ತಾಯಿಗೆ ಕೊರೋನಾ ಸೋಂಕು/ ನೊಂದ ಮಗ ಆತ್ಮಹತ್ಯೆಗೆ ಶರಣು/ ಆಸ್ಪತ್ರೆ ಟೆರೆಸ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಯುವಕ/ ಕೊರೋನಾದ ಒಂದೊಂದೇ ಕರಾಳ ಮುಖ

ಹಾಸನ (ಏ. 26) ಕೊರೋನಾ ದಿಂದ ತಾಯಿ ಸಾವು ಬದುಕಿನ ನಡುವೆ ಹೋರಾಟ ನೆಡೆಸುತ್ತಿದ್ದರೆ ನೊಂದ ಮಗ ಆಸ್ಪತ್ರೆಯ ಟೆರೆಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ, ವಾಟರ್ ಟ್ಯಾಂಕ್ ನ ಕಬ್ಬಿಣದ ಸರಳಿಗೆ ವೇಲ್ ನಿಂದ ನೇಣು ಹಾಕಿಕೊಂಡಿದ್ದಾನೆ.

ಹಾಸನದ ಹಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಶರತ್(30) ಆತ್ಮಹತ್ಯೆಗೆ ಶರಣಾದ ಯುವಕ. ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಮಾದ್ರೆ ಗ್ರಾಮದ ಯುವಕ ತಾಯಿಯನ್ನು ಚಿಕಿತ್ಸೆಗೆಂದು ದಾಖಲಿಸಿದ್ದ.

ಕರ್ನಾಟಕ ಲಾಕ್; ಏನಿರುತ್ತೆ? ಏನಿರಲ್ಲ? 

60 ವರ್ಷದ ತಾಯಿ ಕೊರೋನಾ ಪಾಸಿಟಿವ್ ಹಿನ್ನೆಲೆ ಮೂರು ದಿನಗಳಿಂದ ಅಡ್ಮಿಟ್ ಮಾಡಲಾಗಿತ್ತು. ಕೊರೋನಾ ಎರಡನೇ ಅಲೆ ಆರ್ಭಟಿಸುತ್ತಿದ್ದು ಕೊರೋನಾ ವಾರಿಯರ್ಸ್ ಗಳು ಸಹ ಚೀನಾ ವೈರಸ್ ಗೆ ಬಲಿಯಾಗುತ್ತಿದ್ದಾರೆ. 

ರಾಜ್ಯ ಸರ್ಕಾರ ಹದಿನಾಲ್ಕು ದಿನಗಳ ಕೊರೋನಾ ನಿಷೇಧಾಜ್ಞೆಗೆ ಸಿದ್ಧತೆ ಮಾಡಿಕೊಂಡಿದೆ. ಇನ್ನೊಂದು ಕಡೆ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಹಾದಿಯಲ್ಲೇ ಸಾಗಿದೆ.