ಆನೇಕಲ್‌(ಸೆ.27):ವ್ಯಕ್ತಿಯೋರ್ವನನ್ನು ಚಾಕುನಿಂದ ಇರಿದು ಕೊಲೆ ಮಾಡಿರುವ ಘಟನೆ ಆನೇಕಲ್‌ನ ದೊಡ್ಡಕೆರೆ ಸಮೀಪದಲ್ಲಿ ಶುಕ್ರವಾರ ನಡೆದಿದೆ.

ಶವದ ಮೈಮೇಲೆ ನೀಲಿ ಬಣ್ಣದ ಚಡ್ಡಿ ಹಾಗೂ ಹುಡುಗಿಯರ ವೇಲ್‌ ಇದೆ. ಮಧ್ಯಾಹ್ನದಿಂದಲೇ ವ್ಯಕ್ತಿಯೋರ್ವ ವೇಲ್‌ ಸುತ್ತಿಕೊಂಡು ಅರೆಬೆತ್ತಲೆಯಾಗಿಯೇ ಕೆರೆ ನೀರಿನಲ್ಲಿ ಆಟವಾಡುತ್ತಿದ್ದ. ಆತನ ಜೊತೆ ಒಂದು ಮಗು ಹಾಗೂ ಮಹಿಳೆಯಿದ್ದರು. ಅನಂತರ ಬಿದಿರು ಪೊದೆಗಳತ್ತ ತೆರಳಿದರು ಎಂದು ಕುರಿಗಾಹಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಕತ್ತು, ಎದೆ ಮತ್ತು ಕೊರಳಿನ ಹಿಂಬದಿಗೆ ಚಾಕುನಿಂದ ಇರಿದ ಕುರುಹುಗಳಿವೆ.

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!

ಪೊದೆಯಲ್ಲಿ ಕಂಡ ಶವದ ಜೊತೆ ನೀರಿನ ಬಾಟಲಿ, ಗ್ಲಾಸಿನಲ್ಲಿ ಅರ್ದ ಮದ್ಯ ಇರುವುದು ಕಂಡು ಬಂದಿದೆ. ಕೊಲೆ ತನಿಖೆಗೆ ಪೊಲೀಸರ ತಂಡ ರಚಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ ತಿಳಿಸಿದರು. ಎಸ್‌ಐ ಸಂತೋಷ್‌ ಹಾಗೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.