ಮಂಗಳೂರಲ್ಲಿ ನೈತಿಕ ಪೊಲೀಸ್‌ಗಿರಿ: ಕೇರಳ ಮೂಲದ 6 ಮಂದಿಗೆ ಥಳಿತ
ಮಂಗಳೂರು ಸಮೀಪದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಗುರುವಾರ ಸಂಜೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ತಂಡವೊಂದು ದಾಳಿ ನಡೆಸಿದೆ.
ಉಳ್ಳಾಲ (ಜೂ.02): ಮಂಗಳೂರು ಸಮೀಪದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಗುರುವಾರ ಸಂಜೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ತಂಡವೊಂದು ದಾಳಿ ನಡೆಸಿದೆ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿಹಾರಕ್ಕೆಂದು ಬಂದಿದ್ದರು.
ಈ ಪೈಕಿ ಮೂವರು ವಿದ್ಯಾರ್ಥಿಗಳು, ಮೂವರು ವಿದ್ಯಾರ್ಥಿನಿಯರು. ಇವರು ಭಿನ್ನ ಕೋಮಿಗೆ ಸೇರಿದವರು ಎಂಬುದನ್ನು ಗಮನಿಸಿ, ತಂಡವೊಂದು ಇವರನ್ನು ಹಿಂಬಾಲಿಸಿತು. ಬಳಿಕ, ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭದಲ್ಲಿ ತಂಡ ದಾಳಿ ನಡೆಸಿದೆ. ಈ ಪೈಕಿ, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗಿದ್ದ ಮೂವರು ವಿದ್ಯಾರ್ಥಿನಿಯರು ವಾಪಸ್ ಊರಿಗೆ ತೆರಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಸೋಮೇಶ್ವರ ಸಮುದ್ರ ತೀರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಮುದ್ದಾದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ: ಕಾರಣವೇನು ಗೊತ್ತಾ?
ತಲೆಮರೆಸಿದ್ದ ಆರೋಪಿ ಮುಂಬೈನಲ್ಲಿ ಬಂಧನ: ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 5 ವರ್ಷಗಳಿಂದ ತಲೆಮರೆಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಅವರ ಮೂಲಕ ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಉಳಾಯಿಬೆಟ್ಟು ನಿವಾಸಿ ಮೊಹಮ್ಮದ್ ಅಜರುದ್ದೀನ್ ಯಾನೆ ಅಜರ್(30) ಬಂಧಿತ ಆರೋಪಿ.
ಈತನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣ 2018ರಲ್ಲಿ ದಾಖಲಾಗಿತ್ತು. ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿದ್ದ ಈತನ ವಿರುದ್ಧ ಪೊಲೀಸರು ಎಲ್‌ಸಿಸಿ ಹೊರಡಿಸಿದ್ದರು. ಮೇ 27ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಇಮಿಗ್ರೆಷನ್ ವಿಭಾಗವರು ಬಂಧಿಸಿ ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಗದು ವಂಚನೆ, ಪ್ರಮುಖ ಆರೋಪಿ ಬಂಧನ: ಸುಮಾರು 1.15 ಕೋಟಿ ರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದ ಆರೋಪಿ ಕದಂ ಎಂಬಾತನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನಕ್ಕಾಗಿ ಮಂಗಳೂರಿನಿಂದ ಮುಂಬೈಗೆ ತೆರಳಿದ್ದ ಸಿಸಿಬಿ ಪೊಲೀಸರ ತಂಡ ಮುಂಬೈ ಕ್ರೈಂ ಬ್ರಾಂಚ್ ಪೋಲಿಸರ ಸಹಾಯದಿಂದ ಬುಧವಾರ ಕದಂನನ್ನು ವಶಕ್ಕೆ ತೆಗೆದುಕೊಂಡಿದೆ.
9.91 ಲಕ್ಷ ವಿದ್ಯುತ್ ತೆರಿಗೆ ಬಾಕಿ ಉಳಿಸಿಕೊಂಡ ಪಂಚಾಯಿತಿ: ವಿದ್ಯುತ್ ಸಂಪರ್ಕ ಕಡಿತ
ಕಟ್ಟಡ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಷನ್ ನ ಆಡಳಿತ ನಿರ್ದೇಶಕ ರೋಹನ್ ಮತ್ತು ಹರ್ಷ ಫೈನಾನ್ಸ್ ಮಾಲೀಕ ಹರೀಶ್ ಎಂಬವರಿಗೆ 1.15 ಕೋಟಿ ರು.ಗಳನ್ನು ವಂಚಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಕದಂ ಮತ್ತು ಕಳತ್ತೂರು ವಿಶ್ವನಾಥ ಶೆಟ್ಟಿಇವರಿಬ್ಬರೂ ಸಂಚು ರೂಪಿಸಿ 300 ಕೋಟಿ ರು.ಸಾಲ ತೆಗೆಸಿ ಕೊಡುವ ಭರವಸೆ ನೀಡಿ ಈ ವಂಚನೆ ನಡೆಸಿದ್ದರು ಎಂದು ಪೊಲೀಸರು ದಾಖಲೆಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.