ಮುಂಬೈ (ಅ.26): ಡ್ರಗ್ ತೆಗೆದುಕೊಳ್ಳುತ್ತಿದ್ದಾಗ ಒಪ್ಪಿಕೊಂಡ ನಟಿಯನ್ನು ಎನ್‌ಸಿಬಿ ಅರೆಸ್ಟ್ ಮಾಡಿದೆ. 

ಇಂಜಿನಿಯರಿಂಗ್ ಪದವೀಧರೆಯಾದ ನಟಿ ಕೆಲವು ಸೀರಿಯಲ್ ಹಾಗೂ ಹಿಂದಿ ಚಲನಚಿತ್ರಗಳಲ್ಲಿ  ನಟಿಸಿದ್ದಾಳೆ. 

ಸುಶಾಂತ್ ಸಿಂಗ್ ಸಾವಿನ ಪ್ರಕರಣ ವಿಚಾರಣೆ ಮಾಡುತ್ತಿದ್ದ ಎನ್‌ಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಈ ನಟಿ ಸಿಕ್ಕಿ ಬಿದ್ದಿದ್ದಾಳೆ.

ಫೈಸಲ್ ಯಾಸಿನ್ ಶೇಖ್ ಎಂಬಾತನಿಂದ  ಗಾಂಜಾ ಕೊಳ್ಳುವಾಗ ಈ ನಟಿ ಸಿಕ್ಕಿ ಬಿದ್ದಿದ್ದಾಳೆ. 

'ಖಾಸಗಿ ಪೋಟೋ ಬಹಿರಂಗ ಮಾಡ್ತೆನೆ' ಹೆಂಡತಿಗೆ ಗಂಡನ ಬ್ಲ್ಯಾಕ್ ಮೇಲ್!

ಇದೀಗ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ನವೆಂಬರ್ 8ರವರೆಗೆ ಎನ್‌ಸಿಬಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 

ಇನ್ನು ಈಕೆಯ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ