ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ: ಕರ್ನಾಟಕದಲ್ಲಿ ಇನ್ನೊಬ್ಬ ಅರೆಸ್ಟ್‌

ಬಿಷ್ಟೋಯಿ ಹೆಸರಲ್ಲಿ ಸಲ್ಮಾನ್ ಖಾನ್‌ ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ 2ನೇ ವ್ಯಕ್ತಿ ಸುಹೇಲ್. ಸಲ್ಮಾನ್ ಖಾನ್ ಗೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನನ್ನು ಕಳೆದ ಮಂಗಳವಾರ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. 

Mumbai Police Arrested accused in Karnataka on life threatened to Actor Salman Khan Case grg

ಮುಂಬೈ(ನ.13):  ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಟೋಯಿ ಹೆಸರಲ್ಲಿ ನಟ ಸಲ್ಮಾನ್ ಖಾನ್‌ರಿಂದ 5 ಕೋಟಿ ರು.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ರಾಯಚೂರು ಜಿಲ್ಲೆಯ ಮಾನ್ವಿಯ ಸುಹೇಲ್ ಪಾಷಾ (24) ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಬಿಷ್ಟೋಯಿ ಹೆಸರಲ್ಲಿ ಸಲ್ಮಾನ್ ಖಾನ್‌ ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ 2ನೇ ವ್ಯಕ್ತಿ ಸುಹೇಲ್. ಸಲ್ಮಾನ್ ಖಾನ್ ಗೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನನ್ನು ಕಳೆದ ಮಂಗಳವಾರ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. 

ಬೆದರಿಕೆ ಸಲ್ಮಾನ್​ ರಕ್ಷಣೆಗೆ 70 ಸಿಬ್ಬಂದಿ, 4 ಲೇಯರ್​ ಭದ್ರತೆ: ಸರ್ಕಾರ ಖರ್ಚು ಮಾಡೋದೆಷ್ಟು ಗೊತ್ತಾ?

ಬೆದರಿಕೆ ಏಕೆ?: 

ಯುವ ಗೀತ ರಚನೆಕಾರನಾ ಗಿರುವ ಸುಹೇಲ್, ತನ್ನ ಹೊಸ ಹಾಡನ್ನು ಜನಪ್ರಿಯಮಾಡುವನಿಟ್ಟಿನಲ್ಲಿ ಇಂಥದ್ದೊಂದು ಬೆದರಿಕೆ ಹಾಕಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ವೆಂಕಟ ನಾರಾಯಣ ಎಂಬ ವ್ಯಕ್ತಿಯ ಮೊಬೈಲ್ ಬಳಸಿ ಜಾಣತನ ಪ್ರದರ್ಶಿಸಲು ಹೋಗಿದ್ದ ಸುಹೇಲ್ ಸಂಕಟ ತಂದುಕೊಂಡಿದ್ದಾನೆ. 

ಸುಲಿಗೆ ಕರೆ: 

ನ.7ರಂದು ಮುಂಬೈ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಸಂದೇಶ ಕಳುಹಿ ಸಿದ್ದ ಸುಹೇಲ್, '5 ಕೋಟಿ ಕೊಡದಿದ್ದರೆ ಸಲ್ಮಾನ್‌ರನ್ನು ಕೊಲ್ಲಲಾಗುವುದು. ಜೊತೆಗೆ, 'ಮೈ ಸಿಕಂದರ್ ಹೂಂ ಎಂಬ' ಹಾಡು ಬರೆದ ವರನ್ನೂ ಹತ್ಯೆ ಮಾಡಲಾಗುವುದು' ಎಂದು ಬೆದರಿಕೆ ಹಾಕಿದ್ದ. 

ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಹಾವೇರಿಯಲ್ಲಿ ಬಂಧನ

ಸಂದೇಶ ಬಂದ ವಾಟ್ಸಾಪ್ ಸಂಖ್ಯೆ ಬೆನ್ನಟ್ಟಿದ ಮುಂಬೈ ಪೊಲೀಸರಿಗೆ ಅದು ವೆಂಕಟ ನಾರಾಯಣ ಎಂಬುವರ ಸಂಖ್ಯೆಯಿಂದ ರವಾನೆಯಾಗಿದ್ದು ಕಂಡು ಬಂದಿತ್ತು. ಆದರೆ ತನಿಖೆ ವೇಳೆ ವೆಂಕಟ್‌ರ ಮೊಬೈಲ್‌ನಲ್ಲಿ ಇಂಟ ರ್‌ನೆಟ್ ಸಂಪರ್ಕವೇ ಇರಲಿಲ್ಲ ಎಂಬುದು ಪತ್ತೆಯಾಗಿತ್ತು. 

ಈ ಬಗ್ಗೆ ಅವರನ್ನು ವಿಚಾರಿಸಿದಾಗ ಅಪರಿಚಿ ತನೊಬ್ಬ ಕರೆ ಮಾಡುವ ಉದ್ದೇಶದಿಂದ ತನ್ನ ಮೊಬೈಲ್ ಪಡೆದಿದ್ದ ಎಂದು ವೆಂಕಟ್ ತಿಳಿಸಿ ದ್ದರು. ಜೊತೆಗೆ ಮೊಬೈಲ್ ಪರಿಶೀಲನೆ ವೇಳೆ ಮೊಬೈಲ್‌ಗೆ ವಾಟ್ಸಾಪ್ ಇನ್‌ಸ್ಟಾಲ್ ಮಾಡಲು ಒಟಿಪಿ ಬಂದಿದ್ದ ವಿಷಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ತೆರಳಿದಾಗ ಆರೋಪಿ ಸುಹೇಲ್, ನಾರಾಯಣ ಅವರ ಮೊಬೈಲ್ ಸಂಖ್ಯೆ ಬಳಸಿ ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದ್ದ ಎಂಬುದು ಖಚಿತಪಟ್ಟಿತ್ತು. ಈ ಸುಳಿವು ಆಧರಿಸಿ ಮಾನ್ವಿಗೆ ತೆರಳಿ ಸುಹೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತನ್ನ ಹೊಸ ಹಾಡು 'ಮೈ ಸಿಕಂದರ್ ಹೂಂ' ಜನಪ್ರಿಯಗೊಳಿಸುವ ಸಲುವಾಗಿ ಸಂದೇಶ ಕಳಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

Latest Videos
Follow Us:
Download App:
  • android
  • ios