Asianet Suvarna News Asianet Suvarna News

ಸಚಿವ ಶ್ರೀರಾಮುಲು ಆಪ್ತನನ್ನು ಬಂಧಿಸಿದ ಪೊಲೀಸ್ರು

* ಸಚಿವ ಶ್ರೀರಾಮುಲು ಅವರ ಮತ್ತೋರ್ವ ಆಪ್ತನನ್ನು ಬಂಧಿಸಿದ ಪೊಲೀಸ್ರು
* ಶ್ರೀರಾಮುಲು ಹೆಸರು ಹೇಳಿಕೊಂಡು ವಂಚನೆಗೆ ಯತ್ನ
* ದೂರಿನ ಮೇರೆಗೆ  ಶ್ರೀರಾಮುಲು ಆಪ್ತ ಅರೆಸ್ಟ್

Police Arrests sriramulu Close aide In Bengaluru Over cheating Case rbj
Author
Bengaluru, First Published Aug 30, 2021, 11:27 PM IST

ಬೆಂಗಳೂರು, (ಆ.30): ಸಚಿವ ಶ್ರೀರಾಮುಲು ಅವರ ಮತ್ತೋರ್ವ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.  ಶ್ರೀರಾಮುಲು ಆಪ್ತ ಧರ್ಮತೇಜ್ ಎಂಬಾತನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಇಂದು (ಆ.30) ಅರೆಸ್ಟ್ ಮಾಡಿದ್ದಾರೆ.

 ಧರ್ಮತೇಜ್ ಬಾಗಲೂರು ಮೂಲದ ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು, ಶ್ರೀರಾಮುಲು ಅವರ ಹೆಸರು ಹೇಳಿಕೊಂಡು ವಂಚನೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!

ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಸಾಕ್ಷಿ ಸಮೇತ ಪ್ರದೀಪ್ ಎಂಬವರು ದೂರು ನೀಡಿದ್ದರು. ದೂರಿನನ್ವಯ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದ ಪೊಲೀಸರು ಧರ್ಮತೇಜ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

 ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.  ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಧರ್ಮತೇಜ ವಿರುದ್ಧ ಐಪಿಸಿ 420, 406, 506 ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಚಿವರು, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ.ಎ. ರಾಜು ಎನ್ನುವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಬಳಿಕ ಶ್ರೀರಾಮುಲು ಹಾಗೂ ಬಿವೈ ವಿಜಯೇಂದ್ರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಬಹುದು.

Follow Us:
Download App:
  • android
  • ios