Asianet Suvarna News Asianet Suvarna News

ಮದ್ವೆ ಆಗ್ತೀನಿ ಎಂದು ಪ್ರತಿ ದಿನ ಅಸ್ವಾಭಾವಿಕ ಸೆಕ್ಸ್, ಅಬ್ದುಲ್ಲಾ ವಿರುದ್ಧದ ಸಿಡಿದೆದ್ದ ಯುವತಿ!

ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಮದುವೆಯಾಗೋದಾಗಿ ಭರವಸೆ, ಬಳಿಕ ಪ್ರತಿದಿನ ಸೆಕ್ಸ್. ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯ. ಮದುವೆ ಮಾತ್ರ ಮುಂದೂಡುತ್ತಲೇ ಬಂದ ಅಬ್ದುಲ್ಲಾ ವಿರುದ್ಧ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Mumbai man Abdul Hamid Khan arrested for sexually assaulting forcing unnatural intercourse with 22 year old woman ckm
Author
First Published Dec 15, 2022, 8:16 PM IST

ಮುಂಬೈ(ಡಿ.15): ಸಾಮಾಜಿಕ ಜಾಲತಾಣದ ಮೂಲಕ 31 ವರ್ಷದ ಅಬ್ದುಲ್ಲಾ ಹಮೀದ್ ಖಾನ್ 22 ಹರೆಯದ ಯುವತಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿ ಪ್ರೇಮದ ಸುತ್ತಾಟ ಇಲ್ಲ. ನೇರವಾಗಿ ಮದುವೆ ಪ್ರಪೋಸಲ್. ಅರೇ ನಮ್ ಅಬ್ದುಲ್ಲಾ ತುಂಬಾ ಸೀರಿಯಸ್ ಆಗಿದ್ದಾನೆ. ಪ್ರೀತಿ ಪ್ರೇಮ ಅಂತಾ ಟೈಮ್ ವೇಸ್ಟ್ ಮಾಡುತ್ತಿಲ್ಲ. ನೇರವಾಗಿ ಮದುವೆ ಪ್ರಪೋಸಲ್ ಮಾಡಿದ್ದಾನೆ ಅಂದುಕೊಂಡ ಯುವತಿಯ ಮನಸ್ಸು ಸಂಪೂರ್ಣ ಕರಗಿ ಹೋಗಿದೆ. ನೇರವಾಗಿ ಅಬ್ದುಲ್ಲಾಗೆ ಒಕೆ ಎಂದಿದ್ದಾಳೆ. ಬಳಿಕ ಅಬ್ದುಲ್ಲಾ ಆಟ ಶುರು ನೋಡಿ. ಪ್ರತಿ ದಿನ ಒಂದೊಂದು ಕಡೆ ಕರೆದುಕೊಂಡು ಹೋಗಿ ಸೆಕ್ಸ್ ಮಾಡಿದ್ದಾನೆ. ಮದುವೆ ವಿಚಾರ ಬಂದಾಗ ನಾಳೆ ಅನ್ನೋ ಸಿಂಪಲ್ ಉತ್ತರ ನೀಡಿ ನಯವಾಗಿ ಜಾರಿಕೊಂಡಿದ್ದಾನೆ. ಪರಿಸ್ಥಿತಿ ಕೈಮೀರಿದಾಗ ಅಬ್ದುಲ್ಲಾ ಸೀಕ್ರೆಟ್ ಆಗಿ ಮದುವೆಯಾಗಿದ್ದಾನೆ. ಬಳಿಕ ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸಿದ್ದಾನೆ. ಕಳೆದೆರಡು ವರ್ಷದಿಂದ  ಅಬ್ದುಲ್ಲಾ ಹಿಂಸೆಗೆ ನೊಂದ ಯುವತಿ ಪೊಲೀಸ್ ದೂರು ದಾಖಲಿಸಿದ್ದಾಳೆ. ಇದೀಗ ಅಬ್ದುಲ್ಲಾ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈನ ಕುರ್ಲಾದ ಕಪಾಡಿಯಾ ನಗರ ನಿವಾಸಿಯಾಗಿರುವ ಅಬ್ದುಲ್ಲಾ ಹಮೀದ್ ಖಾನ್, 2018ರಲ್ಲಿ ಸಾಮಾಜಿಕ ಜಾಲತಾಣ ಮೂಲಕ 22ರ ಹರೆಯದ ಯುವತಿಯ ಪರಿಚಯ ಮಾಡಿಕೊಂಡದ್ದಾನೆ. 2018ರಲ್ಲಿ ಮದುವೆ ಪ್ರಪೋಸಲ್ ಮಾಡಿದ ಅಬ್ದುಲ್ಲಾಗೆ ಯುವತಿ ಒಕೆ ಎಂದಿದ್ದಾಳೆ. ಬಳಿಕ ಯುವತಿಯನ್ನು ಹೊಟೆಲ್‌ಗೆ ಕರೆದುಕೊಂಡ ಹೋದ ಅಬ್ದುಲ್ಲಾ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುತ್ತಾನೆ ಎಂದುಕೊಂಡು ಯುವತಿ ಸುಮ್ಮನಾಗಿದ್ದಾಳೆ.

8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ 14ರ ಬಾಲಕ!

ಪ್ರತಿ ದಿನ ಯುವತಿಯನ್ನು ಒಂದೊಂದು ಕಡೆ ಕರೆದುಕೊಂಡು ಹೋಗಿ ಸೆಕ್ಸ್ ಮಾಡಿದ್ದಾನೆ. ಪರಿಣಾಮ 2019ರಲ್ಲಿ ಯುವತಿ ಗರ್ಭಿಣಿಯಾಗಿದ್ದಾಳೆ. ಇದನ್ನು ಅರಿತ ಅಬ್ದುಲ್ಲಾ ಬಲವಂತವಾಗಿ ಮಾತ್ರೆ ಕೊಡಿಸಿದ್ದಾನೆ. ಇದರಿಂದ ಗರ್ಭಪಾತವಾಗಿದೆ. ಈ ಘಟನೆ ಬಳಿಕ ರೊಚ್ಚಿಗೆದ್ದ ಯುವತಿ ತಾನು ದೂರು ನೀಡುವುದಾಗಿ ಬೆದರಿಸಿದ್ದಾಳೆ. ಇದರ ಪರಿಣಾಮ ಅಬ್ದುಲ್ಲಾ ಸೀಕ್ರೆಟ್ ಆಗಿ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ ಅಬ್ದುಲ್ಲಾ ತನ್ನ ಮನಗೆ ಕರೆದುಕೊಂಡು ಹೋಗಿಲ್ಲ. ಈ ಹಿಂದೆ ಅತ್ಯಾಚಾರ ಎಸಗಿದ ಹೊಟೆಲ್ ರೂಂನಲ್ಲಿ ಇರುವಂತೆ ಸೂಚಿಸಿದ್ದಾನೆ.

2020ರಿಂದ ಅಸ್ವಾಭಾವಿಕ ಸೆಕ್ಸ್‌ಗೆ ಅಬ್ದುಲ್ಲಾ ಒತ್ತಾಯಿಸಿದ್ದಾನೆ. ಹಲವು ಬಾರಿ ಅಬ್ದುಲ್ಲಾ ಒತ್ತಾಯಕ್ಕೆ ಮಣಿದಿದ್ದಾಳೆ. ಇತ್ತೀಚೆಗೆ ಅಬ್ದುಲ್ಲಾ ಪತ್ತೆಯೇ ಇಲ್ಲ. ಫೋನ್ ಮಾಡಿದರೆ ತಲಾಖ್ ಅನ್ನೋ ಮಾತು ಬರುತ್ತಿದೆ. ಇದರಿಂದ ಆತಂಕಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿ ಮಾಹಿತಿ ಆಧರಿಸಿದ ಪೊಲೀಸರು ಅಬ್ದುಲ್ಲಾ ಹಮೀದ್ ಖಾನ್‌ನನ್ನು ಬಂಧಿಸಿದ್ದಾರೆ. ಇದೀಗ ಅಬ್ದುಲ್ಲಾ ಮೇಲೆ ಅತ್ಯಾಚಾರ, ಅಸ್ವಾಭಾವಿಕ ಹಾಗೂ ಬಲವಂತದ ಸೆಕ್ಸ್, ವಂಚನೆ, ಬಲವಂತದಿಂದ ಗರ್ಭಪಾತ, ಹಲ್ಲೆ, ಉದ್ದೇಶಪೂರ್ವಕ ಮಾನಸಿಕ ಹಾಗೂ ದೈಹಿಕ ಹಿಂಸೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾಳೆ. 

ವಿಮೆ ಮೊತ್ತ ಪಡೆಯಲು ಹತ್ಯೆ ನಾಟಕ ಪ್ಲಾನ್, 4 ಕೋಟಿ ರೂ ಆಸೆಗೆ ಬಿದ್ದ ಗೆಳೆಯರು ಕೊಂದೇ ಬಿಟ್ಟರು!

 

Follow Us:
Download App:
  • android
  • ios