ಚೆನ್ನೈ(ಅ. 05)  ಈತ ಪಕ್ಕಾ ಕ್ರಿಮಿನಲ್ ಅಳಿಯ. ಅತ್ತೆ ಮೇಲೆಯೇ ಅತ್ಯಾಚಾರ ಮಾಡಿದ್ದಾನೆ.  ಅತ್ಯಾಚಾರ ಮಾಡಿದ ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ್ದಾನೆ

ತಮಿಳುನಾಡಿನಿಂದ ಈ ಪ್ರಕರಣ ವರದಿಯಾಗಿದೆ.  50 ವರ್ಷದ ವಿಧವೆ ಅತ್ತೆ ಮೇಲೆ  39 ವರ್ಷದ ಅಳಿಯ ರೇಪ್ ಮಾಡಿದ್ದಾನೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಗ್ರಾಮದಲ್ಲಿರುವ ನಿವಾಸದಲ್ಲಿ ಘಟನೆ ನಡೆದಿದೆ.

ಉತ್ತರ ಪ್ರದೇಶದ ಅಂಕಿ ಅಂಶ ಕಂಡರೆ ದೇಶವೇ ಭಯ ಬೀಳಬೇಕು

ಅತ್ಯಾಚಾರಕ್ಕೊಳಗಾದ ನಂತರ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಹತ್ತಿರದಲ್ಲೇ ವಾಸವಿದ್ದ ಅಳಿಯ  ಮನೆಗೆ ಬಂದಿದ್ದು ಅತ್ಯಾಚಾರ ಎಸಗಿದ್ದಾನೆ. ಆಸ್ಪತ್ರೆಯವರು ಮಾಹಿತಿ ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮ್ಮ ಮೇಲೆ ರೇಪ್ ಕೇಸ್ ದಾಖಲಾಗಿದ್ದು ಪೊಲೀಸ್ ತನಿಖೆ ಎದುರಿಸಬೇಕು, ಜೈಲು ಸೇರಬೇಕಾಗುತ್ತದೆ ಎಂದು ಅಳಿಯ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಆದರೆ ಅಕ್ಕಪಕ್ಕದವರು ಈತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.