ಮಹಿಳೆ 150 ಗ್ರಾಂ ಚಿನ್ನಾಭರಣಗಳನ್ನು ತಂದಿದ್ದಳು ಮತ್ತು ಆಭರಣ ವ್ಯಾಪಾರಿಯ ಸಮ್ಮುಖದಲ್ಲಿ ಆಭರಣಗಳನ್ನು ಶುದ್ಧತೆಗಾಗಿ ಪರೀಕ್ಷಿಸಲಾಗಿತ್ತು. ಆದರೆ ಹಸ್ತಾಂತರಿಸುವ ವೇಳೆಯಲ್ಲಿ ಮಹಿಳೆ ಆಭರಣಗಳನ್ನು ಬದಲಾಯಿಸಿ ನಕಲಿ ಆಭರಣಗಳನ್ನು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮುಂಬೈ (ಮೇ 22): ಚಿನ್ನಾಭರಣಗಳನ್ನು ಬದಲಿಸಿ ಹೊಸ ಆಭರಣಗಳನ್ನು ಖರೀದಿಸುವ ನೆಪದಲ್ಲಿ ವ್ಯಾಪಾರಿಗೆ 5.50 ಲಕ್ಷ ರೂಪಾಯಿ ವಂಚಿಸಿದ 54 ವರ್ಷದ ಮಹಿಳೆಯನ್ನು ದಾದರ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆ 150 ಗ್ರಾಂ ಚಿನ್ನಾಭರಣಗಳನ್ನು ತಂದಿದ್ದಳು ಮತ್ತು ಆಭರಣ ವ್ಯಾಪಾರಿಯ ಸಮ್ಮುಖದಲ್ಲಿ ಅವುಗಳನ್ನು ಶುದ್ಧತೆಗಾಗಿ ಪರೀಕ್ಷಿಸಲಾಗಿತ್ತು. ಆದರೆ ಹಸ್ತಾಂತರಿಸುವ ವೇಳೆಯಲ್ಲಿ ಮಹಿಳೆ ಆಭರಣಗಳನ್ನು ಬದಲಾಯಿಸಿ ನಕಲಿ ಆಭರಣಗಳನ್ನು ನೀಡಿದ್ದಾಳೆ. ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ 24 ಗಂಟೆಗಳಲ್ಲಿ ಬಂಧಿಸಿದ್ದಾರೆ.

ಮೇ 18 ರಂದು 62 ವರ್ಷದ ಗೌರಿ ಸೋಹನ್‌ಲಾಲ್ ಚಾಪ್ಲೋಟ್ ಮಹಿಳೆಯಿಂದ 5.5 ಲಕ್ಷ ರೂ. ವಂಚನೆಯಾಗಿದೆ ಎಂದು ಕಂಪ್ಲೆಂಟ್‌ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ವಿ ಲಕ್ಷ್ಮಿ ಎಂದು ಗುರುತಿಸಲಾಗಿರುವ ಮಹಿಳೆ ಆಭರಣ ವ್ಯಾಪಾರಿಗೆ ಮೋಸ ಮಾಡಿದ್ದಳು ಎಂದು ತಿಳಿದು ಬಂದಿದೆ. 

ಆಭರಣ ಬದಲಾಯಿಸಿದ್ದ ಚಾಲಾಕಿ: ಆಭರಣಗಳ ಶುದ್ಧತೆಯನ್ನು ಪರಿಶೀಲಿಸಲು ಚಾಪ್ಲೋಟ್ ಮಹಿಳೆಗೆ ತಮ್ಮೊಂದಿಗೆ ಪರೇಲ್‌ಗೆ ಬರುವಂತೆ ಕೇಳಿಕೊಂಡಿದ್ದರು. ಆಭರಣಗಳ ಪರೀಕ್ಷೆಯ ಬಳಿಕವೇ ಒಪ್ಪಂದವನ್ನು ಮಾಡುವುದಾಗಿ ವ್ಯಾಪಾರಿ ತಿಳಿಸಿದ್ದರು. ಪರೇಲ್‌ನ ಚಿನ್ನದ ಅಂಗಡಿಯೊಂದರಲ್ಲಿ ಚಿನ್ನದ ಸರಗಳೆಲ್ಲವೂ ಶುದ್ಧವಾಗಿರುವುದು ದೃಢಪಟ್ಟಿದೆ. 

ಆದರೆ ಅಲ್ಲಿಂದ ಹಿಂತಿರುಗುವಾಗ, ಮಹಿಳೆ ಆಭರಣಗಳನ್ನು ತನಗೆ ನೀಡುವಂತೆ ಒತ್ತಾಯಿಸಿದ್ದರು. "ಆ ಸಮಯದಲ್ಲಿ ಮಹಿಳೆ ಆಭರಣಗಳನ್ನು ಬದಲಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ:ಮುಸುಕುಧಾರಿಗಳಿಂದ ಮನೆಗೆ ನುಗ್ಗಿ ದರೋಡೆ: ಲಕ್ಷಾಂತರ ರು.ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಚಿನ್ನಾಭರಣಕ್ಕೆ ಬದಲಾಗಿ 3.16 ಲಕ್ಷ ಮೌಲ್ಯದ ಆಭರಣಗಳನ್ನು ಖರೀದಿಸಿ 2.34 ಲಕ್ಷ ನಗದು ಪಡೆದಿದ್ದಾಳೆ. ಮಹಿಳೆ ತೆರಳಿದ ಬಳಿಕ ಚಿನ್ನಾಭರಣ ವ್ಯಾಪಾರಿಗೆ ಅನುಮಾನ ಬಂದು ಆಭರಣಗಳನ್ನು ಮತ್ತೊಮ್ಮೆ ಪರಿಶೀಲಿಸಿದಾಗ ನಕಲಿ ಎಂಬುದು ಪತ್ತೆಯಾಗಿದೆ. 

ದಾದರ್ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ) 34 (ಸಾಮಾನ್ಯ ಉದ್ದೇಶ) ಅನ್ವಯ ಮಹಿಳೆ ವಿರುದ್ಧ ಪ್ರಕರಣ (Crime News) ದಾಖಲಿಸಿದ್ದಾರೆ. ಮಹಿಳೆ ಪ್ರತಿದಿನ ಬರುತತಿದ್ದ ಟ್ಯಾಕ್ಸಿ ಚಾಲಕನನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತಾನು ತಮಿಳುನಾಡಿನ ನಿವಾಸಿಯಾಗಿದ್ದೇನೆ, ಆದರೆ ಯಾವುದೇ ಗುರುತಿನ ಚೀಟಿ ಇಲ್ಲ ಎಂದು ಲಕ್ಷ್ಮಿ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ:Bengaluru Crime: ಪ್ರಿಯಕರನ ಜತೆ ಸೇರಿ ಹೆತ್ತ ತಾಯಿಯ ಒಡವೆ ಕದ್ದಳು..!