ಕೋಲಾರ, (ಡಿ.12): ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣದ ಕಿಂಗ್​ಪಿನ್​ನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಪ್ರಕರಣದ ಕಿಂಗ್​ಪಿನ್ ಕವಿರಾಜ್​ ಅರೆಸ್ಟ್​ ಆಗಿದ್ದಾನೆ.

ಕವಿರಾಜ್ ವರ್ತೂರ್ ಪ್ರಕಾಶ್ ಪರಿಚಯಸ್ಥ ಎಂಬ ಮಾಹಿತಿ ಲಭ್ಯವಾಗಿದೆ. ಕವಿರಾಜ್​ ಬಂಧನದ ಬಗ್ಗೆ ಕೇಂದ್ರ ವಲಯದ‌ ಐಜಿಪಿ ಸೀಮಂತ್ ಕುಮಾರ್‌ ಮಾಹಿತಿ ನೀಡಿದ್ದಾರೆ.

ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್: ಮತ್ತೆ ನಾಲ್ವರ ಅರೆಸ್ಟ್...!

ವರ್ತೂರು ಪ್ರಕಾಶ್ ಅಪಹರಣ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದರಂತೆ ಇಂದು (ಶನಿವಾರ) ಬೆಳಿಗ್ಗೆ ಪ್ರಕರಣದ ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ಕವಿರಾಜ್‌ನನ್ನು ತಮಿಳುನಾಡಿನಲ್ಲಿ ಬಂಧಿಸಿಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬರಲಿದೆ.