ಆನೇಕಲ್(ಜೂ.19): ರಾಜೀ ಮಾಡುವ ನೆಪದಲ್ಲಿ ಜಿಮ್ ಟ್ರೈನರ್‌ವೊಬ್ಬನನ್ನು ಮಾತುಕತೆಗೆ ಕರೆಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಕಲ್ಕೆರೆ ನಿವಾಸಿ ಕಿರಣ್ಕೊಲೆಯಾದ ಯುವಕ. 

ಕೊಲೆಗೆ ಹಳೇ ದ್ವೇಷವೇ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮಾತುಕತೆ ನೆಪದಲ್ಲಿ ಕಿರಣ್ನನ್ನು ಕರೆಸಿಕೊಂಡ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಲೆ ಮಾಡಿದ್ದಾರೆ. 

ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ಉದ್ಯಮಿ!

ಕಿರಣ್‌ನ ಮೊಬೈಲ್‌ ಕರೆಗಳ ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಆರೋಪಿಗಳ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.