ಕಲಬುರಗಿ(ಮಾ.25):  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬಟ್ಟೆ ವ್ಯಾಪಾರಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ಅಷ್ಠಗಾ ಹತ್ತಿರ ನಡೆದಿದೆ. ಆಳಂದ ತಾಲೂಕಿನ ನರೋಣಾ ಗ್ರಾಮದ ಓಂಕಾರ ಮಹಾಂತಪ್ಪ ಅನಶೆಟ್ಟಿ(53) ಕೊಲೆಯಾದ ಬಟ್ಟೆ ವ್ಯಾಪಾರಿ.

ನರೋಣಾ ಗ್ರಾಮದಲ್ಲಿ ಇವರ ಬಟ್ಟೆ ಅಂಗಡಿ ಇದ್ದು, ಬಟ್ಟೆ ಖರೀದಿಗೆಂದು ಮಾ.22 ರಂದು ಬೈಕ್‌ ಮೇಲೆ ಕಲಬುರಗಿಗೆ ಬಂದಿದ್ದರು. ಅದೇ ದಿನ ಸಾಯಂಕಾಲ 5.30ರ ಸುಮಾರಿಗೆ ಮರಳಿ ನರೋಣಾ ಗ್ರಾಮಕ್ಕೆ ಹೋಗುತ್ತಿದ್ದಾಗ ಅಷ್ಠಗಾ ಗ್ರಾಮದ ಹತ್ತಿರ ದುಷ್ಕರ್ಮಿಗಳು ಅವರನ್ನು ತಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು;  ಗಂಡನ ಕೊಲೆಗೆ ಪತ್ನಿ-ಪುತ್ರನೇ ಸುಪಾರಿ ಕೊಟ್ಟರು..

ಕೊಲೆಗೆ ಕೌಟುಂಬಿಕ ಸಮಸ್ಯೆಯೇ ಕಾರಣವೆನ್ನಲಾಗಿದೆ. ಕೊಲೆಯಾದ ವಿಷಯ ನಿನ್ನೆ ಬೆಳಕಿಗೆ ಬಂದಿದ್ದು, ಸುದ್ದಿ ತಿಳಿದು ನಗರ ಗ್ರಾಮೀಣ ಪೊಲೀಸ್‌ ಠಾಣೆಯ ಪಿಐ ಬಾಸು ಚವ್ಹಾಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.