ಬೆಂಗಳೂರು: ಭಿಕ್ಷೆ ಬೇಡೋ ನೆಪದಲ್ಲಿ ದುಬಾರಿ ಫೋನ್‌ಗಳನ್ನು ಎಗರಿಸುತ್ತಿದ್ದ ಖತರ್ನಾಕ್ 'ಲೇಡಿ ಗ್ಯಾಂಗ್ ಅರೆಸ್ಟ್ !

ನಗರದ ಐಟಿಬಿಟಿ ಏರಿಯಾಗಳಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‌ನ್ನು ಪತ್ತೆ ಹಚ್ಚಿ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

Mobile phone theft case; Five interstate thieves arrested at Bengaluru rav

ಬೆಂಗಳೂರು (ಫೆ.16): ನಗರದ ಐಟಿಬಿಟಿ ಏರಿಯಾಗಳಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್‌ನ್ನು ಪತ್ತೆ ಹಚ್ಚಿ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ರಾಧಾ, ನಂದಿನಿ, ಸುಜಾತ,ಶಂಕ್ರಮ್ಮ, ಶಾಂತಮ್ಮ ಬಂಧಿತ ಆರೋಪಿಗಳು. ಹೊಸಕೋಟೆಯ ಚೊಕ್ಕಹಳ್ಳಿ ಬಳಿ ಟೆಂಟ್ ಹಾಕೊಂಡು ವಾಸ ಮಾಡ್ತಿದ್ದ ಗ್ಯಾಂಗ್. ಬಂಧಿತರಿಂದ ಮೂವತ್ತು ಲಕ್ಷ ಮೌಲ್ಯದ 120 ಮೊಬೈಲ್ ಫೋನ್‌ಗಳನ್ನ ಜಪ್ತಿ ಮಾಡಿದ ಪೊಲೀಸರು.

 

ಬೆಂಗಳೂರು: ಮೊಬೈಲ್‌ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!

ಹೊಸಕೋಟೆಯ ಚೊಕ್ಕನಹಳ್ಳಿಯಿಂದ ವೈಟ್‌ಫಿಲ್ಟ್‌ಗೆ ಬಸ್‌ನಲ್ಲಿ ಬರುತ್ತಿದ್ದ ಆರೋಪಿಗಳು. ಜನಜಂಗುಳಿ ಇರುವ ಸ್ಥಳ ಸಮಯ ನೋಡಿಕೊಂಡು ಫಿಲ್ಡಿಗಿಳಿಯುತ್ತಿದ್ದ ಗ್ಯಾಂಗ್. ಐಟಿಬಿಟಿ ಏರಿಯಾಗಳಲ್ಲಿ ಓಡಾಡೋ ಮಂದಿ ಬಳಸುವ ಮೊಬೈಲ್ ಗಳು ದುಬಾರಿ ಬೆಲೆಯ ಐಫೋನ್‌ಗಳು ಎಂಬುದು ತಿಳಿದುಕೊಂಡಿದ್ದ ಗ್ಯಾಂಗ್. ಹೀಗಾಗಿ ಐಟಿ ಉದ್ಯೋಗಿಗಳು ಬಸ್‌ನಲ್ಲಿ ಓಡಾಡುವ ಸಮಯಕ್ಕೆ ಭಿಕ್ಷೆ ಬೇಡುತ್ತಾ ಫೀಲ್ಡ್‌ಗಿಳಿಯುತ್ತಿದ್ದ ಐನಾತಿ ಮಹಿಳೆಯರು.


ಬಸ್ ನಿಲ್ದಾಣದಲ್ಲಿ ಅಮಾಯಕರಂತೆ ಭಿಕ್ಷೆ ಬೇಡುತ್ತಾ ಮೊಬೈಲ್ ಬಳಕೆ ಮಾಡೋರ ಮೇಲೆ ನಿಗಾ ಇಡುತ್ತಿದ್ದ ಆರೋಪಿಗಳು. ಬಳಿಕ ರಶ್ ಆಗಿರೋ ಬಸ್ ನೋಡಿ ಗುಂಪಿನಲ್ಲಿ ತೂರಾಡಿ ಬಸ್ ಹತ್ತಿಕೊಳ್ಳೋದು ಹತ್ತಿಕೊಳ್ಳುವಾಗಲೇ ಜನರ ಅರಿವಿಗೆ ಬಾರದಂತೆ ಜೈಬಿಗೆ ಕೈಹಾಕಿ ಎಗರಿಸುತ್ತಿದ್ದ ಗ್ಯಾಂಗ್. ಮೊಬೈಲ್ ಎಗರಿಸಿದ ತಕ್ಷಣವೇ ಇಬ್ಬರು ಮಹಿಳೆಯರು ಕೈ ಬದಲಿಸಿಕೊಂಡು ಕದ್ದ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಅವುಗಳನ್ನು ಸಿಲ್ವರ್ ಪೇಪರ್‌ನಲ್ಲಿ ಹಾಕಿ ಪ್ಯಾಕ್ ಮಾಡಿಕೊಂಡು ಎಸ್ಕೇಪ್. ಹೀಗೆ ದಿನವೊಂದಕ್ಕೆ ಐದಾರು ದುಬಾರಿ ಮೊಬೈಲ್ ಕದಿಯುತ್ತಿದ್ದ ಗ್ಯಾಂಗ್! ಅಂದರೆ ಲಕ್ಷಾಂತರ ಬೆಲೆ ಬಾಳುವ ಐಫೋನ್, ಸ್ಯಾಮ್‌ಸಂಗ್ ಮೊಬೈಲ್ ಕಳ್ಳತನ ಮಾಡಿ ಹೊಸಕೋಟೆ ಬಳಿಯ ಟೆಂಟ್‌ಗೆ ಮರಳುತ್ತಿದ್ದ ಆರೋಪಿಗಳು ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಮಹಿಳೆಯರು. 

ಸಂತೆಯಲ್ಲಿ ಮೊಬೈಲ್‌ಗಳೇ ಮಾಯ: ಕಂಗಾಲಾದ ಜನತೆ..!

ಕೆಲವು ದಿನಗಳಲ್ಲಿಂದ ಏರಿಯಾಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಮೀತಿಮೀರಿತ್ತು. ಹಲವುಸಲ ದೂರಗಳು ಬಂದ ಹಿನ್ನೆಲೆ ಖದೀಮರ ಪತ್ತೆ ಹಚ್ಚಲು ಫೀಲ್ಡ್‌ಗಿಳಿದಿದ್ದ ಮಹದೇವಪುರ ಪೊಲೀಸರು. ಕೊನೆಗೂ ಖತರ್ನಾಕ್ ಲೇಡಿ ಗ್ಯಾಂಗ್ ಬಲೆಗೆ ಕೆಡವುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಐದು ಮಂದಿ ಖತರ್ನಾಕ್ ಲೇಡೀಸ್ ಬಂಧಿಸಲಾಗಿದ್ದು, ಬೇರೆ ಬೇರೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. 

ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Latest Videos
Follow Us:
Download App:
  • android
  • ios