*  ತುಮಕೂರು ಹೆದ್ದಾರಿಯಲ್ಲಿ ಘಟನೆ*  ಆರೋಪಿಗಳ ಪತ್ತೆಗೆ 3 ತಂಡ ರಚನೆ*  ಹಣದ ಸಮೇತ ಕಾರನ್ನು ತೆಗೆದುಕೊಂಡು ಪರಾರಿ 

ಬೆಂಗಳೂರು(ಮಾ.12): ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಕಾರು ಸಹಿತ .1 ಕೋಟಿ ರು. ನಗದು ದೋಚಿ(Robbery) ಪರಾರಿ ಆಗಿರುವ ಘಟನೆ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ತಮಿಳುನಾಡು(Tamil Nadu) ಮೂಲದ ಜೋಸೆಫ್‌ ಹಣ ಕಳೆದುಕೊಂಡವರು. ಜೋಸೆಫ್‌ ಹಾಗೂ ಮಹಾರಾಷ್ಟ್ರ ಮೂಲದ ಯೋಗೇಶ್‌ ಪಾಲುಗಾರಿಕೆಯಲ್ಲಿ ಚಿನ್ನದ ವ್ಯವಹಾರ(Gold Business) ನಡೆಸುತ್ತಿದ್ದರು. ಹುಬ್ಬಳ್ಳಿ(Hubballi) ಇವರ ವ್ಯಾಪಾರದ ಕೇಂದ್ರಸ್ಥಾನವಾಗಿದೆ. ಯೋಗೇಶ್‌ ಮತ್ತು ಜೋಸೆಫ್‌ 2.5 ಕೆ.ಜಿ. ಚಿನ್ನದ ಗಟ್ಟಿಗಳನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಿದ್ದು, ಸುಮಾರು 1 ಕೋಟಿಯಷ್ಟು ನಗದನ್ನು ಜೋಸೆಫ್‌ ಕನ್ಯಾಕುಮಾರಿಯ ನಾಗರ್‌ಕೋಯಲ್ಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಜೋಸೆಫ್‌ ಸ್ನೇಹಿತರಾದ ದಿನೇಶ್‌, ಪ್ರಾಂಕ್ಲಿನ್‌, ಮಣಿಕಂಠನ್‌, ಸತ್ಯವೇಲು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ಬೆಂಗಳೂರು 'ತೀಟೆ ತಾತ'!

ಜೋಸೆಫ್‌ ಸ್ನೇಹಿತರೊಂದಿಗೆ ತಮಿಳುನಾಡಿನತ್ತ ತೆರಳುತ್ತಿದ್ದರು. ಈ ವೇಳೆ ಮಾದಾವರದ ನಾಡ್ಗೀರ್‌ ಕಾಲೇಜು ಬಳಿಯ ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿ, ಇನ್ನೋವಾ ಕಾರಿನಲ್ಲಿ ಬಂದ 7-8 ಜನರ ತಂಡ ಕಾರನ್ನು ಅಡ್ಡಗಟ್ಟಿದೆ. ಈ ವೇಳೆ ಏಕಾಏಕಿ ದೊಡ್ಡೆ, ಕಬ್ಬಿಣದ ರಾಡ್‌ನಿಂದ ಕಾರಿನ ಕಿಟಕಿಗಳ ಗಾಜು ಒಡೆದು ಚಾಲಕ ಸೇರಿದಂತೆ ಕಾರಿನಲ್ಲಿದ್ದವರ ಮೇಲೆ ಹಲ್ಲೆ(Assault) ನಡೆಸಿ, ಅವರನ್ನೆಲ್ಲಾ ಕೆಳಗೆ ಇಳಿಸಿದ್ದಾರೆ. ಕೂಡಲೇ ಹಣದ ಸಮೇತ ಕಾರನ್ನು ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂದು ಪೊಲೀಸ್‌(Police) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದ ಮಾದನಾಯಕಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಐಟಿ ಅಧಿಕಾರಿಗಳ ಸೋಗಿನ​ಲ್ಲಿ 25 ಲಕ್ಷ, 1 ಕೆಜಿ ಬಂಗಾರ ​ದ​ರೋ​ಡೆ

ಕೋಲಾರ: ಆದಾಯ ತೆರಿಗೆ(Income Tax) ಅಧಿ​ಕಾ​ರಿ​ಗ​ಳೆಂದು ಹೇಳಿ​ಕೊಂಡು ಎಪಿ​ಎಂಸಿ ಮಾಜಿ ಅಧ್ಯ​ಕ್ಷರೊಬ್ಬರ ಮನೆಗೆ ಪ್ರವೇ​ಶಿಸಿ ನಂತರ, ಬಂದೂಕು ತೋರಿಸಿ 25 ಲಕ್ಷ ಮೌಲ್ಯದ ನಗದು(Money), ಬಂಗಾ​ರ(Gold) ದೋಚಿ ಖದೀ​ಮರು ಪರಾ​ರಿ​ಯಾ​ದ ಘಟನೆ ಫೆ.28 ರಂದು ನಗ​ರ​ದಲ್ಲಿ ನಡೆ​ದಿ​ತ್ತು.

ಬೈರೇಗೌಡ ನಗರದ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್‌ ಎಂಬುವವರ ಮನೆಗೆ ರಾತ್ರಿ ಸುಮಾರು 9 ಗಂಟೆ ಸುಮಾ​ರಿಗೆ ಹಿಂದಿ(Hindi) ಭಾಷೆ ಮಾತನಾಡುತ್ತಿದ್ದ ಐವರು ಏಕಾ​ಏಕಿ ಪ್ರವೇ​ಶಿ​ಸಿ​ದ್ದಾರೆ. ತಾವು ಆದಾಯ ತೆರಿಗೆ(IT) ಅಧಿಕಾರಿಗಳೆಂದು ನಕಲಿ ಕಾರ್ಡ್‌ಗಳನ್ನು ಈ ವೇಳೆ ಅವರು ತೋರಿಸಿದ್ದರು. ನಂತರ ಐದೂ ಮಂದಿ ಮಷಿ​ನ್‌​ಗನ್‌ ತೋರಿಸಿ ಮನೆಯಲ್ಲಿದ್ದ ರಮೇಶ್‌ ದಂಪತಿ ಮತ್ತು ಮಕ್ಕಳನ್ನು ಒಂದು ಕಡೆ ಕೂಡಿ ಹಾಕಿ ಹಣ ಮತ್ತು ಬಂಗಾರದೊಂದಿಗೆ ಪರಾ​ರಿ​ಯಾ​ಗಿ​ದ್ದರು. 

Bengaluru: ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್‌

ಆರೋಪಿಗಳು(Accused) ಪರಾರಿಯಾದ ತಕ್ಷಣ ಮನೆ​ಯ​ಲ್ಲಿ​ದ್ದ​ವರು ಕಿರುಚಿಕೊಂಡ ಹಿನ್ನೆ​ಲೆ​ಯ​ಲ್ಲಿ ಸುತ್ತಮುತ್ತಲ ಮನೆಯವರು ನೆರ​ವಿಗೆ ಬಂದು, ತಕ್ಷಣ ಪೊಲೀಸರಿಗೆ(Police) ಮಾಹಿತಿ ನೀಡಿದ್ದರು. ಸ್ಥಳಕ್ಕೆ ಎಸ್ಪಿ ದೇವರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಗೋಡೆ ಕೊರೆದು 1 ಕೇಜಿ ಚಿನ್ನ ದೋಚಿ ಪರಾರಿ

ಬೆಂಗಳೂರು: ಗೋಡೆ ಕೊರೆದು ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿ 1 ಕೇಜಿ ಬಂಗಾರ ದೋಚಿ ದುಷ್ಕರ್ಮಿಗಳು(Miscreants) ಪರಾರಿಯಾಗಿರುವ ಘಟನೆ ಸಾರಾಯಿಪಾಳ್ಯದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಫೆ.23 ರಂದು ನಡೆದಿತ್ತು. ಥಣಿಸಂದ್ರ ಮುಖ್ಯರಸ್ತೆಯ ರಾಘವೇಂದ್ರ ಜ್ಯುವೆಲ​ರ್ಸ್‌ ಮತ್ತು ಬಾಲಾಜಿ ಬ್ಯಾಂಕ​ರ್ಸ್‌ ಮಳಿಗೆಯಲ್ಲೇ ಮಂಗಳವಾರ ರಾತ್ರಿ 2ರ ಸುಮಾರಿಗೆ ದರೋಡೆ ನಡೆದಿದ್ದು, ಅಂಗಡಿ ಬಾಗಿಲು ತೆರೆಯಲು ಬುಧವಾರ ಬೆಳಗ್ಗೆ ಸಿಬ್ಬಂದಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.