Maharashtra: ಮಕ್ಕಳ ಕಳ್ಳರೆಂದು ತಪ್ಪು ತಿಳಿದು 4 ಸಾಧುಗಳನ್ನು ಬರ್ಬರವಾಗಿ ಥಳಿಸಿದ ಗ್ರಾಮಸ್ಥರು

ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದು ತಿಳಿದು ಗ್ರಾಮಸ್ಥರು ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಘಟನೆ ಸಂಬಂಧ ಸಾಧುಗಳು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. 

 mistaken for thieves villagers brutally thrash four sadhus in sangli district maharashtra ash

ನಾಲ್ವರು ಸಾಧುಗಳನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಲವಾಂಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಲು ಉತ್ತರ ಪ್ರದೇಶದಿಂದ (Uttar Pradesh) ಬಂದ ನಾಲ್ವರು ಸಾಧುಗಳನ್ನು ಅಲ್ಲಿನ ಗ್ರಾಮಸ್ಥರು ಥಳಿಸಿದ್ದಾರೆ. ಮಕ್ಕಳನ್ನು ಅಪಹರಿಸಲು ಬಂದಿರುವ ಕಳ್ಳರು (Child Kidnappers) ಎಂದು ಗ್ರಾಮಸ್ಥರು ಭಾವಿಸಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ (Viral Video) ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಸನ್ಯಾಸಿಗಳು ಮಥುರಾದಿಂದ ಬಂದಿದ್ದರು ಮತ್ತು ಪಂಢರಪುರದ ದೇವಸ್ಥಾನ ಸೇರಿ ಸಾಂಗ್ಲಿ ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು.  ಈ ಹಿನ್ನೆಲೆ ಸನ್ಯಾಸಿಗಳು ರಾತ್ರಿ ಆ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ, ಸನ್ಯಾಸಿಗಳು ಗ್ರಾಮದಿಂದ ಹೊರಡುವಾಗ, ಅವರು ಸಹಾಯಕ್ಕಾಗಿ ಒಬ್ಬ ಹುಡುಗನನ್ನು ಕೇಳಿದರು ಎಂದು ಹೇಳಲಾಗಿದೆ. 

ಮೂಲಗಳ ಪ್ರಕಾರ, ಸಾಧುಗಳು ಹುಡುಗನಿಂದ ಮಾರ್ಗದ ದಿಕ್ಕಿನ ಬಗ್ಗೆ ಕೇಳುತ್ತಿದ್ದರು. ಈ ಮಧ್ಯೆ, ಅವರ ಗುರುತನ್ನು ತಪ್ಪಾಗಿ ಅರ್ಥೈಸಿಕೊಂಡ ಗ್ರಾಮಸ್ಥರು ವಾಗ್ವಾದವನ್ನು ಪ್ರಾರಂಭಿಸಿದರು ಮತ್ತು ನಂತರ ಅವರನ್ನು ದೊಣ್ಣೆಗಳಿಂದ ಥಳಿಸಿದ್ದಾರೆ. ಗಲಾಟೆಯ ನಂತರ ಅವರ ಗುರುತು ಪತ್ತೆಯಾಯಿತು ಮತ್ತು ಸತ್ಯ ಬಹಿರಂಗವಾಯಿತು ಎಂದೂ ತಿಳಿದುಬಂದಿದೆ. ಸನ್ಯಾಸಿಗಳು ಗ್ರಾಮಕ್ಕೆ ಭೇಟಿ ನೀಡುವ ತಮ್ಮ ಪ್ರಮುಖ ಉದ್ದೇಶದ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು ಮತ್ತು ಇದನ್ನು ಸಾಬೀತು ಮಾಡಲು ತಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದರು. ನಂತರ ಸಂಪೂರ್ಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ಅಹಿತಕರ ಘಟನೆಯನ್ನು ತಡೆದಿದ್ದಾರೆ. ಸಾಧುಗಳು ನಿಜವಾಗಿಯೂ ಉತ್ತರ ಪ್ರದೇಶದ `ಅಖಾಡಾ' ಸದಸ್ಯರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಧುಗಳ ಹತ್ಯೆ ಪ್ರಕರಣ; ಕೊನೆಗೂ ಮಹಾರಾಷ್ಟ್ರ ಪೊಲೀಸರ ಕ್ರಮ

ಆದರೂ, ಆರೋಪಿತ ಗ್ರಾಮಸ್ಥರ ವಿರುದ್ಧ ಸನ್ಯಾಸಿಗಳು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ ಎಂಬುದು ಗಮನಾರ್ಹ. ಪೊಲೀಸರ ಪ್ರಕಾರ, ತಪ್ಪು ತಿಳುವಳಿಕೆಯಿಂದ ಘಟನೆ ಸಂಭವಿಸಿದೆ ಮತ್ತು ನಿರ್ದಿಷ್ಟ ಕಾರಣಗಳಿಗಾಗಿ ಯಾರನ್ನೂ ಗುರಿಯಾಗಿಸುವ ಉದ್ದೇಶವಿಲ್ಲ ಎಂದು ಸಾಧುಗಳು ಹೇಳಿದ್ದಾರೆ. ಅಗತ್ಯ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ಈ ವಿಷಯವನ್ನು ಇತ್ಯರ್ಥಗೊಳಿಸಲಾಯಿತು ಎಂದೂ ತಿಳಿದುಬಂದಿದೆ.

ಕಳೆದ ತಿಂಗಳು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೇವಾಲಯದ ಕಾಣಿಕೆ ಹಂಚಿಕೆ ವಿಚಾರವಾಗಿ ಎರಡು ಗುಂಪಿನ ಸಾಧುಗಳ ನಡುವೆ ಘರ್ಷಣೆ ನಡೆದಿತ್ತು. ಅಯೋಧ್ಯೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನರಸಿಂಗ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದಂತಹ ಶಬ್ದಗಳು ಕೇಳಿಬಂದಾಗ ಕೆಲ ಕ್ಷಣ ಜನರು ಭಯಭೀತರಾಗಿದ್ದರು. ಪೊಲೀಸರ ಪ್ರಕಾರ, ದೇವಾಲಯದ ಮಹಂತ್ ಮತ್ತು ಅದರ ಅರ್ಚಕರ ನಡುವೆ ಕೆಲವು ತಿಂಗಳ ಹಿಂದೆ ಪ್ರಾರಂಭವಾದ ಸಮಸ್ಯೆಯ ಬಗ್ಗೆ ಜಗಳ ಪ್ರಾರಂಭವಾಯಿತು.

ಸಾಧುಗಳನ್ನು ಬಡಿದು ಕೊಂದರು

"ಕಾಣಿಕೆಗಳು ಮತ್ತು ಆದಾಯಕ್ಕಾಗಿ ದೇವಾಲಯದ ಮಾಲೀಕತ್ವ ಮತ್ತು ಸ್ವಾಧೀನದ ಬಗ್ಗೆ ವಿವಾದವಿತ್ತು. ನಾವು ಘರ್ಷಣೆಯಲ್ಲಿ ಭಾಗಿಯಾಗಿರುವ ಎರಡೂ ಕಡೆಯವರನ್ನು ಬಂಧಿಸಿದ್ದೇವೆ" ಎಂದು ಸರ್ಕಲ್ ಆಫೀಸರ್ ರಾಜೇಶ್ ತಿವಾರಿ ತಿಳಿಸಿದ್ದಾರೆ. ಆದರೆ, ಗಲಾಟೆಯ ಸಮಯದಲ್ಲಿ ಯಾವುದೇ ಬಾಂಬ್‌ಗಳು ಸ್ಫೋಟಗೊಂಡಿಲ್ಲ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ಸ್ಪಷ್ಟನೆ ನೀಡಿದ್ದರು. ಹಾಗೂ, ಜನರಲ್ಲಿ ಭೀತಿ ಸೃಷ್ಟಿಸಲು ಕೆಲವು ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದರು.

Latest Videos
Follow Us:
Download App:
  • android
  • ios