Asianet Suvarna News Asianet Suvarna News

ಪೋಕ್ಸೋ ಪ್ರಕರಣದಲ್ಲಿ ಸಾಕ್ಷಿ ನಾಶ ಪ್ರಯತ್ನವಾಗಿದ್ಯಾ?, ಮುರುಘಾಶ್ರೀಯನ್ನು ಜೈಲಿಂದ ಕೋರ್ಟ್‌ಗೆ ಕರೆತಂದ ಪೊಲೀಸ್

ಎವಿಡೆನ್ಸ್ ನಡೆಯಲಿರುವ ಹಿನ್ನೆಲೆ ಸಂತ್ರಸ್ತ ಬಾಲಕಿಯರ ಹೇಳಿಕೆ ಕೋರ್ಟ್ ಪಡೆಯಲಿರುವ ಹಿನ್ನೆಲೆ ಮುರುಘಾಶ್ರೀಯನ್ನು ನ್ಯಾಯಾಲಯಕ್ಕೆ ಕರೆತರಲಾಯ್ತು.

Murugha seer Pocso case evidence girls statement at chitradurga court gow
Author
First Published Jun 10, 2024, 11:51 AM IST

ಚಿತ್ರದುರ್ಗ (ಜೂ.10): ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮೇರೆಗೆ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಾದರು. ಬೆಳಗ್ಗೆ ಪೊಲೀಸರು ಮುರುಘಾ ಶ್ರೀಗಳಿಗೆ ಚಿತ್ರದುರ್ಗ ಬಂಧಿಖಾನೆಯಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ  ಇಂದು ಎವಿಡೆನ್ಸ್ ನಡೆಯಲಿರುವ ಹಿನ್ನೆಲೆ ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆಯಲಿದೆ. ಜೂ.10,11 ಮತ್ತು 12 ಮೂರು ದಿನ ನ್ಯಾಯಾಲಯದಿಂದ ಸಾಕ್ಷಿ ವಿಚಾರಣೆ ನಡೆಯಲಿದೆ.

ಮುರುಘಾ ಶ್ರೀ ವಿರುದ್ಧದ ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್‌..!

ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜೈಲು ವಾಸದಲ್ಲಿರುವ ಮುರುಘಾಶ್ರೀ ಸಾಕ್ಷಿ ನಾಶಕ್ಕೆ ಯತ್ನಿಸಿದರಾ ?
ಪ್ರೋಕ್ಸೋ ಪ್ರಕರಣದ ಸಂತ್ರಸ್ತೆ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ಸಲ್ಲಿಸಲಾದ ದೂರು ಇಂತಹದ್ದೊಂದು ಅನುಮಾನ ಮೂಡಲು ಕಾರಣವಾಗಿದೆ. ಮುರುಘಾಶ್ರೀ ಬೆಂಬಲಿಗರು ಸಂತ್ರಸ್ತೆಯ ಚಿಕ್ಕಪ್ಪನಿಗೆ ಆಮಿಷವೊಡ್ಡಿ ಸಾಕ್ಷ್ಯ ನುಡಿಯದಂತೆ ಹಾಗೂ ನೀಡಿದ ದೂರು ವಾಪಸ್ಸು ಪಡೆಯುವಂತೆ ಸಂತ್ರಸ್ತೆಯ ಮೇಲೆ ಪ್ರಭಾವ ಬೀರಿದರಾ ಎಂಬ ಮತ್ತೊಂದು ಪ್ರಶ್ನೆ ಎದುರಾಗಿದೆ.

ಸುಪ್ರಿಂ ಕೋರ್ಟ್ ನಾಲ್ಕು ತಿಂಗಳ ಒಳಗಾಗಿ ಮುರುಘಾಶ್ರೀ ಪೋಕ್ಸೋ ಪ್ರಕರಣದ ಕುರಿತು ವಿಚಾರಣೆ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿರುವುದರ ನಡುವೆಯೇ, ಸಂತ್ರಸ್ತೆ ತನ್ನ ಚಿಕ್ಕಪ್ಪನ ವಿರುದ್ಧ ದೂರು ದಾಖಲು ಮಾಡಿರುವುದು ಕುತೂಹಲ ಮೂಡಿಸಿದೆ.

ಮೇ 24ರಂದು ಚಿತ್ರದುರ್ಗ ತೊರೆದು ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿದ್ದ ಸಂತ್ರಸ್ತೆ. ಅಲ್ಲಿ ತಮ್ಮ ಚಿಕ್ಕಪ್ಪ ನೀಡುತ್ತಿರುವ ಕಿರುಕುಳದ ಬಗ್ಗೆ ಸುದೀರ್ಘವಾಗಿ ತಿಳಿಸಿದ್ದಳು. ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸಂತ್ರಸ್ತೆಯನ್ನು ಕರೆದೊಯ್ದು ದೂರು ದಾಖಲಿಸಿ, ನಂತರ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದರು.

ಚಿತ್ರದುರ್ಗ ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ ಶಿಫ್ಟ್; ಮೇ 27ರವರೆಗೆ ನ್ಯಾಯಾಂಗ ಬಂಧನ

ಮಂಗಳವಾರ ಸಂಜೆ ಮಕ್ಕಳ ಕಲ್ಯಾಣ ಸಮಿತಿ ಸಂತ್ರಸ್ತೆಯ ಕೌನ್ಸಿಲಿಂಗ್ ನಡೆಸಿದ ನಂತರ ಸಂತ್ರಸ್ತೆಗೆ ಚಿಕ್ಕಪ್ಪ ಕಿರುಕುಳ ನೀಡಿರುವುದು ಮನಗಂಡು ನೇರವಾಗಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಚಿಕ್ಕಪ್ಪನಿಂದ‌ಲೇ ಹಲ್ಲೆಗೆ ಒಳಗಾಗಿದ್ದು ದೂರು ವಾಪಸ್ಸು ಪಡೆಯುವಂತೆ ಹಾಗೂ ಮುರುಘಾಶ್ರೀ ವಿರುದ್ಧ ಸಾಕ್ಷ್ಯ ನುಡಿಯದಂತೆ ಚಿಕ್ಕಪ್ಪ ಒತ್ತಡ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಮಕ್ಕಳ ಕಲ್ಯಾಣ ಸಮಿತಿ ಮುಂಭಾಗ ನಿವೇದನೆ ತೋಡಿಕೊಂಡಿದ್ದಳು. ನಂತರ ಈ ಕುರಿತು ಮಹಿಳಾ ಠಾಣೆಯಲ್ಲಿ ಕಲಂ 323, 324, 504, 506, 75 ಜುವೆನೈಲ್‌ ಜಸ್ಟೀಸ್ ಆಕ್ಟ್ ನಡಿ ಕೇಸ್ ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಂಜುಳಾ ಸಂತ್ರಸ್ತೆ ಪರವಾಗಿ ದೂರು ದಾಖಲು ಮಾಡಿದ್ದಾರೆ.

ದೂರು ದಾಖಲಾದ ನಂತರ ಸಂತ್ರಸ್ತೆ ಚಿತ್ರದುರ್ಗದಲ್ಲಿರಲು ನಿರಾಕರಿಸಿದ್ದು, ಅಂತಿಮವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿಯೇ ಮೈಸೂರಿನ ಒಡನಾಡಿ ಸಂಸ್ಥೆಯವರು ಕರೆದೊಯ್ದಿದ್ದಾರೆ. ಒಡನಾಡಿಯಲ್ಲಿ ನಾನು ಯಾವುದೇ ಭೀತಿಯಿಲ್ಲದೇ, ಸಂತೋಷದಿಂದ ಇರುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದು, ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಒಡನಾಡಿ ಸಂಸ್ಥೆಯಲ್ಲಿರಲು ಅವಕಾಶ ಮಾಡಿಕೊಟ್ಟಿದೆ.

Latest Videos
Follow Us:
Download App:
  • android
  • ios