Asianet Suvarna News

ತಮ್ಮದೇ ಫ್ಲಾಟ್‌ನಲ್ಲಿ ಬೆತ್ತಲೆಯಾಗಿ ಪತ್ತೆಯಾದ  ಮಾಡೆಲ್ ಮೃತದೇಹ

* ನಟಿಯ ಅನುಮಾನಾಸ್ಪದ ಸಾವು
* ಬೆತ್ತಲೆಯಾಗಿ ಬಿದ್ದುಕೊಂಡಿತ್ತು ಶವ
* ಪ್ರಕರಣ ದಾಖಲಿಸಿಕೊಂಡ ಲಾಹೋರ್ ಪೊಲೀಸರು

Pakistani Model Nayab Nadeem Found Dead Under Mysterious Conditions Lahore mah
Author
Bengaluru, First Published Jul 12, 2021, 6:07 PM IST
  • Facebook
  • Twitter
  • Whatsapp

ಲಾಹೋರ್(ಜು. 12)  ಪಾಕಿಸ್ತಾನದ ಚಿತ್ರನಟಿ ನಾಯಬ್ ನದೀಮ್ ಅನುಮಾನಾಸ್ಪದ ರೀತಿಯಲ್ಲಿ ಸಾವು ಕಂಡಿದ್ದಾರೆ. ಅವರ ಶವ ಫ್ಲಾಟ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಲಾಹೋರ್ ನ ಫ್ಲಾಟ್ ನಲ್ಲಿ ಭಾನುವಾರ ಶವ ಪತ್ತೆಯಾಗಿದೆ. ಪೋಸ್ಟ್ ಮಾರ್ಟಂ ವರದಿಗೆ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ನಾಯರ್ ನಿಸ್ಸಾರ್ ತಿಳಿಸಿದ್ದಾರೆ. ನಟಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಸಂದೇಶಗಳಿಂದ ಬೇಸತ್ತ ಕಿರುತೆರೆ ನಟಿ ಮಾಡಿದ ಕೆಲಸ

ಘಟನೆ ಬಗ್ಗೆ ನಟಿಯ ಮಲತಾಯಿ ಅಲಿ ನಿಸ್ಸಾರ್ ಹೇಳಿಕೆ ನೀಡಿದ್ದು, ಆಕೆಯನ್ನು ಮಾಥನಾಡಿಸಲು ತೆರಳಿದಾಗ ಶವವಾಗಿ ಪತ್ತೆಯಾಗಿದ್ದಾರೆ. ನಾಣು ನೋಡುವಾಗ ಮೈಮೇಲೆ ಬಟ್ಟೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಮದುವೆಯಾಗದ ನಟಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು.  ಮಲತಾಯಿ ಮತ್ತು ನಟಿ ಶನಿವಾರ ಐಸ್ ಕ್ರೀಂ ತಿನ್ನಲು ಹೊರಗೆ ಹೋಗಿ ಬಂದಿದ್ದಾರೆ. ನಟಿಯನ್ನು ಡ್ರಾಪ್ ಮಾಡಿದ ಮಲತಾಯಿ ಮನೆಗೆ ತೆರಳಿದ್ದು ಭಾನುವಾನುವಾರ ಬಂದು ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.

ಮಲತಾಯಿ ಮೇಲಿಂದ ಮೇಲೆ ಕರೆ ಮಾಡಿದರೂ ನಟಿ ಸ್ವೀಕರಿಸಿಲ್ಲ.  ಇದಾದ ಮೇಲೆ ಮನೆಗೆ ಬಂದು ನೋಡಿದಾಗ ಕಿಟಕಿ ಅರ್ಧ ಓಪನ್ ಆಗಿರುವುದು ಕಂಡಿದೆ.  ಬಾಥ್ ರೂಂನ ಕಿಟಕಿಯನ್ನು ಮುರಿಯಲಾಗಿತ್ತು.  ಟಿವಿ ರೂಂ ನಲ್ಲಿ ನಟಿಯ ಬೆತ್ತಲೆ ದೇಹ ಬಿದ್ದುಕೊಂಡಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುತ್ತಿಗೆಯ ಮೇಲೆ ಗಾಯದ ಗುರುತು ಇರುವುದು ಸ್ಪಷ್ಟವಾಗಿ ಗೋಚರವಾಗಿದೆ.

 

Follow Us:
Download App:
  • android
  • ios