Asianet Suvarna News Asianet Suvarna News

ಬೆಂಗಳೂರು;  ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಹತ್ಯೆಗೆ ತಾಯಿ ಸಾಥ್!

* ಅಕ್ರಮ ಸಂಬಂಧಕ್ಕೆ ಗೊತ್ತಾದ ಕಾರಣ ಯುವಕನ ಹತ್ಯೆಯಾಗಿದೆ
*  ಹಲಸೂರು ಠಾಣಾ ವ್ಯಾಪ್ತಿಯ ಮರ್ಫಿ ಟೌನ್ ನ ಪ್ರಕರಣ
* ಯುವಕನೊಂದಿಗೆ ತಾಯಿಯ ಅಕ್ರಮ ಸಂಬಂಧ ಮಗನಿಗೆ ಗೊತ್ತಾಗಿತ್ತು
* ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಾಯಿಯ ಪ್ರಿಯತಮನಿಂದ ಯುವಕನ ಹತ್ಯೆ

Mother Lover kills son as he objects to her relationship mah
Author
Bengaluru, First Published Oct 5, 2021, 9:16 PM IST
  • Facebook
  • Twitter
  • Whatsapp

ಬೆಂಗಳೂರು(ಅ. 05)   ಬೆಂಗಳೂರಿನಲ್ಲಿ ವಿಚಿತ್ರ  ಪ್ರಕರಣದಲ್ಲಿ ಒಂದು(Murder) ಕೊಲೆಯಾಗಿಹೋಗಿದೆ. ಅಕ್ರಮ ಸಂಬಂಧಕ್ಕೆ(Illicit Relationship) ಯುವಕ ಬಲಿಯಾಗಿದ್ದಾನೆ ಹಲಸೂರು ಠಾಣಾ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ‌ ನಡೆದ ಘಟನೆ ಬೆಳಕಿಗೆ ಬಂದಿದ್ದು ನಂದು (17) ಕೊಲೆಯಾಗಿದ್ದಾನೆ.

ನಂದು ತಾಯಿ ಗೀತಾ ಶಕ್ತಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.  ತಾಯಿ ಅಕ್ರಮ ಸಂಬಂಧಕ್ಕೆ ನಂದು ವಿರೋಧ ವ್ಯಕ್ತಪಡಿಸಿದ್ದ.  ತಾಯಿಯ ಅಕ್ರಮ ಸಂಬಂಧಕ್ಕೆ ಅಡ್ಡಲಾದ ಎಂಬ ಕಾರಣಕ್ಕೆ ಶಕ್ತಿ ನಂದುನ ಹತ್ಯೆ ಮಾಡಿದ್ದಾನೆ.

ಅಮ್ಮನ ಅನೈತಿಕ ಸಂಬಂಧವನ್ನೇ ಬಂಡವಾಳ ಮಾಡಿಕೊಂಡ ಕಿಲಾಡಿ ಲೇಡಿ

ಚಾಕುವಿನಿಂದ ಹೊಟ್ಟೆ, ಎದೆ ಭಾಗಕ್ಕೆ ಇರಿದಿದ್ದಾನೆ.  ಹಲಸೂರು ಠಾಣೆಯಲ್ಲಿ‌(Bengaluru Police) ಪ್ರಕರಣ ದಾಖಲಾಗಿದೆ.  ಸದ್ಯ ಹಲಸೂರು ಪೊಲೀಸರ ವಶದಲ್ಲಿ ಇಬ್ಬರು ಆರೋಪಿಗಳು ಇದ್ದಾರೆ. ಪ್ರಕರಣದ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ವಿರರಣೆ ನೀಡಿದ್ದಾರೆ.

6 ವರ್ಷದ ಹಿಂದೆಯೇ ಗಂಡ ಪರಮೇಶ್ವರ್ ನಿಂದ ಪತ್ನಿ ಗೀತಾ (35) ದೂರವಾಗಿದ್ದಳು. ಗೀತಾಗೆ ಫೇಸ್‌ಬುಕ್‌  ಶಕ್ತಿವೇಲ್ (24) ಪರಿಚಯವಾಗಿದ್ದ. ಶಕ್ತಿವೇಲ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಗೀತಾ ಮನೆಗೆಲಸ ಮಾಡಿಕೊಂಡಿದ್ಳು. ತಾಯಿ ಹಾಗೂ ಶಕ್ತಿ ನಡುವಿನ ಅನೈತಿಕ ಸಂಬಂಧನ್ನು ಪುತ್ರ ನಂದು (17) ವಿರೋಧಿಸುತ್ತಿದ್ದ. ಸೋಮವಾರಮನೆಯಲ್ಲೇ ಕೂತು ಗೀತಾ ಹಾಗೂ ಶಕ್ತಿವೇಲ್  ಮದ್ಯ ಸೇವನೆ ಮಾಡಿದ್ದರು.

ಮದ್ಯದ ಅಮಲಿನಲ್ಲಿ ನಂದು ಜೊತೆ ಕಿರಿಕ್ ತೆಗೆದಿದ್ದ ಶಕ್ತಿವೇಲ್ ಚಾಕುವಿನಿಂದ ನಂದುವಿಗೆ ಇರಿದಿದ್ದ. ಶಕ್ತಿವೇಲ್ ಕೃತ್ಯಕ್ಕೆ ನಂದು ತಾಯಿ ಗೀತಾ ಸಾಥ್ ನೀಡಿದ್ದಳಯ. ಸದ್ಯ ಕೊಲೆಯಾದ ನಂದು ತಂದೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಕ್ತಿವೇಲ್ ಹಾಗೂ ಗೀತಾಳನ್ನ ಬಂಧಿಸಲಾಗಿದೆ.

Follow Us:
Download App:
  • android
  • ios