ಹುಬ್ಬಳ್ಳಿ, (ನ.28): ತಾಲೂಕಿನ ಬಂಡಿವಾಡ ಗ್ರಾಮದ ಬಳಿ ನ. 21ರಂದು ನಡೆದಿದ್ದ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಆರೋಗ್ಯಾಧಿಕಾರಿ ಮೃತಪಟ್ಟಿದ್ದಾರೆ.

ನವಲಗುಂದ ತಾಲೂಕ ಬೆಳೆಹಾರ ಗ್ರಾಮದ ಆರೋಗ್ಯಾಧಿಕಾರಿ ಡಾ. ಸ್ಮಿತಾ ಕಟ್ಟಿದ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಕೊನೆಯುಸೆರೆಳೆದಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ. 

ಮಾಜಿ ಸಚಿವೆ ಉಮಾಶ್ರೀಗೆ ಸೇರಿದ ಕಾರು ಅಪಘಾತ: ಇಬ್ಬರ ದುರ್ಮರಣ 

 ನ. 21ರಂದು ಕಳೆದ ವಾರ ಗದಗದಿಂದ ಬರುತ್ತಿದ್ದ ಬಲೆನೋ ಕಾರಿಗೆ ಉಮಾಶ್ರೀ ಮಾಲೀಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿ, ಇನ್ನಿಬ್ಬರು ಗಾಯಗೊಂಡಿದ್ದರು. 

ತೀವ್ರವಾಗಿ ಗಾಯಗೊಂಡಿದ್ದ ಡಾ. ಸ್ಮಿತಾ ಕಟ್ಟಿ ಚಿಕಿತ್ಸೆ ಫಲಿಸದೇ ಇಂದು ಸಾವಿನ್ನಪ್ಪಿದ್ದಾರೆ. ಈ ಮೂಲಕ ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿನಲ್ಲಿದ್ದ ಮೂವರು ಮೃತಪಟ್ಟಂತಾಗಿದೆ.