ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು.
ಬೆಂಗಳೂರು(ಮೇ.17): ಹಳೆ ದ್ವೇಷದ ಹಿನ್ನಲೆಯಲ್ಲಿ ಯುವಕನೊಬ್ಬನಿಗೆ ನಡು ರಸ್ತೆಯಲ್ಲೇ ಕಾರ್ ಅಡ್ಡಗಟ್ಟಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಖಿಲ್@ ಹೇಮಾದ್ರಿ ಎಂಬಾತನ ಮೇಲೆ ಹಲ್ಲೆ ರೋನಿತ್ ಹಾಗೂ ದುರ್ಗಾ ಸೇರಿದಂತೆ ಐದು ಜನರಿಂದ ಹಲ್ಲೆ ಮಾಡಿದೆ.
ಕಾರನ್ನ ಫಾಲೋ ಮಾಡಿಕೊಂಡು ಬಂದು ನಡು ರಸ್ತೆಯಲ್ಲೇ ಅಖಿಲ್ ಮೇಲೆ ಹಲ್ಲೆ ಮಾಡಿದ್ದಾರೆ. ಕಾರು ಬಿಸಿನೆಸ್ ವಿಚಾರದಲ್ಲಿ ಆರೋಪಿ ರೋನಿತ್ ವಂಚನೆ ಮಾಡಿದ್ದನಂತೆ. ಈ ಹಿನ್ನಲೆಯಲ್ಲಿ ಅಖಿಲ್ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ದೂರಿನ ಸಂಬಂಧ ರೋನಿತ್ ಬಂಧಿತನಾಗಿದ್ದ. ನಂತರ ಜಾಮೀನು ಪಡೆದು ಹೊರ ಬಂದಿದ್ದನು.
Bengaluru: ಪತ್ನಿ ಶೋಕಿಗೆ ಹಣ ಹೊಂದಿಸಲಾಗದೇ, ಮಕ್ಕಳ ಸಮೇತ ತಂದೆಯೂ ಆತ್ಮಹತ್ಯೆ!
ಜಾಮೀನಿನ ಮೇಲೆ ಹೊರಬಂದು ಪದೇ ಪದೇ ಅಖಿಳ್‌ಗೆ ಬೆದರಿಕೆ ಹಾಕ್ತಿದ್ದನಂತೆ. ಇದೇ ದ್ವೇಷದಿಂದ ರೋನಿತ್ ಸಮಯಕ್ಕಾಗಿ ಕಾಯುತ್ತಿದ್ದನಂತೆ. ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ರೋನಿತ್ ಟೀಂ ಫಾಲೋ ಮಾಡಿಕೊಂಡು ಬಂದಿತ್ತು. ಎಲ್ ಆ್ಯಂಡ್ ಟಿ ಅಪಾರ್ಟ್ಮೆಂಟ್ ಬಳಿ ಬರುತ್ತಿದ್ದಂತೆ ರೋನಿತ್ ಟೀಂ ಅಡ್ಡ ಹಾಕಿಕಾರಿನಲ್ಲಿರುವಾಗಲೇ ಅಖಿಲ್ ಮೇಲೆ ಹಲ್ಲೆ ನಡೆಸಿ ಕಾರಿನ ಗ್ಲಾಸ್ ಒಡೆದು ಹಾಕಿದ್ದರು.
ಹಲ್ಲೆ ನಡೆಸಿ ರೋನಿತ್ ಟೀಂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಮಾಡಿದ ಪೈಕಿ ದುರ್ಗಾ ಲೇಡಿ ಡಾನ್ ಅಂತೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
