ನಾಗರೀಕರ ಸಮಾಜವೇ ತಲೆ ತಗ್ಗಿಸುವಂತೆ ಆಗಿದೆ. 78ರ ವಯೋವೃದ್ಧೆ ಮನೆಗೆ ನುಗ್ಗಿದ 20 ಹರೆಯದ ಯುವಕ ಮಹಾ ಅಪರಾಧ ಎಸಗಿದ್ದಾನೆ. ಏಕಾಂಗಿಯಾಗಿರುವ ಒಂಟಿ ವೃದ್ಧೆ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಿದ್ದಾನೆ.
ಮುಂಬೈ(ಜ.25) ಚೀ ಇದೆಂತಾ ಘಟನೆ? ಪ್ರತಿ ದಿನ ಮಹಿಳೆಯರು, ಹೆಣ್ಮು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ವಯೋವೃದ್ಧೆಯರ ಮೇಲೆ ನಡೆಯುತ್ತಿರುವ ಘನಘೋರ ಘಟನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಮುಂಬೈನಲ್ಲಿ ನಡೆದ ಘಟನೆಯೊಂದು ನಾಗರೀಕರ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಒಂಟಿಯಾಗಿ ನೆಲೆಸಿದ್ದ 78ರ ಹರೆಯದ ವಯೋವೃದ್ಧೆ ಮೇಲೆ 20ರ ಹರೆಯದ ಯುವಕ ಮುಗಿಬಿದ್ದ ಘಟನೆ ನಡೆದಿದೆ. ಪ್ರಕರಣ ದಾಖಲಾದ ಎರಡೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ತಕ್ಕ ಪಾಠ ಕಲಿಸಿದ್ದಾರೆ.
ಮುಂಬೈ ದಿಂದೋಶಿ ವಲಯದಲ್ಲಿ ಈ ಘಟನೆ ನಡೆದಿದೆ. 78ರ ವಯೋವೃದ್ಧೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ವೃದ್ಧೆ ಮನೆ ಪಕ್ಕದಲ್ಲೇ ಸಹೋದರಿ ಹಾಗೂ ಮಗಳ ಮನೆಯಿದೆ. ಒಂದೆರೆಡು ದಿನಕ್ಕೊಮ್ಮೆ ಸಹೋದರಿ ಅಥವಾ ಪುತ್ರಿ ವೃದ್ಧೆಗೆ ಮನೆಗ ಬೇಟಿ ನೀಡಿ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಹೀಗೆ ಎಂದಿನಂತೆ ತಾಯಿಗೆ ಮನೆಗೆ ಆಗಮಿಸಿದ ಪುತ್ರಿಗೆ ಆಘಾತವಾಗಿದೆ. ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ನೋಡಿದ ಪುತ್ರಿ ಆತಂಕಗೊಂಡಿದ್ದಾಳೆ. ಮನೆ ಮುಂಭಾಗದಲ್ಲಿ ಅಳವಡಿಸಿದ ಸಿಸಿಟಿವಿ ಪರಿಶೀಲಿಸಿದಾಗ ಘನಘೋರ ಕೃತ್ಯ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ನೌಕರನ ಪತ್ನಿಯ ರೇಪ್ ಅಂಡ್ ಮರ್ಡರ್!
ವೃದ್ಧೆಯನ್ನು ಆಸ್ಪತ್ರೆ ದಾಖಲಿಸಿದ ಪುತ್ರಿ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.
ಕಳೆದ ಹಲವು ದಿನಗಳಿಂದ ವೃದ್ಧೆಯ ಒಂಟಿಯಾಗಿರುವುದನ್ನು ಗಮನಿಸಿದ ಯುವಕ, ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ಪ್ರತಿ ದಿನ ವೃದ್ಧೆ ಮನೆ ಪಕ್ಕ ಬಂದು ಸ್ಕೆಚ್ ಹಾಕಿದ್ದ. ಯಾರು ಇಲ್ಲದ ಸಮಯಕ್ಕೆ ಹೊಂಚು ಹಾಕಿದ್ದ ಯುವಕ ತಕ್ಷಣ ಮನೆಯ ಒಳಗೆ ನುಗ್ಗಿದ್ದ. ಎದ್ದು ನಡೆಯಲು ಊರುಗೋಲಿನ ಸಹಾಯ ಬೇಕಿದ್ದ ವೃದ್ಧೆ ಮೇಲೆ ಯುವಕ ಮುಗಿಬಿದ್ದಿದ್ದಾನೆ. ಒಂದೆಡೆ ಆಘಾತ, ಮತ್ತೊಂದು ಮಾನಸಿಕವಾಗಿ ಕುಗ್ಗಿ ಹೋದ ವೃದ್ಧೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಆದರೆ ವೃದ್ಧೆಯನ್ನು ಬಾಯಿ ಮುಚ್ಚಿದ ಯುವಕ ಕೃತ್ಯ ಎಸಗಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಯಾವ ಸಮಾಜ ಎಂದು ಹಲವರು ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಪೋಷಕರು ಬುದ್ದಿ ಹೇಳಬೇಕು. ಸರಿಯಾದ ದಾರಿಯಲ್ಲಿ ನಡೆಯುವಂತೆ ಸೂಚಿಸಬೇಕು. ರೀತಿ ಬೆಳೆಸಬಾರದು ಅನ್ನೋ ವಾದವೂ ಹುಟ್ಟಿಕೊಂಡಿದೆ. ಮತ್ತೊಂದೆಡೆ ಈ ರೀತಿ ಪ್ರಕರಣಕ್ಕೆ ಕಡಿವಾಣ ಹಾಕಲು ಕಠಿಣ ನಿಯಮದ ಅವಶ್ಯಕತೆ ಇದೆ ಎಂದು ಆಗ್ರಹಿಸಿದ್ದಾರೆ.
ಅನೈತಿಕ ಚಟುವಟಿಕೆ ಆರೋಪ: ಮಂಗ್ಳೂರಿನ ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ದಾಳಿ
