಯಾಸೀರ್‌ ಅರಾಫÜತ್‌ ಮುಖಾಂತರ ನಕಲಿ ದಾಖಲೆ ಸೃಷ್ಟಿಸಿ ಬೈಕ್‌ಗಳ ಮಾರುತ್ತಿದ್ದರೆಂದು ವಿಚಾರಣೆಯಿಂದÜ ತಿಳಿದು ಬಂದಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕೂಲಿ ಕೆಲಸ ಜತೆಗೆ ಪಾರ್ಟ್ ಟೈಂ ಜಾಬ್ ಕಳ್ಳತನ, ಶೋಕಿಗಾಗಿ ಕದ್ದ ಬೈಕ್ ಗಿರವಿಯಿಟ್ಟು ಮೋಜು!

ಕಳವು ಮಾಡುತ್ತಿದ್ದ ಸಿದ್ದೇಶ್‌, ಮಂಜುನಾಥ್‌, ನಕಲಿ ದಾಖಲೆ ಸಷ್ಟಿಸಿ ಮಾರಾಟಕ್ಕೆ ಸಹಾಯ ಮಾಡುತ್ತಿದ್ದ ಪ್ರಕಾಶ್‌, ಕಲಾಮುದ್ದಿನ್‌ ಹಾಗೂ ಮಹಮದ್‌ ಯಾಸೀರ್‌ ಅರಾಫÜತ್‌ ಸೇರಿ ಒಟ್ಟು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೊನ್ನಾಳಿ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ಬೇಧಿಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದ ಎಲ್ಲಾ ಪೊಲೀಸರಿಗೂ ಪುರಸ್ಕಾರಕ್ಕೆ ಇಲಾಖೆಗೆ ಪತ್ರ ಬರೆಯುವುದಾಗಿ ದಾವಣಗೆರೆ ಎಸ್ಪಿ ಡಾ.ಅರುಣ್‌ ಕೆ. ತಿಳಿಸಿದ್ದಾರೆ ಎಂದರು.

ಗ್ರಾಹಕರ ಸೋಗಿನಲ್ಲಿ ಬಂದು ಜುವೆಲ್ಲರಿಯಿಂದ ಚಿನ್ನಾಭರಣ ಕಳವು

ಉಡುಪಿ: ಇಲ್ಲಿನ ಕನಕದಾಸ ರಸ್ತೆಯಲ್ಲಿರುವ ಎಸ್‌. ಕಿಶೋರ್‌ ಆಚಾರ್ಯ ಎಂಬವರ ಜುವೆಲ್ಲರಿ ಶಾಪ್‌ನಲ್ಲಿ ಗುರುವಾರ ಕಳ್ಳತನ ನಡೆದಿದೆ.

 

Bengaluru Crime: ಬೆಂಗಳೂರಲ್ಲಿ ಬೈಕ್‌ ಕದ್ದು ಉತ್ತರ ಕರ್ನಾಟಕದಲ್ಲಿ ಮಾರಾಟ: ಇಬ್ಬರ ಬಂಧನ

ಅವರ ಮಗ ಮತ್ತು ಪತ್ನಿ ಅಂಗಡಿಯಲ್ಲಿದ್ದಾಗ, ಸಂಜೆ 4ರಿಂದ 4.30 ಗಂಟೆ ನಡುವಿನ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಬಂದು ಮೂಗುತಿ ತೋರಿಸುವಂತೆ ಕೇಳಿದರು. ಸ್ವಲ್ಪ ಹೊತ್ತು ಮೂಗುತಿಗಳನ್ನು ನೋಡಿ ಹೊರಟು ಹೋದರು. ಅವರು ಮೂಗುತಿಗಳಿದ್ದ 1 ಪ್ಯಾಕೇಟನ್ನು ಕಳವು ಮಾಡಿದ್ದು ಅಮೇಲೆ ಕಂಡುಬಂತು. ಅದರಲ್ಲಿ 1.20 ಲಕ್ಷ ರು. ಮೌಲ್ಯದ 20 ಗ್ರಾಂ ಚಿನ್ನದ ಮೂಗುತಿಗಳಿದ್ದವು. ಈ ಬಗ್ಗೆ ಕಿಶೋರ್‌ ಆಚಾರ್ಯರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

Latest Videos
Follow Us:
Download App:
  • android
  • ios